ETV Bharat / international

ತಾಂಜಾನಿಯಾದಲ್ಲಿ ಲಘು ಪ್ರಯಾಣಿಕ ವಿಮಾನ ಪತನ: 19 ಕ್ಕೇರಿದ ಸಾವಿನ ಸಂಖ್ಯೆ

ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷ. 43 ಪ್ರಯಾಣಿಕರನ್ನು ಹೊತ್ತಿದ್ದ ತಾಂಜಾನಿಯಾದ ಪ್ರಯಾಣಿಕ ವಿಮಾನ ಸರೋವರದಲ್ಲಿ ಪತನ.

Tanzania Plane crashes into Lake Victoria
ಸರೋವರಕ್ಕೆ ಬಿದ್ದ ವಿಮಾನ
author img

By

Published : Nov 7, 2022, 8:07 AM IST

ನೈರೋಬಿ (ಕೀನ್ಯಾ): 43 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವಿಮಾನವೊಂದು ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ತಾಂಜಾನಿಯಾದ ಬುಕೋಬ ನಗರದ ವಿಕ್ಟೋರಿಯಾ ಸರೋವರದಲ್ಲಿ ನಿನ್ನೆ ಪತನಗೊಂಡಿತ್ತು. ಈ ದುರ್ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ ಇದೀಗ 19ಕ್ಕೆ ಏರಿಕೆಯಾಗಿದೆ.

ದಾರ್ ಎಸ್‌ ಸಲಾಮ್‌ನಿಂದ ಬುಕೋಬ ನಗರಕ್ಕೆ ಹೊರಟಿದ್ದ ವಿಮಾನವು 'ಪ್ರೆಸೆಷನ್‌ ಏರ್‌ಲೈನ್ಸ್‌' ಕಂಪನಿಗೆ ಸೇರಿದೆ. ಬುಕೋಬ ವಿಮಾನ ನಿಲ್ದಾಣದಿಂದ ಕೇವಲ 100 ಮೀ. ದೂರದಲ್ಲಿರುವ ವಿಕ್ಟೋರಿಯಾ ಸರೋವರದಲ್ಲಿ ಬಿದ್ದಿದೆ. 39 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಹಾಗೂ ಇಬ್ಬರು ಸಿಬ್ಬಂದಿ ವಿಮಾನದಲ್ಲಿದ್ದರು. ಈ ವರೆಗೆ 24 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ.

ಇದನ್ನೂ ಓದಿ: 40 ಪ್ರಯಾಣಿಕರಿದ್ದ ಲಘು ವಿಮಾನ ತಾಂಜಾನಿಯಾದ ಸರೋವರದಲ್ಲಿ ಪತನ: 3 ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.