ETV Bharat / international

ಟರ್ಕಿಯ ರುಮೆಸಾ ಗೆಲ್ಗಿ ವಿಶ್ವದ ಅತಿ ಎತ್ತರದ ಮಹಿಳೆ! ಇವರ ಹೈಟು ಗೊತ್ತೇ?

author img

By

Published : Apr 16, 2023, 8:29 PM IST

ಟರ್ಕಿಯ ರುಮೆಸಾ ಗೆಲ್ಗಿ ಸುಮಾರು 7 ಅಡಿ 7 ಇಂಚು ಎತ್ತರ ಹೊಂದಿದ್ದು, ವಿಶ್ವದ ಅತಿ ಎತ್ತರದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟರ್ಕಿಯ ರುಮೆಸಾ ಗೆಲ್ಗಿ
ಟರ್ಕಿಯ ರುಮೆಸಾ ಗೆಲ್ಗಿ

ಟರ್ಕಿಯ ರುಮೆಸಾ ಗೆಲ್ಗಿ ವಿಶ್ವದ ಅತಿ ಎತ್ತರದ ಮಹಿಳೆ ಎಂಬ ಖ್ಯಾತಿ ಗಳಿಸಿದ್ದಾರೆ. ಈ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಸೇರಿದ್ದಾರೆ. ಅಪರೂಪದ ಕಾಯಿಲೆಗೆ ತುತ್ತಾಗಿರುವ ಈಕೆ ಬದುಕಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.

ವರ್ಷದ ರುಮೇಸಾ ಗೆಲ್ಗಿ(24) ಟರ್ಕಿಯ ಸಫ್ರಾನ್ಬೋಲು ಜಿಲ್ಲೆಯಲ್ಲಿ ಜನಿಸಿದರು. ಇವರ ದೇಹದ ಎತ್ತರ 7 ಅಡಿ 0.7 ಇಂಚು. ಎತ್ತರದ ಮಹಿಳೆ ಮಾತ್ರವಲ್ಲ, ದೊಡ್ಡ ಕೈಗಳು, ಉದ್ದವಾದ ಬೆರಳುಗಳು ಮತ್ತು ಉದ್ದವಾದ ಬೆನ್ನೆಲುಬು ಹೊಂದಿರುವ ಇವರ ಹೆಸರಿನಲ್ಲಿ 5 ವಿಶ್ವ ದಾಖಲೆಗಳಿವೆ. ಸಾಕಷ್ಟು ಕಷ್ಟನಷ್ಟಗಳನ್ನು ಎದುರಿಸುತ್ತಿದ್ದರೂ ವಿದ್ಯಾಭ್ಯಾಸದಲ್ಲಿ ಪ್ರತಿಭಾವಂತೆ. ಹೀಗಾಗಿ ಉತ್ತಮ ಉದ್ಯೋಗದಲ್ಲಿದ್ದು ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.

ವೀವರ್ಸ್ ಸಿಂಡ್ರೋಮ್​: ರುಮೇಸಾ ನಾಲ್ಕು ತಿಂಗಳ ಮಗುವಾಗಿದ್ದಾಗ ಇವರಿಗೆ ವೀವರ್ಸ್ ಸಿಂಡ್ರೋಮ್ ಇರುವುದು ಪತ್ತೆಯಾಗಿತ್ತು. ಇದು ಆನುವಂಶಿಕ ಸಮಸ್ಯೆ. ಇದರರ್ಥ ಮೂಳೆಗಳ ಅಗಾಧ ಬೆಳವಣಿಗೆ. ವೀವರ್ಸ್ ಸಿಂಡ್ರೋಮ್‌ನಿಂದಾಗಿ ರುಮೇಸಾ 6 ವರ್ಷ ವಯಸ್ಸಿನವಳಾಗಿದ್ದಾಗಲೇ 5 ಅಡಿ 8 ಇಂಚು ಎತ್ತರಕ್ಕೆ ಬೆಳೆದಿದ್ದಳು. ವಿಶ್ವಾದ್ಯಂತ ಕೇವಲ 50 ಜನರು ಮಾತ್ರ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಪರೂಪದ ಕಾಯಿಲೆಯಿಂದಾಗಿ ರುಮೇಸಾ ಬದುಕುವುದಕ್ಕಾಗಿ ನಿರಂತರವಾಗಿ ಹೋರಾಡಬೇಕಾಗಿದೆ. ಹೃದಯದ ಕಾರ್ಯಚಟುವಟಿಕೆಯಲ್ಲಿ ತೊಂದರೆ ಕಂಡುಬರುತ್ತಿದೆ. ಇವರು ಎತ್ತರವಿರುವ ಕಾರಣ ಬೆನ್ನುಮೂಳೆಯೂ ಒಂದು ಬದಿಗೆ ಬಾಗುತ್ತದೆ. ನಡೆದಾಡಲೂ ಕಷ್ಟವಾಗಿದೆ. ವೈದ್ಯರು ದೇಹದ ಕೆಲವು ಸ್ಥಳಗಳಲ್ಲಿ ರಾಡ್ ಮತ್ತು ಸ್ಕ್ರೂಗಳನ್ನು ಅಳವಡಿಸಿದ್ದಾರೆ. ಪರಿಣಾಮ ರುಮೇಸಾ ಮನೆಯಲ್ಲಿಯೇ ಶಿಕ್ಷಣ ಪಡೆದಿದ್ದಾರೆ. ಹಾಗಾಗಿ ಆಕೆಯ ಬಾಲ್ಯ ಎಲ್ಲರಂತಿರಲಿಲ್ಲ. ಕನಿಷ್ಠ ಸ್ನೇಹಿತರೊಂದಿಗೆ ಆಟವಾಡಲು ಸಾಧ್ಯವಾಗಿಲ್ಲ. ಆದರೆ, ರುಮೇಸಾ ತನ್ನ ಮುದ್ದು ಮಾತುಗಳಿಂದ ಅನೇಕ ಸ್ನೇಹಿತರನ್ನು ಸಂಪಾದಿಸಿ, ಅವರೊಂದಿಗೆ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದಳಂತೆ.

ವೆಬ್ ಡೆವಲಪರ್ ಕೆಲಸ ಪಡೆದ ರುಮೇಸಾ: ರುಮೇಸಾ ತನ್ನ ಜೀವನದುದ್ದಕ್ಕೂ ಕಷ್ಟಗಳನ್ನು ಎದುರಿಸುತ್ತಿದ್ದರೂ ಅಧ್ಯಯನವನ್ನು ನಿರ್ಲಕ್ಷಿಸಲಿಲ್ಲ. ಹಾಗಾಗಿ, ಈಕೆಗೆ ಕ್ಯಾಲಿಫೋರ್ನಿಯಾದಲ್ಲಿ ವೆಬ್ ಡೆವಲಪರ್ ಆಗಿ ಕೆಲಸ ಸಿಕ್ಕಿದೆ. ದೈನಂದಿನ ಚಟುವಟಿಕೆಗಳು ಮತ್ತು ಪ್ರವಾಸಗಳ ವಿವರಗಳನ್ನು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಹಲವಾರು ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಇವರು ಸ್ಫೂರ್ತಿಯ ಚಿಲುಮೆ.!

ಇದನ್ನೂ ಓದಿ : ಹವಾಮಾನ ವೈಪರೀತ್ಯ: ಸಾಮೂಹಿಕ ಆಂದೋಲನಕ್ಕೆ ಪ್ರಧಾನಿ ಮೋದಿ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.