ವಾಷಿಂಗ್ಟನ್ : ಮಕ್ಕಳು ವಿದ್ಯಾಭ್ಯಾಸಕ್ಕಾಗಿ ವೇಳಾಪಟ್ಟಿಯನ್ನು ರಚಿಸಿಕೊಂಡಿರುತ್ತಾರೆ. ಕಚೇರಿ ಸಿಬ್ಬಂದಿಗೆ ಕೆಲಸದ ಅವಧಿಯನ್ನು ಶಿಫ್ಟ್ ಮಾದರಿಯಲ್ಲಿ ರೂಪಿಸಲಾಗಿರುತ್ತದೆ. ಆದರೆ, ಇಲ್ಲೊಬ್ಬ ತನ್ನ 9 ಪತ್ನಿಯರ ಜೊತೆಗೆ ಸಮಯ ಕಳೆಯಲು ಟೈಮ್ಟೇಬಲ್' ರೆಡಿ ಮಾಡಿಕೊಂಡು ಸುದ್ದಿಯಾಗಿದ್ದಾನೆ.
ಬ್ರೆಜಿಲ್ನ ಮಾಡೆಲ್ ಆರ್ಥರ್ ಒ ಉರ್ಸೊ ಎಂಬಾತನೇ ಈ 'ವಿಶೇಷ ವೇಳಾಪಟ್ಟಿ'ಯ ಕರ್ತೃ. ಮಾಡೆಲ್ ಆಗಿರುವ ಆರ್ಥರ್ 9 ಮಹಿಳೆಯರನ್ನು ವಿವಾಹವಾಗಿದ್ದಾನಂತೆ. ತನ್ನ ಇಷ್ಟೂ ಸಂಗಾತಿಗಳೊಂದಿಗೆ ಸುಖಮಯ ದಾಂಪತ್ಯ ಮುಂದುವರಿಸಲು ವಿಭಿನ್ನವಾಗಿ ಯೋಚಿಸಿದ್ದಾನೆ. ಅಲ್ಲದೇ ತನ್ನ ಸಂಗಾತಿಗಳ ಆಸೆಯನ್ನು ಪೂರೈಸಲು ಇನ್ನಿಲ್ಲದಂತೆ ಹೆಣಗಾಡುತ್ತಿದ್ದನಂತೆ. ಈ ವೇಳೆ ಹೊಳೆದಿದ್ದೇ 'ವೇಳಾಪಟ್ಟಿ'ಯ ಐಡಿಯಾ.
ಆರ್ಥರ್ ಮೊದಮೊದಲು ತನ್ನೆಲ್ಲಾ ಸಂಗಾತಿಗಳನ್ನು ಸಮಾನವಾಗಿ ತೃಪ್ತಿಪಡಿಸಲು ಹೆಣಗಾಡುತ್ತಿದ್ದನಂತೆ. ಇದರಿಂದಾಗಿ ರೊಟೇಷನ್ ಮಾದರಿಯಲ್ಲಿ ಪ್ರತಿಯೊಬ್ಬ ಹೆಂಡತಿಯ ವೈಯಕ್ತಿಕ ಅಗತ್ಯತೆಗಳನ್ನು ಪೂರೈಸಲು ಮುಂದಾದ. ನನ್ನ ಪತ್ನಿಯರು ನನ್ನ ಆಸಕ್ತಿಯನ್ನು ಪೂರೈಸಲು ಏನು ಬೇಕಾದರೂ ಮಾಡುತ್ತಾರೆ ಎಂದು ಆರ್ಥರ್ ಹೇಳಿಕೊಂಡಿದ್ದಾನೆ.
ಟೈಮ್ಟೇಬಲ್ನಿಂದ ಒತ್ತಡ: ಬಳಿಕ ಆರ್ಥರ್ ಈ ವೇಳಾಪಟ್ಟಿಯಿಂದ ಸಂತುಷ್ಟನಾಗಲಿಲ್ಲ. ರಚನಾತ್ಮಕ ಮತ್ತು ಒತ್ತಡದ ಕಾರಣಕ್ಕಾಗಿ ಇದನ್ನು ಪಾಲಿಸಲಾಗುತ್ತಿದೆ ಎಂದೆನಿಸಿ, ಈ ಪದ್ಧತಿಯನ್ನು ಕೈಬಿಟ್ಟನಂತೆ. ವೇಳಾಪಟ್ಟಿಯನ್ನು ಅನುಸರಿಸುವುದು ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡಿತು. ಕೆಲವೊಮ್ಮೆ ನಾನು ವೇಳಾಪಟ್ಟಿಯ ಕಾರಣಕ್ಕಾಗಿ ತನಗೆ ಇಷ್ಟವಿಲ್ಲದಿದ್ದರೂ ತನ್ನ ಸಂಗಾತಿಯ ಜೊತೆಗೆ ಲೈಂಗಿಕತೆಯಲ್ಲಿ ತೊಡಗಬೇಕಾಯಿತು. ಇದರಿಂದ ತನಗೆ ಸಂತೋಷ ಉಂಟಾಗುತ್ತಿರಲಿಲ್ಲ. ಒಬ್ಬಾಕೆಯ ಜೊತೆಗಿದ್ದಾಗ ಇನ್ನೊಬ್ಬಳ ಬಗ್ಗೆ ಯೋಚಿಸಬೇಕಾಗಿತ್ತು ಎಂದು ಆರ್ಥರ್ ಹೇಳಿಕೊಂಡಿದ್ದಾನೆ.
ಬಹಳಷ್ಟು ಸವಾಲುಗಳನ್ನು ಎದುರಿಸಿದ ನಂತರ ಆರ್ಥರ್ ಸೆಕ್ಸ್ ರೋಟೇಷನ್ ಪದ್ಧತಿಯನ್ನು ತ್ಯಜಿಸಲು ನಿರ್ಧರಿಸಿದನಂತೆ. ಇದು ಸ್ವಾಭಾವಿಕವಾಗಿ ನಡೆಯಬೇಕಾದ ಕ್ರಿಯೆಯಾದ ಕಾರಣ ಟೈಮ್ಟೇಬಲ್ ಅನ್ನು ಕೈಬಿಟ್ಟೆ ಎಂದಿದ್ದಾನೆ. ಆರ್ಥರ್, ಲುವಾನಾ ಕಝಕಿ ಎಂಬಾಕೆಯನ್ನು ಮೊದಲು ಮದುವೆಯಾಗಿದ್ದ.
ಕಳೆದ ವರ್ಷವಷ್ಟೇ 8 ಮಹಿಳೆಯರೊಂದಿಗೆ 'ಮುಕ್ತ ಪ್ರೀತಿಯನ್ನು ಆಚರಿಸಲು' ಮತ್ತು ಏಕಪತ್ನಿತ್ವದ ವಿರುದ್ಧ ಪ್ರತಿಭಟನೆಯ ರೂಪದಲ್ಲಿ ಈ ಹಾದಿಯನ್ನು ಕಂಡುಕೊಂಡಿದ್ದಾನಂತೆ. 9 ಸಂಗಾತಿಗಳಲ್ಲಿ ಒಬ್ಬಾಕೆ ಆರ್ಥರ್ನನ್ನು ಪ್ರತ್ಯೇಕವಾಗಿ ಹೊಂದಲು ಬಯಸಿದ್ದು, ಆಕೆ ವಿಚ್ಚೇದನವನ್ನು ನೀಡಲು ಮುಂದಾಗಿದ್ದಾಳೆ ಎಂದು ಆರ್ಥರ್ ತಿಳಿಸಿದ್ದಾನೆ.
ಇದನ್ನೂನ ಓದಿ: 9 ಪತ್ನಿಯರ ಮುದ್ದಿನ ಗಂಡ ಈ ಬ್ರೆಜಿಲ್ ಮಾಡೆಲ್!! 10ನೇದವಳನ್ನು ವರಿಸುವ ಮುನ್ನ ಬಂದ್ಲು 'ಆಗಾಥಾ'