ಹೈದರಾಬಾದ್: ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಎರಡು ಟೆಸ್ಟ್‌ಗಳ ಸರಣಿಯ ಎರಡನೇ ಪಂದ್ಯ ಶ್ರೀಲಂಕಾದ ಗಾಲೆ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಪಂದ್ಯದ ವೇಳೆಯೇ ಸಾವಿರಾರು ಪ್ರತಿಭಟನಾಕಾರರು ಸ್ಟೇಡಿಯಂ ಸುತ್ತುವರಿದಿದ್ದಾರೆ.
-
The intensity is really picking up with the protests outside the Galle International Stadium right now. Incredible scenes and a surreal backdrop to the Test match underway only a couple of hundred meters away #SLvAus pic.twitter.com/D46ziJeREF
— Bharat Sundaresan (@beastieboy07) July 9, 2022 " class="align-text-top noRightClick twitterSection" data="
">The intensity is really picking up with the protests outside the Galle International Stadium right now. Incredible scenes and a surreal backdrop to the Test match underway only a couple of hundred meters away #SLvAus pic.twitter.com/D46ziJeREF
— Bharat Sundaresan (@beastieboy07) July 9, 2022The intensity is really picking up with the protests outside the Galle International Stadium right now. Incredible scenes and a surreal backdrop to the Test match underway only a couple of hundred meters away #SLvAus pic.twitter.com/D46ziJeREF
— Bharat Sundaresan (@beastieboy07) July 9, 2022
ಆರ್ಥಿಕ ಸಂಕಷ್ಟದಿಂದ ಕೆಂಗಟ್ಟಿರುವ ಶ್ರೀಲಂಕಾದ ಜನರು ಇಂದು ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ದೇಶದ ಪರಿಸ್ಥಿತಿ ಬಗ್ಗೆ ಜಗತ್ತಿನ ಗಮನ ಸೆಳೆಯುವ ನಿಟ್ಟಿನಲ್ಲಿ ಲಂಕನ್ನರು ಗಾಲೆ ಕ್ರಿಕೆಟ್ ಸ್ಟೇಡಿಯಂ ಸುತ್ತಲೂ ಜಮಾಯಿಸಿದ್ದಾರೆ. ಅಲ್ಲದೇ, ಸರ್ಕಾರದ ವಿರೋಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ಆದರೆ, ಪ್ರತಿಭಟನಾಕಾರರು ಪಂದ್ಯಕ್ಕೆ ಅಡ್ಡಿಪಡಿಸಲಿಲ್ಲ. ಸ್ಟೇಡಿಯಂ ಬಳಿ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿದರು.
ಶ್ರೀಲಂಕಾದ ವಿವಿಧ ನಗರಗಳಲ್ಲಿ ಜನರು ಗುಂಪು-ಗುಂಪಾಗಿ ಸೇರಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಈ ಪ್ರತಿಭಟನೆಗೆ ಅನೇಕ ಸೆಲೆಬ್ರಿಟಿಗಳು ಸಾಥ್ ನೀಡಿದ್ದು, ಅವರೂ ಸಹ ಸರ್ಕಾರದ ವಿರುದ್ಧ ರಸ್ತೆಗಿಳಿದಿದ್ಧಾರೆ. ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಕೂಡ ಬೀದಿಗಿಳಿದು, ಕೊಲಂಬೊದ ರಾಷ್ಟ್ರಪತಿ ಭವನದ ಬಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
-
Crowd swelling, they’re on the march past the ground and in the direction of the other group at the train station. pic.twitter.com/0qx9Jrx9l4
— Adam Collins (@collinsadam) July 9, 2022 " class="align-text-top noRightClick twitterSection" data="
">Crowd swelling, they’re on the march past the ground and in the direction of the other group at the train station. pic.twitter.com/0qx9Jrx9l4
— Adam Collins (@collinsadam) July 9, 2022Crowd swelling, they’re on the march past the ground and in the direction of the other group at the train station. pic.twitter.com/0qx9Jrx9l4
— Adam Collins (@collinsadam) July 9, 2022
ಇನ್ನು, ಮೂರು ಟಿ-20, ಐದು ಏಕದಿನ ಹಾಗೂ ಎರಡು ಟೆಸ್ಟ್ ಸರಣಿಯಾಗಿ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ಪ್ರವಾಸದಲ್ಲಿದೆ. ಈಗಾಗಲೇ ಟಿ-20 ಸರಣಿಯಲ್ಲಿ 2-1 ಅಂತರದಲ್ಲಿ ಗೆಲುವು ಆಸ್ಟ್ರೇಲಿಯಾ ಸಾಧಿಸಿದೆ. ಏಕದಿನ ಸರಣಿಯನ್ನು 3-2 ಅಂತರದಿಂದ ಶ್ರೀಲಂಕಾ ಗೆದ್ದುಕೊಂಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕಾಂಗರೂ ತಂಡ 10 ವಿಕೆಟ್‌ಗಳ ಜಯ ಸಾಧಿಸಿದೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಭುಗಿಲೆದ್ದ ಪ್ರತಿಭಟನೆ: ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ.. ಗೋತಬಯ ರಾಜಪಕ್ಸ ಪರಾರಿ