ETV Bharat / international

ನಾಳೆ ಮತ್ತೆ ನನ್ನನ್ನು ಬಂಧಿಸಲಿದ್ದಾರೆ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಹೇಳಿಕೆ - ಪಿಟಿಐ ಪಕ್ಷದ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು

ಶೀಘ್ರದಲ್ಲೇ ಮತ್ತೆ ತಮ್ಮನ್ನು ಬಂಧಿಸುವ ಎಲ್ಲ ಸಾಧ್ಯತೆಗಳಿವೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

Imran Khan sees 80% chances of his arrest on Tuesday

author img

By

Published : May 22, 2023, 12:18 PM IST

ಇಸ್ಲಾಮಾಬಾದ್ : ಹಲವಾರು ಪ್ರಕರಣಗಳಲ್ಲಿ ಬಂಧನ ಪೂರ್ವ ಜಾಮೀನು ಪಡೆಯಲು ಮಂಗಳವಾರ ಇಸ್ಲಾಮಾಬಾದ್ ನ್ಯಾಯಾಲಯಕ್ಕೆ ಹಾಜರಾಗುವ ಸಮಯದಲ್ಲಿ ತಮ್ಮನ್ನು ಮತ್ತೆ ಬಂಧಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಆಡಳಿತಾರೂಢ ಪಿಡಿಎಂ ಮೈತ್ರಿಕೂಟವು ಸೇನೆಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದು, ತಮ್ಮನ್ನು ಅಧಿಕಾರದಿಂದ ದೂರವಿಡಲು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಾಶಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸದ್ಯ ತಮ್ಮ ಪಿಟಿಐ ಪಕ್ಷದ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಪಕ್ಷದ ಎಲ್ಲ ಹಿರಿಯ ನಾಯಕರನ್ನು ಸಹ ಜೈಲಿನಲ್ಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನನ್ನನ್ನು ಬಂಧಿಸಿದ ನಂತರ ದೇಶದಲ್ಲಿ ಉಂಟಾದ ಗಲಭೆ ಹಿಂಸಾಚಾರಗಳನ್ನು ನೆಪ ಮಾಡಿಕೊಂಡು ನಮ್ಮ ಪಕ್ಷವನ್ನು ಹಾಳು ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ. ಈಗ ಅವರು ನಮ್ಮನ್ನು ಮಿಲಿಟರಿ ನ್ಯಾಯಾಲಯಗಳಲ್ಲಿ ವಿಚಾರಣೆ ಮಾಡಲು ಬಯಸುತ್ತಿದ್ದಾರೆ. ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರಕ್ಕೆ ಚುನಾವಣೆಯಲ್ಲಿ ಸೋಲುವ ಭಯವಿರುವುದರಿಂದ ಅವರು ನಮ್ಮನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ಪಂಜಾಬ್ ಗವರ್ನರ್​ರನ್ನು ಕೊಲೆ ಮಾಡಿದ ರೀತಿಯಲ್ಲಿಯೇ ಇಸ್ಲಾಮಿಕ್ ಮೂಲಭೂತವಾದಿಯೊಬ್ಬನಿಂದ ನನ್ನನ್ನು ಕೊಲೆ ಮಾಡಿಸುವ ಸಾಧ್ಯತೆಗಳಿವೆ ಎಂದು ಇಮ್ರಾನ್ ಗಂಭೀರವಾಗಿ ಆರೋಪಿಸಿದರು.

ಈಗಿನ ಪರಿಸ್ಥಿತಿಯನ್ನು ನೋಡಿದರೆ ಅವರು ಅಕ್ಟೋಬರ್​ನಲ್ಲಿ ಕೂಡ ಚುನಾವಣೆಗಳನ್ನು ನಡೆಸುವ ಸಾಧ್ಯತೆಗಳಿಲ್ಲ. ಪಿಟಿಐ ಗೆಲ್ಲುವುದಿಲ್ಲ ಎಂಬ ವಿಶ್ವಾಸ ಎಲ್ಲಿಯವರೆಗೆ ಅವರಿಗೆ ಬರುವುದಿಲ್ಲವೋ ಅಲ್ಲಿಯವರೆಗೆ ಅವರು ಚುನಾವಣೆಗಳನ್ನು ನಡೆಸಲಾರರು. ದೇಶದಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ನ್ಯಾಯಾಧೀಶರು ಹಾಗೂ ನ್ಯಾಯಾಲಯಗಳ ಆದೇಶಗಳನ್ನು ಸಹ ಕಡೆಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮೇ 9 ರಂದು ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿರುವ ಮತ್ತು ಸೇನಾ ನೆಲೆಗಳು ಮತ್ತು ಸರ್ಕಾರಿ ಸಂಸ್ಥೆಗಳ ಮೇಲೆ ದಾಳಿ ಮಾಡಿದವರನ್ನು ಬಿಡುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾನುವಾರ ಹೇಳಿದ್ದಾರೆ. ಮೇ 9 ರಂದು ಉಚ್ಛಾಟಿತ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರ ಬಂಧನದ ನಂತರ ನಡೆದ ಹಿಂಸಾಚಾರದ ನಂತರ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಇಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಷರೀಫ್, ಗಲಭೆಕೋರರು ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದರು.

ಮೇ 9 ರ ಘಟನೆಗಳಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು... ಯೋಜಕರು, ದುರುಪಯೋಗ ಪಡಿಸಿಕೊಮಡವರು ಅಥವಾ ಇನ್ನಾರೇ ಆಗಿದ್ದರೂ ಅವರನ್ನು ಕಾನೂನು ಮತ್ತು ಸಂವಿಧಾನದ ಪ್ರಕಾರ ಶಿಕ್ಷಿಸಲಾಗುವುದು ಎಂದು ಅವರು ಹೇಳಿದರು. ಮೇ 9 ರಂದು ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯದ ಆವರಣದಿಂದ ಪಾಕಿಸ್ತಾನಿ ರೇಂಜರ್‌ಗಳು ಭ್ರಷ್ಟಾಚಾರ ಪ್ರಕರಣದಲ್ಲಿ ಖಾನ್ ಅವರನ್ನು ಬಂಧಿಸಿದ ನಂತರ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದವು. ಅವರ ಪಕ್ಷದ ಕಾರ್ಯಕರ್ತರು ಜಿನ್ನಾ ಹೌಸ್ (ಲಾಹೋರ್ ಕಾರ್ಪ್ಸ್ ಕಮಾಂಡರ್ ಹೌಸ್), ಮಿಯಾನ್‌ವಾಲಿ ವಾಯುನೆಲೆ ಮತ್ತು ಫೈಸಲಾಬಾದ್‌ನಲ್ಲಿರುವ ISI ಕಟ್ಟಡ ಸೇರಿದಂತೆ ಒಂದು ಡಜನ್ ಮಿಲಿಟರಿ ಕಟ್ಟಡಗಳನ್ನು ಧ್ವಂಸಗೊಳಿಸಿದ್ದರು. ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಛೇರಿ (GHQ) ಮೇಲೂ ಗುಂಪು ದಾಳಿ ನಡೆಸಿತು.

ಇದನ್ನೂ ಓದಿ : CPEC ಪ್ರಾಜೆಕ್ಟ್​ ವಿಳಂಬ: ಪಾಕ್ ವಿರುದ್ಧ ಚೀನಾ ಆಕ್ರೋಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.