ETV Bharat / international

ಹೆಣ್ಣು ಮಗುವಿಗಾಗಿ 138 ವರ್ಷಗಳ ಕಾಲ ಕಾದಿತ್ತು ಆ ವಂಶ.. ಬೇಬಿ ಜನನದಿಂದ ಮನೆಯಲ್ಲಿ ಸಂಭ್ರಮವೋ ಸಂಭ್ರಮ

ಆ ಕುಲದಲ್ಲಿ ಹೆಣ್ಣು ಮಗು ಹುಟ್ಟಿ 138 ವರ್ಷಗಳಾಗಿವೆ. ಆದರೆ ಇಷ್ಟು ವರ್ಷಗಳ ನಂತರ ಈಗ ಹೆಣ್ಣು ಮಗು ಆ ವಂಶದಲ್ಲಿ ಜನಿಸಿದೆ.. ಆ ಹೆಣ್ಣು ಮಗುವಿನ ಆಗಮನದಿಂದ ತಂದೆ - ತಾಯಿ ಮತ್ತು ಈ ವಂಶದ ಇತರ ಕುಟುಂಬದ ಸದಸ್ಯರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಆ ಮಗು ಈಗ ವಿಶ್ವದಾದ್ಯಂತ ಜೂನಿಯರ್ ಸೆಲೆಬ್ರಿಟಿ ಎನಿಸಿಕೊಂಡಿದೆ.

author img

By

Published : Apr 10, 2023, 12:31 PM IST

clan waited 138 years for a girl child  Carolyn Andrew Clark  female child in Andrew clan  ಹೆಣ್ಣು ಮಗುವಿಗಾಗಿ 138 ವರ್ಷಗಳ ಕಾಲ ಕಾದಿತ್ತು ಆ ಕುಲ  ಬೇಬಿ ಜನನದಿಂದ ಮನೆಯಲ್ಲಿ ಸಂಭ್ರಮವೋ ಸಂಭ್ರಮ  ಹೆಣ್ಣು ಮಗು ಹುಟ್ಟಿ 138 ವರ್ಷ  ಹೆಣ್ಣು ಮಗುವಿನ ಆಗಮನ  ಮಿಚಿಗನ್‌ನ ಕ್ಯಾಲೆಡೋನಿಯಾದಲ್ಲಿ ವಾಸಿಸುವ ದಂಪತಿ  ಎರಡು ಬಾರಿ ಗರ್ಭಪಾತ  ದಂಪತಿಗೆ ಮೊದಲು ಗಂಡು ಮಗು
ಹೆಣ್ಣು ಮಗುವಿಗಾಗಿ 138 ವರ್ಷಗಳ ಕಾಲ ಕಾದಿತ್ತು ಆ ಕುಲ

ಮಿಚಿಗನ್‌​, ಅಮೆರಿಕ: ಕೆಲವರಿಗೆ ಗಂಡು ಮಗು ಬೇಕಾದರೆ ಹೆಣ್ಣು ಮಗು ಸಿಗುತ್ತದೆ. ಹೆಣ್ಣು ಬೇಕೆಂದರೆ ಗಂಡು ಮಗು ಸಿಗುತ್ತದೆ. ಆದರೆ ಇಲ್ಲೊಂದು ಕುಟುಂಬದಲ್ಲಿ ಹೆಣ್ಣು ಮಗುವಿನ ಜನನಕ್ಕಾಗಿ ವರ್ಷಗಟ್ಟಲೆ ಬಿಡಿ, ದಶಕಗಳೂ ಅಲ್ಲ, ಒಟ್ಟಿಗೆ ಒಂದು ಶತಮಾನಕ್ಕೂ ಹೆಚ್ಚು ಕಾಲ ಕಾದಿರುವ ಘಟನೆ ಅಮೆರಿಕದಲ್ಲಿ ಕಂಡು ಬಂದಿದೆ.

clan waited 138 years for a girl child  Carolyn Andrew Clark  female child in Andrew clan  ಹೆಣ್ಣು ಮಗುವಿಗಾಗಿ 138 ವರ್ಷಗಳ ಕಾಲ ಕಾದಿತ್ತು ಆ ಕುಲ  ಬೇಬಿ ಜನನದಿಂದ ಮನೆಯಲ್ಲಿ ಸಂಭ್ರಮವೋ ಸಂಭ್ರಮ  ಹೆಣ್ಣು ಮಗು ಹುಟ್ಟಿ 138 ವರ್ಷ  ಹೆಣ್ಣು ಮಗುವಿನ ಆಗಮನ  ಮಿಚಿಗನ್‌ನ ಕ್ಯಾಲೆಡೋನಿಯಾದಲ್ಲಿ ವಾಸಿಸುವ ದಂಪತಿ  ಎರಡು ಬಾರಿ ಗರ್ಭಪಾತ  ದಂಪತಿಗೆ ಮೊದಲು ಗಂಡು ಮಗು
ಬೇಬಿ ಜನನದಿಂದ ಮನೆಯಲ್ಲಿ ಸಂಭ್ರಮವೋ ಸಂಭ್ರಮ

ಕ್ಯಾರೊಲಿನ್ - ಆಂಡ್ರ್ಯೂ ಕ್ಲಾರ್ಕ್, ಮಿಚಿಗನ್‌ನ ಕ್ಯಾಲೆಡೋನಿಯಾದಲ್ಲಿ ವಾಸಿಸುವ ದಂಪತಿ. ಆದರೆ, ಆಂಡ್ರ್ಯೂ ಕುಲದಲ್ಲಿ ಹೆಣ್ಣು ಮಗು ಹುಟ್ಟಿ ಸರಿಯಾಗಿ 138 ವರ್ಷಗಳು ಕಳೆದಿವೆ. 1885 ರಲ್ಲಿ ಒಂದು ಹೆಣ್ಣು ಮಗು ಜನಿಸಿತು. ಆ ಬಳಿಕ ಆಂಡ್ರ್ಯೂ ಕುಟುಂಬದಲ್ಲಿ ಬರೀ ಗಂಡು ಮಕ್ಕಳ ಜನನವೇ ಆಗಿದೆ. ಈ ಕಾರಣದಿಂದಾಗಿ ಪ್ರತಿ ಪೀಳಿಗೆಯು ಹೆಣ್ಣು ಮಗುವನ್ನು ಹೊಂದಲು ಆಂಡ್ರ್ಯೂ ಕುಟುಂಬ ಬಯಸುತ್ತ ಬಂದಿದೆ. ಅಂತಹ ಕ್ಷಣದಲ್ಲಿ ಕ್ಯಾರೋಲಿನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಅವರ ಕುಟುಂಬದಲ್ಲಿ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಎರಡು ಬಾರಿ ಗರ್ಭಪಾತ..!: ಇನ್ನು ಈ ದಂಪತಿಗೆ ಮೊದಲು ಗಂಡು ಮಗುವಾಗಿತ್ತು. 2020 ರಲ್ಲಿ ತಮ್ಮ ಎರಡನೇ ಮಗುವಿಗೆ ಗರ್ಭಿಣಿಯಾದ ಕ್ಯಾರೋಲಿನ್, 2021 ರ ಜನವರಿಯಲ್ಲಿ ಗರ್ಭಪಾತ ಹೊಂದಿದ್ದರು. ತದನಂತರ ಮತ್ತೆ ಗರ್ಭಪಾತವಾಯಿತು. ಇದರಿಂದಾಗಿ ಅವರು ತೀವ್ರ ಮಾನಸಿಕ ನೋವು ಅನುಭವಿಸಿ ಕಳೆದ ವರ್ಷ ಮತ್ತೆ ಗರ್ಭಿಣಿಯಾದರು. ಈ ಬಾರಿ ಹೆಣ್ಣು ಮಗು ಹುಟ್ಟುತ್ತದೆಯೇ? ಗಂಡು ಮಗು ಹುಟ್ಟುತ್ತದೆಯೇ? ಆಲೋಚಿಸುವುದನ್ನು ನಿಲ್ಲಿಸಿದಳು.. ತನ್ನ ಆರೋಗ್ಯದ ಕಡೆ ಗಮನ ಹರಿಸಿದಳು.. ಆರೋಗ್ಯವಂತ ಮಗುವನ್ನು ಹೊಂದಬೇಕೆಂದು ಬಯಸಿದಳು. ಆದರೆ ತನ್ನ ಆಸೆಯ ಜೊತೆಗೆ ಕ್ಯಾರೋಲಿನ್ ಆರೋಗ್ಯವಂತಹ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನಮ್ಮ ಮದುವೆಯಾಗಿ ಹತ್ತು ವರ್ಷಗಳಾಗಿವೆ. ಡೇಟಿಂಗ್ ಮಾಡುವಾಗ ಆಂಡ್ರ್ಯೂ ನನಗೊಂದು ವಿಷಯ ಹೇಳಿದರು. ಆಂಡ್ರ್ಯೂ ಅವರ ಸಂಬಂಧಿಕರಿಗೆ ಹೆಣ್ಣುಮಕ್ಕಳಿದ್ದರೂ.. ಶತಮಾನ ಕಳೆದ್ರೂ ನಮ್ಮ ಕುಲದಲ್ಲಿ ಹೆಣ್ಣು ಮಕ್ಕಳು ಜನಿಸಿಲ್ಲ ಎಂದು ಹೇಳಿದಾಗ ನನಗೆ ಆಘಾತವಾಯಿತು. ಆದರೆ, ಇಷ್ಟು ವರ್ಷವಾದರೂ ಹೆಣ್ಣು ಮಗುವಾಗದೇ ಇದ್ದಾಗ ದೇವರು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾನೆ ಎಂದರ್ಥವಾಯಿತು. ನನಗೆ ಮೊದಲು ಗಂಡು ಮಗು ಜನನದ ಬಳಿಕ ನಾನು ಎರಡು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದೇನೆ. ಬಳಿಕ ನಾನು ಆರೋಗ್ಯಕರ ಮಗುವಿಗೆ ಜನ್ಮ ನೀಡಬೇಕು ಎಂದು ಬಯಸಿದ್ದೆ. ಆದರೆ, ನಮಗೆ ಹೆಣ್ಣು ಮಗು ಜನಿಸಿದ್ದು, ಖುಷಿಯನ್ನು ಇಮ್ಮಡಿಗೊಳಿಸಿತು ಎಂದು ಕರೋಲಿನ್ ಹೇಳಿದ್ದಾರೆ

ನೀಲಿ - ಗುಲಾಬಿ.. ಆಶ್ಚರ್ಯ: ಹುಟ್ಟುವ ಮಗು ಹೆಣ್ಣೋ ಅಥವಾ ಗಂಡೋ? ತಿಳಿಯುವುದು ನಮ್ಮ ದೇಶದಲ್ಲಿ ನಿಷಿದ್ಧ. ಆದರೆ ‘ಬೇಬಿ ಜೆಂಡರ್ ರಿವೀಲ್’ ಹೆಸರಿನಲ್ಲಿ ಹೊರ ದೇಶಗಳಲ್ಲಿ ಆಚರಣೆಯಂತೆ ಆಚರಿಸುತ್ತಾರೆ. ಇದನ್ನು ‘ಬೇಬಿ ಶವರ್’ ಎಂದೂ ಕರೆಯುತ್ತಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಂಡ್ರ್ಯೂ- ಕ್ಯಾರೋಲಿನ್ ದಂಪತಿ ತಮ್ಮ ಕುಟುಂಬದೊಂದಿಗೆ ಈ ಕಾರ್ಯಕ್ರಮ ಆಚರಿಸಿದರು. ಹೆಣ್ಣು ಮಗು ಆಗಲಿದೆ ಎಂದು ತಿಳಿದ ನಂತರ ಸಂತಸದಲ್ಲಿ ಮುಳುಗಿದ್ದ ದಂಪತಿ ತಮ್ಮ ಕುಟುಂಬ ಸದಸ್ಯರಿಗೆ ಅಚ್ಚರಿ ಮೂಡಿಸಲು ಬಯಸಿದ್ದರು.

ಈ ಕಾರ್ಯಕ್ರಮದಲ್ಲಿ ಅವರು ಎಲ್ಲರಿಗೂ ಗುಲಾಬಿ/ನೀಲಿ ಕ್ರೀಮ್ ತುಂಬಿದ ಕುಕೀಗಳನ್ನು ವಿಶೇಷವಾಗಿ ಸಿದ್ಧಪಡಿಸಿದರು. ಸಮಾರಂಭದ ಆರಂಭದಲ್ಲಿ ದಂಪತಿ ಅದನ್ನು ಬಹಳ ರಹಸ್ಯವಾಗಿಟ್ಟು ನಂತರ ಕುಕೀಗಳನ್ನು ನೀಡಿದರು. ಎಂದಿನಂತೆ ಈ ಬಾರಿಯೂ ಕುಕೀಗಳ ಮಧ್ಯದಲ್ಲಿ ನೀಲಿ ಬಣ್ಣದ ಕ್ರೀಂ ತುಂಬಿರುತ್ತದೆ ಎಂದು ಸಂಬಂಧಿಕರು ಭಾವಿಸಿದ್ದರು. ಆದರೆ ಪ್ಯಾಕೆಟ್ ತೆರೆದ ಬಳಿಕ ಮನೆಯವರೆಲ್ಲ ಒಮ್ಮೆ ಆಶ್ಚರ್ಯಚಕಿತರಾಗಿದ್ದರು. ಏಕೆಂದರೆ ಈ ಬಾರಿ ಕುಕೀಗಳ ಮಧ್ಯದಲ್ಲಿ ನೀಲಿ ಬದಲಿಗೆ ಗುಲಾಬಿ ಬಣ್ಣದ ಕ್ರೀಮ್ ಇದೆ! ನಮಗೆ ಹೆಣ್ಣು ಮಗು ಜನಿಸುತ್ತಿದೆ ಎಂದು ತಿಳಿದಾಗ ನಮ್ಮ ಕುಟುಂಬದವರೆಲ್ಲ ಆ ಕ್ಷಣವೇ ಸಂತಸದಲ್ಲಿ ಮುಳುಗಿದರು ಎಂದು ಕರೋಲಿನ್ ತಿಳಿಸಿದರು.

ದಂಪತಿ ತಮ್ಮ ಹೆಣ್ಣು ಮಗುವಿಗೆ ಆಡ್ರೆ ಎಂದು ಹೆಸರಿಟ್ಟಿದ್ದಾರೆ. ಆಡ್ರೆ ಆಗಮನದಿಂದ ತಮ್ಮು ಕುಟುಂಬ ಮತ್ತು ಕುಲದಲ್ಲಿ ಸಂತೋಷ ಹೆಚ್ಚಾಗಿದೆ. ಅಷ್ಟೇ ಅಲ್ಲ 138 ವರ್ಷಗಳ ನಂತರ ಆ ಕುಲದಲ್ಲಿ ಹುಟ್ಟಿದ ಮೊದಲ ಹೆಣ್ಣು ಮಗು ಇದಾಗಿದ್ದು, ಈಗ ವಿಶ್ವದಾದ್ಯಂತ ಜೂನಿಯರ್ ಸೆಲೆಬ್ರಿಟಿಯಾಗಿ ಬದಲಾಗಿದೆ.

ಓದಿ: ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದ ವಿಚಿತ್ರ ಮಗು: ಒಂದೇ ದೇಹದಲ್ಲಿ ಎರಡು ಹೃದಯ, ನಾಲ್ಕು ಕೈ ಕಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.