ETV Bharat / international

ಗಾಯಗೊಂಡು ಹಳಿಗಳ ಮಧ್ಯೆ ಸಿಲುಕಿದ್ದ ಆಮೆ.. ಒಂದೂವರೆ ಗಂಟೆ ರೈಲು ಸಂಚಾರ ಸ್ತಬ್ಧ

ಗಾಯಗೊಂಡು ಹಳಿಗಳ ಮಧ್ಯೆ ಸಿಲುಕಿದ್ದ ದೊಡ್ಡ ಆಮೆಗಾಗಿ ರೈಲು ಸಂಚಾರವನ್ನು ಒಂದೂವರೆ ಗಂಟೆಗಳ ಕಾಲ ನಿಲ್ಲಿಸಿದ ಅಪರೂಪದ ಘಟನೆ ಲಂಡನ್​ನಲ್ಲಿ ನಡೆದಿದೆ.

train-movement-stop-for-injured-turtle
ರೈಲು ಸಂಚಾರ ಸ್ಥಬ್ಧ
author img

By

Published : Aug 2, 2022, 11:55 AM IST

ಲಂಡನ್​: ಹಳಿಗಳ ಮಧ್ಯೆ ಸಿಲುಕಿದ್ದ ಆಮೆಗಾಗಿ ಲಂಡನ್​ನಲ್ಲಿ ರೈಲು ಸಂಚಾರವನ್ನೇ ತಡೆಯಲಾಗಿದೆ. ದೊಡ್ಡ ಆಮೆಯೊಂದು ಗಾಯಗೊಂಡು ರೈಲ್ವೆ ಹಳಿಗಳ ಮಧ್ಯೆ ಕಾಣಿಸಿಕೊಂಡಿದೆ. ಇದನ್ನು ಕಂಡ ಪ್ರಯಾಣಿಕರೊಬ್ಬರು ಅದರ ಚಿತ್ರ ತೆಗೆದು ರೈಲ್ವೆ ಇಲಾಖೆಗೆ ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ್ದರು.

ಇದನ್ನು ಗಮಿನಿಸಿದ ರೈಲ್ವೆ ಇಲಾಖೆ, ನಾರ್ವಿಚ್ ನಗರ ಮತ್ತು ಸ್ಟಾನ್‌ಸ್ಟೆಡ್ ವಿಮಾನ ನಿಲ್ದಾಣದ ನಡುವೆ ರೈಲುಗಳನ್ನು ಒಂದು ಗಂಟೆಗೂ ಅಧಿಕ ಕಾಲ ನಿಲ್ಲಿಸಿದೆ. ಈ ಬಗ್ಗೆ ಅಧಿಕೃತವಾಗಿ ಟ್ವಿಟರ್​ನಲ್ಲಿ ಪ್ರಕಟಿಸಿದೆ.

ಬಳಿಕ ವೈದ್ಯಕೀಯ ಸಿಬ್ಬಂದಿಯನ್ನು ಆಮೆ ಕಂಡು ಬಂದ ಸ್ಥಳಕ್ಕೆ ಕಳುಹಿಸಲಾಗಿದೆ. ಆಮೆಯ ಚಿಪ್ಪಿನ ಮೇಲ್ಭಾಗದಲ್ಲಿ ಗಾಯಗೊಂಡಿತ್ತು. ಬಳಿಕ ಅದನ್ನು ಅಲ್ಲಿಂದ ಕರೆದೊಯ್ದು ಚಿಕಿತ್ಸಾ ತಂಡಕ್ಕೆ ನೀಡಲಾಗಿದ್ದು, ಶುಶ್ರೂಷೆ ನಡೆಸಲಾಗುತ್ತಿದೆ.

"ದೈತ್ಯಾಕಾರದ ಆಮೆಯಿಂದಾಗಿ ರೈಲು ವಿಳಂಬವಾಯಿತು. ಎತ್ತಲು ತುಂಬಾ ಭಾರವಾಗಿತ್ತು. ಸ್ಥಳೀಯ ವನ್ಯಜೀವಿ ಕೇಂದ್ರದಿಂದ ತಪ್ಪಿಸಿಕೊಂಡು ಬಂದ ಅದು ರೈಲು ಹಳಿಗಳ ಮೇಲೆ ಸಿಕ್ಕಿಹಾಕಿಕೊಂಡಿದೆ. ಅಲ್ಲದೇ ಅದು ಗಾಯಗೊಂಡಿತ್ತು ಎಂದು ಇನ್ನೊಬ್ಬ ಪ್ರಯಾಣಿಕರು ಟ್ವೀಟ್​ ಮಾಡಿದ್ದಾರೆ. ನಾರ್ವಿಚ್ ನಗರ ಮತ್ತು ಸ್ಟಾನ್‌ಸ್ಟೆಡ್ ವಿಮಾನ ನಿಲ್ದಾಣದ ಸಂಚಾರವನ್ನು ಸುಮಾರು ಒಂದೂವರೆ ಗಂಟೆಗಳ ನಂತರ ಪುನಃ ಆರಂಭಿಸಲಾಗಿದೆ.

ಓದಿ: ಎಚ್ಚರ.. ಸಿಎಂ ಪ್ರೊಫೈಲ್ ಫೋಟೊ ಹಾಕಿ ವಂಚಿಸುತ್ತಿದ್ದಾರೆ ಸೈಬರ್ ಕಳ್ಳರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.