ಹೈದ್ರಾಬಾದ್: ಎಲೋನ್ ಮಾಸ್ಕ್ ಮತ್ತು ಅವರ ಸಾಮಾಜಿಕ ಜಾಲತಾಣದ ವಿರುದ್ಧ ಸುದ್ದಿ ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ಸಿಎಸ್ಎನ್ ಮತ್ತಿತ್ತರ ಪಬ್ಲಿಕೇಷನ್ಗಳ ಪತ್ರಕರ್ತರ ಟ್ವಿಟರ್ ಖಾತೆಯನ್ನು ಅಮಾನತು ಮಾಡಲಾಗಿದೆ. ಟ್ವಿಟರ್ ಖಾತೆಯನ್ನು ತೆಗೆದುಹಾಕಿರುವುದು ಹಾಗೂ ಹಿಂದಿನ ಟ್ವೀಟ್ಗಳನ್ನು ಡಿಲೀಟ್ ಮಾಡಿರುವ ಬಗ್ಗೆ ಸಂಸ್ಥೆ ವಿವರಣೆ ನೀಡಿಲ್ಲ.
ಸಾರ್ವಜನಿಕವಾಗಿ ಲಭ್ಯವಿರುವ ಡೇಟಾವನ್ನು ಬಳಸಿಕೊಂಡು ತನ್ನ ಖಾಸಗಿ ಜೆಟ್‌ನ ಫ್ಲೈಟ್‌ಗಳನ್ನು ಸ್ವಯಂಚಾಲಿತವಾಗಿ ಟ್ರ್ಯಾಕ್ ಮಾಡುವ ಖಾತೆಯನ್ನು ಮಸ್ಕ್ ಶಾಶ್ವತವಾಗಿ ನಿಷೇಧಿಸುವ ನಿರ್ಧಾರ ಕೈಗೊಂಡಿದ್ದು, ಸುದ್ದಿ ವರದಿಗಾರರ ಖಾತೆಯನ್ನು ಹಠಾತ್ ಅಮಾನತು ಮಾಡಲಾಗಿದೆ. ಟ್ವಿಟರ್ ಕೂಡ ತನ್ನ ನಿಯಮಗಳನ್ನು ಬದಲಾಯಿಸಿದ್ದು, ವ್ಯಕ್ತಿಯ ಪ್ರಸ್ತುತ ಸ್ಥಳದ ಮಾಹಿತಿಯನ್ನು ಅವರ ಒಪ್ಪಿಗೆಯಿಲ್ಲದೆ ಹಂಚಿಕೊಳ್ಳುವುದನ್ನು ನಿಷೇಧಿಸಿದೆ.
ಮಸ್ಕ್ ಅವರ ತಾರ್ಕಿಕ ಹೇರಿಕೆ ಮತ್ತು ಹೊಸ ನಿಯಮದ ವಿರುದ್ಧ ಅಮಾನುತುಗೊಂಡ ಅನೇಕ ಪತ್ರಕರ್ತರು ಸುದ್ದಿ ಮಾಡಿದ್ದಾರೆ. ಈ ಸುದ್ದಿಗಳು ಲಾಸ್ ಏಂಜಲಿಸ್ ಕುಟುಂಬದ ಮೇಲೆ ಪರಿಣಾಮ ಬೀರಿದೆ ಎಂಬುದಾಗಿ ಅವರು ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಸ್ಕ್, ಎಲ್ಲರಿಗೂ ಅನ್ವಯಿಸುವಂತೆ ಡಾಕ್ಸಿಂಗ್ ಪತ್ರಕರ್ತರಿಗೂ ಅನ್ವಯಿಸುತ್ತದೆ. ನನ್ನನ್ನು ದಿನವಿಡೀ ಟೀಕಿಸುವುದು ಸರಿ. ಆದರೆ, ನನ್ನ ರಿಯಲ್ ಟೈಮ್ ಲೋಕೇಷನ್ ಮತ್ತು ಕುಟುಂಬದ ಕುರಿತ ಡಾಕ್ಸಿಂಗ್ ಸರಿಯಲ್ಲ ಎಂದಿದ್ದಾರೆ. ಡಾಕ್ಸಿಂಗ್ ಎಂದರೆ ಒಬ್ಬ ವ್ಯಕ್ತಿಯ ಗುರುತು, ವಿಳಾಸ ಅಥವಾ ಇತರೆ ವೈಯಕ್ತಿಕ ಮಾಹಿತಿಯನ್ನು ಆನ್ಲೈನ್ನಲ್ಲಿ ಬಹಿರಂಗಪಡಿಸುವುದಾಗಿದೆ.
ಟ್ವಿಟರ್ನ ಈ ನಡೆ ಕುರಿತು ಹೇಳಿಕೆ ನೀಡಿರುವ ಸಿಎನ್ಎನ್, ಸಿಎನ್ಎನ್ನ ಡೊನಿ ಒಸುಲಿವನ್ ಸೇರಿದಂತೆ ಅನೇಕರ ಖಾತೆಯನ್ನು ಹಠಾತ್ ಅಮಾನತು ಮಾಡಿರುವುದು ನ್ಯಾಯ ಸಮ್ಮತವಲ್ಲ. ಇದು ಆತಂಕಕಾರಿಯಾಗಿದೆ. ಆದರೆ, ಆಶ್ಚರ್ಯಚಕಿತವಾಗಿಲ್ಲ. ಟ್ವಿಟರ್ನಲ್ಲಿ ಅಸ್ಥಿರತೆ ಮತ್ತು ಚಂಚಲತೆ ಕಾಳಜಿ ಟ್ವಿಟರ್ ಬಳಸುತ್ತಿರುವ ಎಲ್ಲರಿಗೂ ಆಗಿದೆ. ನಾವು ಈ ಕುರಿತು ಟ್ವಿಟರ್ಗೆ ವಿವರಣೆ ಕೇಳಿದ್ದೇವೆ. ಅವರ ಪ್ರತಿಕ್ರಿಯೆ ಆಧಾರದ ಮೇಲೆ ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಮಸ್ಕ್ ಹಿಂದಿಕ್ಕಿದ ಬರ್ನಾಡ್.. ಅರ್ನಾಲ್ಟ್ ಈಗ ವಿಶ್ವದ ನಂ 1 ಶ್ರೀಮಂತ