ETV Bharat / international

ಟರ್ಕಿ, ಸಿರಿಯಾ ಭೂಕಂಪದಲ್ಲಿ 24 ಸಾವಿರ ಸಾವು: 8ರ ಬಾಲಕಿ ರಕ್ಷಿಸಿದ ಭಾರತದ ತಂಡ

ಟರ್ಕಿ ಸಿರಿಯಾದಲ್ಲಿ ಭೀಕರ ಭೂಕಂಪನ- ಸಾವಿನ ಸಂಖ್ಯೆ ಏರಿಕೆ- ಭಾರತದ ರಕ್ಷಣಾ ಪಡೆಯಿಂದ ಬಾಲಕಿ ರಕ್ಷಣೆ- ಸಾವಿರಾರು ಜನರಿಗೆ ಆಹಾರದ ಕೊರತೆ- ಅವಶೇಷಗಳಡಿ ಸಿಲುಕಿದ ಜನರ ರಕ್ಷಣೆ

Turkey Syria earthquake
ಟರ್ಕಿ, ಸಿರಿಯಾ ಭೂಕಂಪ
author img

By

Published : Feb 11, 2023, 10:53 AM IST

ಇಸ್ತಾಂಬುಲ್​(ಟರ್ಕಿ): ಪ್ರಬಲ ಭೂಕಂಪನಕ್ಕೆ ತುತ್ತಾಗಿರುವ ಟರ್ಕಿ, ಸಿರಿಯಾ ಮರಣದ ಮನೆಯಾದಂತಾಗಿದೆ. ದಿನವೂ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, 24 ಸಾವಿರ ತಲುಪಿದೆ. ಅವಶೇಷಗಳಡಿ ಸಿಲುಕಿದ ಹಲವು ಮಕ್ಕಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅಲ್ಲದೇ, ಬದುಕುಳಿದ ಜನರು ಮೂಲಸೌಕರ್ಯ, ಊಟವಿಲ್ಲದೇ ಪರದಾಡುತ್ತಿದ್ದಾರೆ.

ದಶಕಗಳಲ್ಲೇ ಕಂಡುಕೇಳರಿಯದ ಭೂಕಂಪನದಿಂದ ದಕ್ಷಿಣ ಟರ್ಕಿ ಮತ್ತು ವಾಯುವ್ಯ ಸಿರಿಯಾ ಭಾರೀ ಹಾನಿಗೀಡಾಗಿವೆ. ಗಾಜಿಯಾಂಟೆಪ್​ನಲ್ಲಿ 7.8 ತೀವ್ರತೆಯ ಭೂಕಂಪನದ ಬಳಿಕ ಹಲವಾರು ನಗರಗಳು ಧ್ವಂಸವಾಗಿವೆ. ಯುದ್ಧಪೀಡಿತ ಸಿರಿಯಾದಲ್ಲೂ ಕಂಪನ ತೀವ್ರ ಹಾನಿಯುಂಟು ಮಾಡಿದೆ. ಟರ್ಕಿಯೊಂದರಲ್ಲೇ 20 ಸಾವಿರ ಜನರು ಅಸುನೀಗಿ, 80 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸಿರಿಯಾದಲ್ಲಿ 4 ಸಾವಿರ ಸಾವಾಗಿವೆ.

ಉಭಯ ದೇಶಗಳಲ್ಲಿ ಪ್ರಕೃತಿ ವಿಕೋಪದಿಂದ ನಿರಾಶ್ರಿತರಾದವರ ಲೆಕ್ಕ ಸಿಕ್ಕಿಲ್ಲ. ಆಗಾಗ ಭೂಮಿ ನಡುಗುತ್ತಿರುವ ಕಾರಣ ಜನರು ಮನೆಗಳಲ್ಲಿ ವಾಸ ಮಾಡಲು ಹೆದರಿದ್ದಾರೆ. ಹೀಗಾಗಿ ಜನರು ರಸ್ತೆಗೆ ಬಂದಿದ್ದು, ಆಹಾರದ ಕೊರತೆ ಉಂಟಾಗಿದೆ. ಟರ್ಕಿಯಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಮನೆಗಳು ಧರಾಶಾಹಿಯಾಗಿವೆ ಎಂದು ಅಂದಾಜಿಸಲಾಗಿದೆ.

ವಿಧಿಯನ್ನೇ ಗೆದ್ದು ಬಂದರು: 5 ದಿನಗಳ ಹಿಂದೆ ಸಂಭವಿಸಿದ ದುರಂತದಲ್ಲಿ 101 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ 6 ಜನರನ್ನು ರಕ್ಷಣಾ ಪಡೆಗಳು ಜೀವಂತವಾಗಿ ಹೊರತೆಗೆದಿವೆ. ಆಹಾರ, ನೀರು ಇಲ್ಲದೇ ಜನರು ಜೀವ ಹಿಡಿದುಕೊಂಡಿದ್ದರು. ಅವಶೇಷಗಳಡಿ ಇನ್ನೂ ಸಾಕಷ್ಟು ಜನರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ದೊಡ್ಡ ದೊಡ್ಡ ಕಟ್ಟಡಗಳ ಅವಶೇಷಗಳಡಿ ಸಿಲುಕಿದವರನ್ನು ಹೊರತೆಗೆಯಲು ಅಸಾಧ್ಯವಾದ ಕಾರಣ ಮತ್ತು 5 ದಿನಗಳು ಕಳೆದಿದ್ದು ಬದುಕುಳಿದಿರುವ ಸಾಧ್ಯತೆ ಕಡಿಮೆಯಾಗಿದೆ.

ಭೀಕರ ದುರಂತದಲ್ಲಿ 24 ಸಾವಿರ ಜನರು ಸಾವನ್ನಪ್ಪಿದ ಕಾರಣ ಸ್ಮಶಾನಗಳು ತುಂಬಿ ಹೋಗಿವೆ. ಹೀಗಾಗಿ ಹಲವೆಡೆ ಮೃತದೇಹಗಳನ್ನು ಹೊದಿಕೆಯಲ್ಲಿ ಸುತ್ತಿಟ್ಟಿದ್ದ ದೃಶ್ಯಗಳು ಕಂಡುಬರುತ್ತಿವೆ. ಈ ಮಧ್ಯೆ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು, ರಕ್ಷಣಾ ಕಾರ್ಯಾಚರಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನಾಹುತದ ಬಳಿಕ ಕ್ಷಿಪ್ರಗತಿಯಲ್ಲಿ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಹಾನಿಗೀಡಾದ ಅಡಿಯಾಮಾನ್ ಪ್ರಾಂತ್ಯಕ್ಕೆ ಭೇಟಿ ನೀಡಿದ ಅವರು, ಸರ್ಕಾರ ತಕ್ಷಣ ಕಾರ್ಯಾಚರಣೆ ಕೈಗೊಳ್ಳದೇ ವೇಗ ಪಡೆಯದಿರುವುದನ್ನು ಒಪ್ಪಿಕೊಂಡರು. ವಿಶ್ವದ ಅತಿದೊಡ್ಡ ರಕ್ಷಣಾ ಪಡೆಯನ್ನು ಹೊಂದಿದ್ದರೂ, ಅಗತ್ಯವಿದ್ದಷ್ಟು ವೇಗವಾಗಿ ಕೆಲಸ ಮಾಡಿಲ್ಲ ಎಂಬುದು ವಾಸ್ತವವಾಗಿದೆ ಎಂದು ಹೇಳಿದ್ದರು.

ಚುನಾವಣೆ ಮುಂದೂಡಿಕೆ?: ಇದೇ ಮೇ ಅಂತ್ಯಕ್ಕೆ ಸರ್ಕಾರದ ಅವಧಿ ಮುಕ್ತಾಯವಾಗಲಿದೆ. ಮೇ 14 ಕ್ಕೆ ಚುನಾವಣೆ ಘೋಷಣೆ ಮಾಡಲಾಗಿತ್ತು. ಆದರೆ, ಪ್ರಳಯದಂತೆ ಬಂದೆರಗಿದ ಭೂಕಂಪನದಿಂದ ಜನರು ನಲುಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಬೇಕಿದೆ. ಹೀಗಾಗಿ ಚುನಾವಣೆಯನ್ನು ಮುಂದೂಡಲಾಗುತ್ತದೆ ಎಂದು ತಿಳಿದುಬಂದಿದೆ. ಪ್ರತಿಪಕ್ಷಗಳು ಸರ್ಕಾರ ವಿಳಂಬ ಧೋರಣೆಯನ್ನು ತೀವ್ರವಾಗಿ ಟೀಕಿಸುತ್ತಿವೆ.

ಸಾವಿರಾರು ಜನರಿಗೆ ಆಹಾರದ ಕೊರತೆ: ಭೂಕಂಪನದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದು ಒಂದೆಡೆಯಾದರೆ, ಬದುಕುಳಿದವರು ನೀರು, ಆಹಾರದ ಕೊರತೆ ಎದುರಿಸುವಂತಾಗಿದೆ. ಜನರು ಪ್ರಾಣಾಪಾಯದಿಂದ ಪಾರಾಗಲು ಮನೆಗಳಿಗೆ ತೆರಳದೇ ರಸ್ತೆಯಲ್ಲೇ ಜೀವನ ನಡೆಸುತ್ತಿದ್ದಾರೆ. ಇದು ಸಾಂಕ್ರಾಮಿಕ ರೋಗ ಮತ್ತು ಮೂಲಸೌಕರ್ಯಗಳ ತೀವ್ರ ಕೊರತೆಗೆ ಕಾರಣವಾಗಿದೆ.

ಟರ್ಕಿ ಮತ್ತು ಸಿರಿಯಾದಾದ್ಯಂತ ಕನಿಷ್ಠ 8,70,000 ಜನರಿಗೆ ಆಹಾರದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಸಿರಿಯಾದಲ್ಲೇ ಸುಮಾರು 5.3 ಮಿಲಿಯನ್ ಜನರು ನಿರಾಶ್ರಿತರಾಗಿದ್ದಾರೆ. ಯುದ್ಧಪೀಡಿತ ಪ್ರದೇಶವಾದ ದೇಶದಲ್ಲಿ ಈಗಾಗಲೇ ಜನರು ನಲುಗಿದ್ದಾರೆ. ಈಗ ಭೂಕಂಪನ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ ಎಂದು ಹೇಳಿದೆ.

  • #WATCH | India's NDRF & Turkish Army rescue an 8-year-old girl who was stuck alive under rubble of a building flattened by the massive earthquake in Nurdagi, Gaziantep in Turkey.

    So far 24,000 people are dead in Turkey & Syria earthquakes that led to devastation.

    (Source: NDRF) pic.twitter.com/6NNAAAzKml

    — ANI (@ANI) February 11, 2023 " class="align-text-top noRightClick twitterSection" data=" ">

ಬಾಲಕಿಯ ರಕ್ಷಿಸಿದ ಭಾರತ ತಂಡ: ಟರ್ಕಿಯ ನುರ್ದಾಗಿ ಎಂಬಲ್ಲಿ ಅವಶೇಷಗಳಡಿ ಸಿಲುಕಿದ 8 ವರ್ಷದ ಬಾಲಕಿಯನ್ನು ಭಾರತದ ಎನ್​ಡಿಆರ್​ಎಫ್​ ತಂಡ ಜೀವಂತವಾಗಿ ರಕ್ಷಣೆ ಮಾಡಿದೆ. ಇದಕ್ಕೂ ಮೊದಲು ಗುರುವಾರ 6 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿತ್ತು. ಹಲವಾರು ಮೃತದೇಹಗಳನ್ನು ಅವಶೇಷಗಳಿಂದ ಭಾರತ ತಂಡಗಳು ಹೊರತೆಗೆದಿವೆ.

ಓದಿ: ಹಗಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ರಾತ್ರಿ ವೇಳೆ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಧರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.