ETV Bharat / international

ಅಮೆರಿಕದ ಲಾಸ್​ವೇಗಾಸ್​ ವಿವಿಯಲ್ಲಿ ಶೂಟೌಟ್​: ಮೂವರ ಸಾವು, ಒಬ್ಬರ ಸ್ಥಿತಿ ಗಂಭೀರ

author img

By ANI

Published : Dec 7, 2023, 10:19 AM IST

ಅಮೆರಿಕದ ಲಾಸ್​ವೇಗಾಸ್​ ವಿವಿಯಲ್ಲಿ ಶೂಟೌಟ್​ ನಡೆದಿದೆ. ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಇದು ವಿದ್ಯಾರ್ಥಿಗಳ ನಡುವಿನ ಮಾರಾಮಾರಿ ಎಂದು ಶಂಕಿಸಲಾಗಿದೆ.

ಅಮೆರಿಕದ ಲಾಸ್​ವೇಗಾಸ್​ ವಿವಿಯಲ್ಲಿ ಶೂಟೌಟ್
ಅಮೆರಿಕದ ಲಾಸ್​ವೇಗಾಸ್​ ವಿವಿಯಲ್ಲಿ ಶೂಟೌಟ್

ಲಾಸ್ ವೇಗಾಸ್ (ಅಮೆರಿಕ): ಅಮೆರಿಕದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದೆ. ಲಾಸ್​ ವೇಗಾಸ್​ನ ನೆವಾಡಾ ವಿಶ್ವವಿದ್ಯಾಲಯದಲ್ಲಿ ಅಪರಿಚಿತ ವ್ಯಕ್ತಿ ನಡೆಸಿದ ದಾಳಿಯಲ್ಲಿ ಮೂವರು ಸಾವನ್ನಪ್ಪಿ, ಒಬ್ಬ ಗಂಭೀರ ಗಾಯಗೊಂಡಿದ್ದಾನೆ. ಪ್ರತಿದಾಳಿಯಲ್ಲಿ ಆಗಂತುಕನು ಕೂಡ ಹತ್ಯೆಯಾಗಿದ್ದಾನೆ.

ಬುಧವಾರ 44 ಗಂಟೆ ಸುಮಾರಿನಲ್ಲಿ ವಿವಿ ಕ್ಯಾಂಪಸ್​ನಲ್ಲಿ ಬಂದೂಕುಧಾರಿ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಇದರಿಂದ ಸ್ಥಳದಲ್ಲೇ ಮೂವರು ಸಾವಿಗೀಡಾಗಿದ್ದಾರೆ. ಬಳಿಕ ಶೂಟರ್​ ಮೇಲೆ ನಡೆದ ಪ್ರತಿದಾಳಿಯಲ್ಲಿ ಆತನು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಮೂರು ಶವಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಗುಂಡಿನ ದಾಳಿಯ ನಂತರ ಲಾಸ್ ವೇಗಾಸ್‌ನಲ್ಲಿನ ಅಧಿಕಾರಿಗಳು ನೆವಾಡಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಕಟ್ಟಡಗಳಲ್ಲಿನ ಜನರನ್ನು ತೆರವು ಮಾಡಿಸಿದರು. ದಾಳಿಯಲ್ಲಿ ಬೇರೆ ಯಾರಾದರೂ ಉಳಿದುಕೊಂಡಿದ್ದಾರಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ನಡುವೆ ಚಕಮಕಿ ಶಂಕೆ: ವಿವಿ ಕ್ಯಾಂಪಸ್​ನಲ್ಲಿ ನಡೆದಿರುವ ಗುಂಡಿನ ದಾಳಿಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರುವ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳೇ ಪರಸ್ಪರ ದಾಳಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಿಗುತ್ತಿದೆ. ಇನ್ನು, ಪ್ರತ್ಯಕ್ಷದರ್ಶಿ ವಿದ್ಯಾರ್ಥಿಯೊಬ್ಬ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಉಪಾಹಾರ ಮಾಡುತ್ತಿದ್ದಾಗ ದಿಢೀರ್​ ಗುಂಡಿನ ದಾಳಿ ಕೇಳಿಸಿತು. ಹೊರಗೋಡಿ ಬಂದು ವೀಕ್ಷಿಸಿದಾಗ ಬಂದೂಕುಧಾರಿ ವ್ಯಕ್ತಿ ಗುಂಡು ಹಾರಿಸುತ್ತಿದ್ದ. ಬಳಿಕ ನಾನು ಕೆಳಮಹಡಿಗೆ ಓಡಿ ಹೋದೆ ಎಂದು ತಿಳಿಸಿದ್ದಾನೆ.

ವಿವಿಯಲ್ಲಿ ಅಂತಿಮ ಪರೀಕ್ಷೆಗಳು ಮುಗಿದ ಬಳಿಕ ಚಳಿಗಾಲದ ರಜೆ ಘೋಷಿಸಲಾಗುತ್ತಿದೆ. ಅದರ ಮೊದಲೇ ವಿವಿಯಲ್ಲಿ ಗುಂಡಿನ ದಾಳಿ ನಡೆದಿರುವುದು, ವಿದ್ಯಾರ್ಥಿಗಳಲ್ಲಿ ಆತಂಕ ಉಂಟು ಮಾಡಿದೆ. ಇದಕ್ಕೂ ಮೊದಲು 2017 ರಲ್ಲಿ ಇಂಥದ್ದೇ ದಾಳಿ ನಡೆದ ಭೀಕರ ಘಟನೆ ನಡೆದಿದೆ.

ಜನಾಂಗೀಯ ದಾಳಿಯಲ್ಲಿ ಸಾವು: ಇತ್ತೀಚೆಗೆ ಫ್ಲೋರಿಡಾದ ಜಾಕ್ಸನ್‌ವಿಲ್ಲೆಯಲ್ಲಿರುವ ಡಾಲರ್ ಜನರಲ್ ಸ್ಟೋರ್‌ನಲ್ಲಿ ಜನಾಂಗೀಯ ಪ್ರೇರಿತ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಮೂವರು ಸಾವಿಗೀಡಾಗಿದ್ದರು. ಗುಂಡು ಹಾರಿಸಿದ್ದ ಆರೋಪಿಯೂ ಕೂಡ ಹತ್ಯೆಯಾಗಿದ್ದ.

ಶಂಕಿತ ಆರೋಪಿ ಕಪ್ಪು ಜನಾಂಗದ ಜನರನ್ನು ದ್ವೇಷಿಸುತ್ತಿದ್ದ. ಹಾಗಾಗಿ, ಇದೊಂದು ಜನಾಂಗೀಯ ಪ್ರೇರಿತ ಗುಂಡಿನ ದಾಳಿಯಾಗಿದೆ​. ಆರೋಪಿ ಬಿಳಿ ಜನಾಂಗೀಯನಾಗಿದ್ದು ದಾಳಿಯ ನಂತರ ತನಗೂ ಗುಂಡು ಹಾರಿಸಿಕೊಂಡಿದ್ದಾನೆ. ಆರೋಪಿಯು ತನಗಿದ್ದ ದ್ವೇಷ ಮನಸ್ಥಿತಿ ಮತ್ತು ದಾಳಿಯ ಹಿಂದಿನ ಉದ್ದೇಶವನ್ನು ತಿಳಿಸುವ ಸಾಕ್ಷ್ಯಗಳನ್ನು ಬಿಟ್ಟು ಹೋಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಸ್ನೇಹಿತನ ಹಣ ಕೊಡಿಸಲು ಹೋದ ವ್ಯಕ್ತಿಯ ಕೊಲೆ: ಆರೋಪಿ ಪರಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.