ETV Bharat / international

ಇನ್ನು ನಿತ್ಯ ಹೊಸ ಕೋವಿಡ್ ಪ್ರಕರಣಗಳ ಅಪ್ಡೇಟ್​ ನೀಡಲ್ಲ ಎಂದ ಚೀನಾ ಸರ್ಕಾರ!​

author img

By

Published : Dec 25, 2022, 1:57 PM IST

ಚೀನಾದಲ್ಲಿ ಕೋವಿಡ್ ಪ್ರಕರಣಗಳು ಏಕಾಏಕಿ ಹೆಚ್ಚಾಗುತ್ತಿವೆ ಎಂದು ಹೇಳಲಾಗಿದೆ. ಆದರೆ ಪ್ರತಿದಿನ ವರದಿಯಾಗುವ ಕೋವಿಡ್ ಪ್ರಕರಣಗಳ ಅಪ್ಡೇಟ್ ಇನ್ನು ಮುಂದೆ ನೀಡಲಾಗದು ಎಂದು ಚೀನಾ ಸರ್ಕಾರ ಹೇಳಿದೆ.

China stops publishing daily Covid cases amid fresh surge

ಬೀಜಿಂಗ್: ದೇಶದ ಕೋವಿಡ್-19 ಪ್ರಕರಣಗಳ ಅಂಕಿ - ಅಂಶಗಳನ್ನು ಪ್ರತಿದಿನ ನೀಡುತ್ತಿದ್ದ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಭಾನುವಾರದಿಂದ ಕೋವಿಡ್ ಅಪ್ಡೇಟ್​ ಪ್ರಕಟಿಸುವುದನ್ನು ನಿಲ್ಲಿಸಿದೆ ಎಂದು ಚೀನಾದ ಮುಂಚೂಣಿ ಮಾಧ್ಯಮ ಸಂಸ್ಥೆಯು ವರದಿ ಮಾಡಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (NHC) ಭಾನುವಾರದಿಂದ ದೈನಂದಿನ ಕೋವಿಡ್-19 ಪ್ರಕರಣಗಳ ಮಾಹಿತಿ ಪ್ರಕಟಿಸುವುದನ್ನು ನಿಲ್ಲಿಸುತ್ತದೆ. ಬದಲಿಗೆ, ಚೀನಾದ ರೋಗ ನಿಯಂತ್ರಣ ಮತ್ತು ರೋಗ ತಡೆಗಟ್ಟುವಿಕೆ ಕೇಂದ್ರವು ಕೋವಿಡ್ ಸಂಬಂಧಿತ ಮಾಹಿತಿಯನ್ನು ಅಧ್ಯಯನ ಮತ್ತು ಉಲ್ಲೇಖಕ್ಕಾಗಿ ಬಿಡುಗಡೆ ಮಾಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಏರ್‌ಫಿನಿಟಿಯ ಹೊಸ ಮಾಡೆಲಿಂಗ್ ಚೀನಾದ ಪ್ರಾದೇಶಿಕ ಪ್ರಾಂತ್ಯಗಳ ಡೇಟಾವನ್ನು ಪರಿಶೀಲಿಸಿದೆ. ಪ್ರಸ್ತುತ ಏಕಾಏಕಿ ಕೆಲ ಪ್ರದೇಶಗಳಲ್ಲಿ ಕೋವಿಡ್​ ಹೆಚ್ಚು ವೇಗವಾಗಿ ಹರಡುತ್ತಿದೆ. ಬೀಜಿಂಗ್ ಮತ್ತು ಗುವಾಂಗ್‌ಡಾಂಗ್‌ನಲ್ಲಿ ಪ್ರಕರಣಗಳು ಅತಿ ವೇಗವಾಗಿ ಏರುತ್ತಿವೆ. ಪ್ರಾದೇಶಿಕ ದತ್ತಾಂಶದಲ್ಲಿನ ಟ್ರೆಂಡ್​ಗಳನ್ನು ಬಳಸಿಕೊಂಡು, ನಮ್ಮ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ತಂಡವು ಪ್ರಸ್ತುತ ಪ್ರಕರಣಗಳು ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಮೊದಲ ಗರಿಷ್ಠ ಮಟ್ಟವನ್ನು (ಪೀಕ್) ಮುನ್ಸೂಚಿಸಿದೆ ಮತ್ತು ಇತರ ಚೀನೀ ಪ್ರಾಂತ್ಯಗಳಲ್ಲಿ ನಂತರದ ಉಲ್ಬಣಗಳಿಂದ ಎರಡನೇ ಗರಿಷ್ಠ ಮಟ್ಟ ತಲುಪಲಿದೆ ಎಂದು ಏರ್‌ಫಿನಿಟಿ ಹೇಳಿಕೆಯಲ್ಲಿ ತಿಳಿಸಿದೆ.

ಜನವರಿಯ ಗರಿಷ್ಠ ದಿನಕ್ಕೆ 3.7 ಮಿಲಿಯನ್ ಮತ್ತು ಮಾರ್ಚ್ 2023 ರಲ್ಲಿ ದಿನಕ್ಕೆ 4.2 ಮಿಲಿಯನ್ ತಲುಪಬಹುದು ಎಂದು ಏರ್‌ಫಿನಿಟಿ ಮಾದರಿಯು ಅಂದಾಜಿಸಿದೆ. ಏರ್‌ಫಿನಿಟಿ ಲಸಿಕೆ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಲೂಯಿಸ್ ಬ್ಲೇರ್ ಮಾತನಾಡಿ, ಚೀನಾ ಸಾಮೂಹಿಕ ಪರೀಕ್ಷೆಯನ್ನು ನಿಲ್ಲಿಸಿದೆ ಮತ್ತು ಇನ್ನು ಮುಂದೆ ಲಕ್ಷಣರಹಿತ ಪ್ರಕರಣಗಳನ್ನು ವರದಿ ಮಾಡುತ್ತಿಲ್ಲ. ಈ ಸಂಯೋಜನೆಯ ಮೂಲಕ ಸಿಗುವ ಅಧಿಕೃತ ಡೇಟಾ ದೇಶಾದ್ಯಂತ ಏಕಾಏಕಿ ಹೆಚ್ಚಾಗುತ್ತಿರುವ ಕೋವಿಡ್ ಪರಿಸ್ಥಿತಿಯ ಪ್ರತಿಬಿಂಬವಾಗಿರುವುದು ಸಾಧ್ಯವಿಲ್ಲ ಎಂದಿದ್ದಾರೆ.

ಕೋವಿಡ್​ಗೆ ಪಾಸಿಟಿವ್ ಆಗಿ ಉಸಿರಾಟದ ವೈಫಲ್ಯ ಅಥವಾ ನ್ಯುಮೋನಿಯಾದಿಂದ ಸಾಯುವವರನ್ನು ಮಾತ್ರ ಪಟ್ಟಿಗೆ ಸೇರ್ಪಡೆ ಮಾಡುವಂತೆ ಚೀನಾ ಕೋವಿಡ್​-19 ಸಾವುಗಳನ್ನು ದಾಖಲಿಸುವ ವಿಧಾನವನ್ನು ಬದಲಾಯಿಸಿದೆ. ಪಾಸಿಟಿವ್ ಬಂದ ನಂತರ ನಿರ್ದಿಷ್ಟ ಅವಧಿಯಲ್ಲಿ ಸಾವು ಸಂಭವಿಸಿದರೆ ಅಥವಾ ಕೋವಿಡ್​-19ನಿಂದಲೇ ಸಾವು ಸಂಭವಿಸಿದೆ ಎಂದು ದಾಖಲಿಸುವ ಇತರ ದೇಶಗಳ ಮಾದರಿಗಿಂತ ಚೀನಾದ ಈ ಮಾದರಿ ವಿಭಿನ್ನವಾಗಿದೆ. ಈ ಬದಲಾವಣೆಯು ಚೀನಾದಲ್ಲಿ ಕೋವಿಡ್​ನಿಂದ ಸಂಭವಿಸುವ ಸಾವಿನ ಪ್ರಮಾಣವನ್ನು ಕಡಿಮೆಯಾಗಿ ತೋರಿಸಬಹುದು.

ಭಾರತದಲ್ಲೂ ಕೋವಿಡ್ ಕಟ್ಟೆಚ್ಚರ: ಜಗತ್ತಿನಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು ವೈದ್ಯಕೀಯ ಸೌಲಭ್ಯದ ಅಗತ್ಯತೆಗಳನ್ನು ಪೂರೈಸಲು ಮಂಗಳವಾರ ಎಲ್ಲ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ (ಮಾಕ್ ಡ್ರಿಲ್) ನಡೆಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಶನಿವಾರ ರಾಜ್ಯಗಳಿಗೆ ಪತ್ರ ಬರೆದಿದ್ದು, ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಎಲ್ಲ ರಾಜ್ಯಗಳಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕೋವಿಡ್ ಪ್ರಕರಣಗಳನ್ನು ಎದುರಿಸಲು ಎಲ್ಲ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆದ್ದರಿಂದ, ಮಂಗಳವಾರ (ಡಿಸೆಂಬರ್ 27) ದೇಶಾದ್ಯಂತ ಎಲ್ಲಾ ಆಸ್ಪತ್ರೆಗಳಲ್ಲಿ (ಕೋವಿಡ್‌ಗೆ ಮೀಸಲಾದ ಆರೋಗ್ಯ ಸಂಸ್ಥೆಗಳೂ ಸೇರಿ) ಅಣಕು ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಗಾಬರಿ ಬೇಡ: ಚೀನಾದಲ್ಲಿ ಕೋವಿಡ್​ ಹೆಚ್ಚುತ್ತಿರುವುದು ಕಾಳಜಿಯ ವಿಷಯವಾಗಿದೆ. ಆದರೆ, ನಾವು ಗಾಬರಿಯಾಗುವುದು ಬೇಡ. ನಾವು ಉತ್ತಮ ಗುಣಮಟ್ಟದ ಲಸಿಕೆಯನ್ನು ಎಲ್ಲರಿಗೆ ನೀಡಿ ದಾಖಲೆ ನಿರ್ಮಿಸಿದ್ದೇವೆ. ಸರ್ಕಾರದ ಮಾರ್ಗದರ್ಶನ ಬಗ್ಗೆ ನಂಬಿಕೆ ಹೊಂದಿ, ಅದನ್ನು ಫಾಲೋ ಮಾಡಬೇಕು ಎಂದು ಕೋವಿಶೀಲ್ಡ್​ ಲಸಿಕೆ ಉತ್ಪಾದನಾ ಸಂಸ್ಥೆ ಸೆರಾಂ​ನ ಪ್ರಧಾನ ಕಾರ್ಯದರ್ಶಿ ಆದಾರ್ ಪೂನವಾಲಾ ತಿಳಿಸಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಏರ್​ಪೋರ್ಟ್​: ವಿದೇಶದಿಂದ ಬರುವವರಿಗೆ ಆರ್​ಟಿ-ಪಿಸಿಆರ್ ಟೆಸ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.