ಇಂಗ್ಲೆಂಡ್: ಬ್ರಿಟನ್-ಭಾರತ ಯುವ ವೃತ್ತಿಪರರ ಯೋಜನೆಯಡಿ ಭಾರತೀಯರಿಗೆ ವಿಶೇಷ ವೀಸಾ ನೀಡುವ ಎರಡನೇ ಪ್ರಕ್ರಿಯೆ ಮಂಗಳವಾರ (25/07/2023) ಆರಂಭವಾಗಿದ್ದು ಜುಲೈ 27ರ (ಇಂದು) ಮಧ್ಯಾಹ್ನ 1.30ಕ್ಕೆ ಮುಕ್ತಾಯವಾಗಲಿದೆ. ವೀಸಾ ನೀಡುವ ಎರಡನೇ ಹಂತವನ್ನು ಬ್ರಿಟನ್ ತೆರೆದಿದ್ದು, ಈ ಕುರಿತು ನವದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ಕಚೇರಿ ಟ್ವೀಟ್ ಮಾಡಿದೆ. 18 ರಿಂದ 30 ವರ್ಷದೊಳಗಿನ ಭಾರತೀಯ ಪ್ರಜೆಯು ಪದವೀಧರ ಅಥವಾ ಸ್ನಾತಕೋತ್ತರ ಪದವಿ ಅರ್ಹತೆ ಹೊಂದಿರುವ ಭಾರತೀಯ ಯುವ ವೃತ್ತಿಪರರ ಯೋಜನೆ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ಈ ವೀಸಾದ ಮೂಲಕ, ಇಂಗ್ಲೆಂಡ್ನಲ್ಲಿ ಎರಡು ವರ್ಷಗಳ ಕಾಲ ವಾಸಿಸಲು, ಉದ್ಯೋಗ ಹೊಂದಲು ಅಥವಾ ಅಧ್ಯಯನ ಕೈಗೊಳ್ಳಲು ಭಾರತೀಯರಿಗೆ ಅವಕಾಶ ಸಿಗಲಿದೆ. ಯುಕೆ ಮತ್ತು ಭಾರತದ ನಡುವಿನ ಜಂಟಿ ಯೋಜನೆಯನ್ನು ಈ ವರ್ಷದ ಫೆಬ್ರವರಿಯಲ್ಲಿ ಔಪಚಾರಿಕವಾಗಿ ಪ್ರಾರಂಭಿಸಲಾಯಿತು.
-
🗳️ The ballot of the Young Professionals Scheme closes in less than 24 hours.
— UK in India🇬🇧🇮🇳 (@UKinIndia) July 26, 2023 " class="align-text-top noRightClick twitterSection" data="
Want to live, work or study in 🇬🇧 for up to 2 years? You can enter the ballot for a chance to apply for a visa.
Check the eligibility criteria and steps to apply: https://t.co/dqLoJo1Zke#IndiaYPS pic.twitter.com/EK0eon7uN3
">🗳️ The ballot of the Young Professionals Scheme closes in less than 24 hours.
— UK in India🇬🇧🇮🇳 (@UKinIndia) July 26, 2023
Want to live, work or study in 🇬🇧 for up to 2 years? You can enter the ballot for a chance to apply for a visa.
Check the eligibility criteria and steps to apply: https://t.co/dqLoJo1Zke#IndiaYPS pic.twitter.com/EK0eon7uN3🗳️ The ballot of the Young Professionals Scheme closes in less than 24 hours.
— UK in India🇬🇧🇮🇳 (@UKinIndia) July 26, 2023
Want to live, work or study in 🇬🇧 for up to 2 years? You can enter the ballot for a chance to apply for a visa.
Check the eligibility criteria and steps to apply: https://t.co/dqLoJo1Zke#IndiaYPS pic.twitter.com/EK0eon7uN3
ಇದಕ್ಕೂ ಮೊದಲು 2022 ನವೆಂಬರ್ನಲ್ಲಿ ಇಂಡೊನೇಷ್ಯಾದಲ್ಲಿ ನಡೆದಿದ್ದ ಜಿ 20 ಶೃಂಗಸಭೆಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದರು. ಒಪ್ಪಂದದ ಪ್ರಕಾರ, ಬ್ರಿಟಿಷ್ ಪ್ರಜೆಗಳಿಗೂ ಕೂಡ ಭಾರತದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಇದೇ ರೀತಿಯ ವೀಸಾಗಳನ್ನು ನೀಡಲಾಗುತ್ತದೆ.
ಬ್ರಿಟನ್ ಇಂಡೋ ಫೆಸಿಫಿಕ್ ಪ್ರದೇಶದ ಇತರ ರಾಷ್ಟ್ರಗಳಿಗಿಂತ ಭಾರತದೊಂದಿಗೆ ಹೆಚ್ಚು ಸಂಪರ್ಕಿತದಲ್ಲಿದೆ. ಬ್ರಿಟನ್ನಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಕಾಲು ಭಾಗದಷ್ಟು ಜನ ಭಾರತೀಯರು. ಬ್ರಿಟನ್ ಬೆಂಬಲಿತ 95 ಸಾವಿರ ಉದ್ಯೋಗದಲ್ಲಿ ಭಾರತೀಯರ ಬಂಡವಾಳವೂ ಹೆಚ್ಚಿದೆ.
ಇದನ್ನೂ ಓದಿ: ಭಾರತೀಯರಿಗೆ 3000 ವೀಸಾ ನೀಡಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಸಿರು ನಿಶಾನೆ
ಭಾರತದ ಅಮೆರಿಕ ರಾ. ಕಚೇರಿಯಲ್ಲಿ 28ವರೆಗೆ ಗ್ರಾಹಕರ ಸೇವಾ ಕೇಂದ್ರ ಸ್ಥಗಿತ: ಭಾರತದಲ್ಲಿನ ಅಮೆರಿಕ ರಾಯಭಾರಿ ಕಚೇರಿ ತನ್ನ ಗ್ರಾಹಕ ಸೇವಾ ಕೇಂದ್ರವನ್ನು ನವೀಕರಿಸುತ್ತಿದ್ದು, ಜುಲೈ 25ರಿಂದ 28 ರವರೆಗೆ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ಬಗ್ಗೆ ಗ್ರಾಹಕರು ಗಮನ ಹರಿಸಿ ಎಂದು ಟ್ವೀಟ್ ಮೂಲಕ ತಿಳಿಸಿದೆ. ಅಮೆರಿಕಕ್ಕೆ ಹೋಗಬಯಸುವ ಪ್ರಯಾಣಿಕರು ವೀಸಾ ಬಯಸಿ ಅಮೆರಿಕ ದೂತವಾಸಕ್ಕೆ ಕರೆ, ಅರ್ಜಿ ಸಲ್ಲಿಕೆ, ಹಣ ಪಾವತಿ ಮಾಡ ಬಯಸಿದಲ್ಲಿ ಸೂಚಿತ ದಿನಗಳಂದು ಸೇವೆ ಇರುವುದಿಲ್ಲ. ತಮ್ಮ ಗ್ರಾಹಕ ಸೇವೆಯನ್ನು ಹೊಸ ಪ್ಲಾಟ್ಫಾರ್ಮ್ಗೆ ಬದಲಿಸಲು ಉದ್ದೇಶಿರುವ ಕಾರಣ ಸೇವೆ ಇರುವುದಿಲ್ಲ ಎಂದು ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮತ್ತು ಅಮೆರಿಕ ದೂತವಾಸ ಟ್ವೀಟ್ ಮೂಲಕ ತಿಳಿಸಿತ್ತು.
ವೀಸಾಕ್ಕಾಗಿ ಇಲ್ಲಿ ಭೇಟಿ ನೀಡಿ: ಗ್ರಾಹಕರ ಸೇವಾ ಕೇಂದ್ರವನ್ನು ಬದಲಿಸಿದ ಬಳಿಕ ಜುಲೈ 29ರಿಂದ ಸೇವೆ ಆರಂಭವಾಗಲಿದ್ದು, ಬಳಿಕ ವೀಸಾ ಅರ್ಜಿದಾರರು ಅಮೆರಿಕ ರಾಯಭಾರಿ ಕಚೇರಿಯ ಗ್ರಾಹಕ ಸೇವೆಗಾಗಿ ಹೊಸ ಇ-ಮೇಲ್ support-India@usvisascheduling.com ಅಥವಾ ಅರ್ಜಿಗಳಿಗಾಗಿ USTravelDocs ವೆಬ್ಸೈಟ್ ಸಂಪರ್ಕಿಸಿ.
ಇದನ್ನೂ ಓದಿ: ವೀಸಾ ಅರ್ಜಿದಾರರೇ ಗಮನಿಸಿ..ಅಮೆರಿಕ ರಾಯಭಾರಿ ಕಚೇರಿ ಗ್ರಾಹಕ ಕೇಂದ್ರ ನವೀಕರಣ, ಜುಲೈ 25 ರಿಂದ 4 ದಿನ ಸೇವೆ ಇರಲ್ಲ