ಸ್ಯಾಂಟಿಯಾಗೊ ಡೆಲ್ ಎಸ್ಟೆರೊ: ಅರ್ಜೆಂಟೀನಾದಲ್ಲಿ ಮೋಟರ್ ರೇಸ್ ಶನಿವಾರ ನಡೆಯಲಿದೆ. ಗ್ರ್ಯಾನ್ ಪ್ರೀಮಿಯೊ ಮೈಕೆಲಿನ್ ಡೆ ಲಾ ರಿಪಬ್ಲಿಕಾ ಅರ್ಜೆಂಟೀನಾ ಚಾಂಪಿಯನ್ಶಿಪ್ಗೆ ರೇಸರ್ಗಳು ಸಜ್ಜಾಗಿದ್ದಾರೆ. ರೇಸ್ ಪ್ರೇಮಿಗಳಿಗೆ 'ಸೂಪರ್ ಶನಿವಾರ' ನೀಡಲು ಕಾತುರರಾಗಿದ್ದಾರೆ.
2019ರ ನಂತರ ಮೊದಲ ಬಾರಿಗೆ ಮೋಟೋಜಿಪಿ ರೇಸರ್ಗಳು ಗ್ರ್ಯಾನ್ ಪ್ರೀಮಿಯೊ ಮೈಕೆಲಿನ್ ಡೆ ಲಾ ರಿಪಬ್ಲಿಕಾ ಅರ್ಜೆಂಟೀನಾದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ನಾಯಕ ಎನೀಯಾ ಬಾಸ್ಟಿಯಾನಿನಿ (ಗ್ರೆಸಿನಿ ರೇಸಿಂಗ್ ಮೋಟೋಜಿಪಿ), ಇಂಡೋನೇಷ್ಯಾದ ಜಿಪಿ ವಿಜೇತ ಮಿಗುಯೆಲ್ ಒಲಿವೇರಾ (ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ರೇಸಿಂಗ್), 2021ರ ವಿಶ್ವ ಚಾಂಪಿಯನ್ ಫ್ಯಾಬಿಯೊ ಕ್ವಾರ್ಟರಾರೊ (ಮಾನೋಸ್ಟರ್ ಎನರ್ಜಿ ಯಮಹಾ ಮೋಟೋಜಿಪಿ) ಮತ್ತು ಮಾಂಡಲಿಕಾ ಪೋಡಿಯಂ ಫಿನಿಶರ್ ಜೋಹಾನ್ ಜರ್ಕೊ (ಪ್ರಮಾಕ್ ರೇಸಿಂಗ್) ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಅರ್ಜೆಂಟೀನಾದಲ್ಲಿ ಬೈಕ್‌ಗಳನ್ನು ಮರು ಜೋಡಿಸಲು ಗ್ಯಾರೇಜ್ ಮತ್ತು ಯಾವುದೇ ಸಾಧನಗಳು ಇಲ್ಲ. ಹೀಗಾಗಿ ಎಲ್ಲ ಮೆಕ್ಯಾನಿಕ್‌ಗಳಿಗೆ ಕಷ್ಟಕರವಾಗಿದೆ. ಆದರೆ, ಪ್ರತಿಯೊಂದು ಮೋಡಕ್ಕೂ ಒಂದು ಬೆಳ್ಳಿ ರೇಖೆ ಎಂಬುವುದೂ ಇದೇ ಇರುತ್ತದೆ ಎಂದು ಬಾಸ್ಟಿಯಾನಿನಿ ಅಭಿಪ್ರಾಯಪಟ್ಟರು.
ಈ ವೇಳೆ, ನಾನು ಎಲ್ಲ ರೀತಿಯ ಸಾಧನ, ಸೌಲಭ್ಯಗಳನ್ನೂ ಹೊಂದಿದ್ದೇನೆ. ಆದ್ದರಿಂದ ನಾನು ರೇಸ್ ಪ್ರಾರಂಭಿಸಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದ ಕ್ವಾರ್ಟರಾರೊ, ನಿಜವಾಗಿಯೂ ಇದು ಒಂದು ಸವಾಲಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮೆಕ್ಯಾನಿಕ್‌ಗಳಿಗೆ ಕಷ್ಟ. ಏಕೆಂದರೆ ಅವರಿಗೆ ಬಹಳಷ್ಟು ಕೆಲಸ ಇರುತ್ತದೆ ಎಂದರು.