ಜಕಾರ್ತಾ: ಇಂಡೋನೇಷ್ಯಾ ದೇಶದಲ್ಲಿ ವಿವಾಹಪೂರ್ವ ಲೈಂಗಿಕತೆ ಮತ್ತು ಸಹಜೀವನವನ್ನು ನಿಷೇಧಿಸಲು ನಿರ್ಧರಿಸಿದೆ. ಇದು ಸರ್ಕಾರದ ಸಿದ್ಧಾಂತಗಳು ಮತ್ತು ಮೌಲ್ಯಗಳಿಗೆ ವಿರುದ್ಧವಾಗಿ ರಾಷ್ಟ್ರಪತಿ ಅಥವಾ ಸಂಸ್ಥೆಗಳನ್ನು ಅವಹೇಳನ ಮಾಡುವ ಕಾಮೆಂಟ್‌ಗಳ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ. ಇವುಗಳನ್ನು ಉಲ್ಲಂಘಿಸಿದರೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ಭಾರಿ ಮೊತ್ತದ ದಂಡ ವಿಧಿಸಲಾಗುತ್ತದೆ. ಹೊಸ ಕಾನೂನನ್ನು ಪರಿಚಯಿಸಲು ಸಿದ್ಧ ಎಂದು ಇಂಡೋನೇಷ್ಯಾ ಸರ್ಕಾರ ಘೋಷಿಸಿದೆ.
ಇವುಗಳಿಗೆ ಸಂಬಂಧಿಸಿದ ಕ್ರಿಮಿನಲ್ ಕೋಡ್‌ನ ಕರಡನ್ನು ಈ ತಿಂಗಳಲ್ಲೇ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ವರದಿಯಾಗಿದೆ. ಇದೇ ವಿಚಾರವಾಗಿ ಇತ್ತೀಚೆಗೆ ಕಾನೂನು ಉಪ ಸಚಿವರು ಹಾಗೂ ಮಾನವ ಹಕ್ಕುಗಳ ಆಯೋಗದ ಜತೆ ಸಭೆ ನಡೆಸಿದ ಬಳಿಕ ಇತ್ತೀಚಿನ ವಿಷಯ ಬೆಳಕಿಗೆ ಬಂದಿದೆ.
ಮದುವೆಯ ಮೊದಲು ಲೈಂಗಿಕತೆ ಮತ್ತು ಸಹಬಾಳ್ವೆಯನ್ನು ನಿಷೇಧಿಸಲಾಗಿದೆ. ಅಲ್ಲದೆ, ಹೆಂಡತಿ ಅಥವಾ ಪತಿ ಇಲ್ಲದವರು ಪರರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ ಅವರು ವ್ಯಭಿಚಾರದ ಅಡಿಯಲ್ಲಿ ಶಿಕ್ಷೆಗೆ ಒಳಗಾಗುತ್ತಾರೆ. ಅಷ್ಟೇ ಅಲ್ಲ, ಒಂದು ವರ್ಷದ ಜೈಲು ಶಿಕ್ಷೆ ಅಥವಾ ಭಾರಿ ದಂಡವನ್ನು ತೆರಬೇಕಾಗುತ್ತದೆ ಎಂದು ಕರಡು ಹೇಳುತ್ತದೆ.
ಇಂಡೋನೇಷ್ಯಾ ಪ್ರಜೆಗಳು ಹಾಗೂ ವಿದೇಶಿಯರಿಗೂ ಇದೇ ನಿಯಮಗಳು ಅನ್ವಯವಾಗುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ. ಇದೇ ವಿಷಯವಾಗಿ ಮಾತನಾಡಿದ ದೇಶದ ನ್ಯಾಯಾಂಗ ಉಪ ಸಚಿವ ಎಡ್ವರ್ಡ್ ಒಮರ್ ಷರೀಫ್ ಹಿಯಾರಿಜ್, ಇಂಡೋನೇಷ್ಯಾದ ಮೌಲ್ಯಗಳಿಗೆ ಅನುಗುಣವಾಗಿ ಹೊಸ ಕಾನೂನಿನ ಬಗ್ಗೆ ಹೆಮ್ಮೆಯಿದೆ ಎಂದಿದ್ದಾರೆ.
ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಇಂಡೋನೇಷ್ಯಾ ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಸಲಿಂಗಕಾಮಿಗಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ, ಸ್ಥಳೀಯ ಮೌಲ್ಯಗಳಿಗೆ ಅನುಗುಣವಾಗಿ ಅಪರಾಧ ನಿಯಂತ್ರಣಕ್ಕಾಗಿ ಹೊಸ ಕಾನೂನುಗಳನ್ನು ತರಲು ದೇಶವು ವರ್ಷಗಳಿಂದ ಪ್ರಯತ್ನಿಸುತ್ತಿದೆ.
ಇದರ ಭಾಗವಾಗಿ ಸಿದ್ಧಪಡಿಸಿರುವ ಹೊಸ ಕರಡು ಕಾನೂನಿಗೆ 2019ರಲ್ಲಿಯೇ ಅನುಮೋದನೆ ದೊರೆಯಬೇಕಿತ್ತು. ಆದರೆ, ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಹೊಸ ಕಾನೂನು ನಾಗರಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ ಎಂದು ಸಾವಿರಾರು ಜನರು ಪ್ರತಿಭಟಿಸಿದರು. ಇದರಿಂದಾಗಿ ಒಂದು ಹೆಜ್ಜೆ ಕಳೆಗೆ ಇಳಿದ ಸರ್ಕಾರ. ಜನರೊಂದಿಗೆ ಸಮಾಲೋಚನೆ ನಡೆಸಿ ಒಂದಷ್ಟು ಬದಲಾವಣೆಗಳೊಂದಿಗೆ ಈ ಹೊಸ ಕಾನೂನನ್ನು ತರಲು ಸಿದ್ಧತೆ ನಡೆಸಿದೆ.
ಓದಿ: ಗೋವಾದಲ್ಲಿ ನೇಪಾಳದ ವ್ಯಕ್ತಿಗಳಿಂದ ರಷ್ಯಾ ಮಹಿಳೆ ಮೇಲೆ ಅತ್ಯಾಚಾರ