ವಿದ್ಯಾರ್ಥಿಗಳ ಜೀವನದಲ್ಲಿ ಗ್ಯಾಜುಯೇಷನ್ ಡೇ ಎನ್ನುವುದು ಅತ್ಯಂತ ಖುಷಿ ನೀಡುವ ಕ್ಷಣ. ಪ್ರತಿಯೊಬ್ಬರೂ ತಮ್ಮ ಪದವಿ ಸಮಾರಂಭವನ್ನು ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಹಗಲು-ರಾತ್ರೆ ಎನ್ನದೇ ಕಷ್ಟಪಟ್ಟು ಓದಿ ಉತ್ತಮ ಅಂಕಗಳೊಂದಿಗೆ ತಮ್ಮ ಪದವಿ ವ್ಯಾಸಂಗ ಮುಗಿದಿರುವುದನ್ನು ನೆನೆದು ಕೆಲವರಂತೂ ತುಂಬಾ ಭಾವುಕರಾಗುತ್ತಾರೆ. ಆದರೆ, ಚೀನಾದ ವಿದ್ಯಾರ್ಥಿನಿಯೊಬ್ಬಳು ಈ ಕ್ಷಣವನ್ನು ಸಂಚಲನ ಸೃಷ್ಟಿಸುವ ರೀತಿಯಲ್ಲಿ ಸಂಭ್ರಮಿಸಿದ್ದು, ವಿದ್ಯಾರ್ಥಿನಿಯ ವಿಡಿಯೋ ವೈರಲ್ ಆಗಿದೆ.
ಬೀಜಿಂಗ್‌ನ 24 ವರ್ಷದ ಚೆನ್ ಯಿನಿಂಗ್ ಎಂಬ ವಿದ್ಯಾರ್ಥಿನಿ ಜನವರಿಯಲ್ಲಿ ಇಂಗ್ಲೆಂಡ್‌ನ ರೋಹ್ಯಾಂಪ್ಟನ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆಯುವ ವೇಳೆ ಕುಂಗ್ ಫೂ ಶೈಲಿಯ ಸೈಡ್ ಫ್ಲಿಪ್ ಅನ್ನು ಪ್ರದರ್ಶಿಸಿದಳು. ಈ ವೇಳೆ ಅಕ್ಕಪಕ್ಕ ಉಪಸ್ಥಿತರಿದ್ದ ಇತರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ವಿಡಿಯೋವನ್ನು ಆನ್‌ಲೈನ್‌ನಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಯುವತಿಯ ಆತ್ಮಸ್ಥೈರ್ಯವನ್ನು ನೋಡಿ ಎಲ್ಲರೂ ಬೆಕ್ಕಸ ಬೆರಗಾಗಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
-
Chinese student Chen Yining陈奕宁in UK, celebrating graduation in Kung fu style, remembered by teachers and fellow graduates, and goes viral in China’s social media today. pic.twitter.com/zjrbo9V4Se
— China in Pictures (@tongbingxue) March 4, 2023 " class="align-text-top noRightClick twitterSection" data="
">Chinese student Chen Yining陈奕宁in UK, celebrating graduation in Kung fu style, remembered by teachers and fellow graduates, and goes viral in China’s social media today. pic.twitter.com/zjrbo9V4Se
— China in Pictures (@tongbingxue) March 4, 2023Chinese student Chen Yining陈奕宁in UK, celebrating graduation in Kung fu style, remembered by teachers and fellow graduates, and goes viral in China’s social media today. pic.twitter.com/zjrbo9V4Se
— China in Pictures (@tongbingxue) March 4, 2023
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಕೂಡ ಈ ಕುರಿತು ವರದಿ ಮಾಡಿದ್ದು, "ಡ್ಯಾನ್ಸ್ ಪ್ರಾಕ್ಟೀಸ್ ಮತ್ತು ಪರ್ಫಾರ್ಮೆನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಚೆನ್ ಅವರು ಉತ್ಸಾಹದಿಂದ ವೇದಿಕೆ ಮೇಲೆ ಸೈಡ್ ಫ್ಲಿಪ್ ಪ್ರದರ್ಶಿಸಿದ್ದಾರೆ. ಆಕೆಯ ಅಗಾಧ ಆತ್ಮವಿಶ್ವಾಸ ಎಲ್ಲರನ್ನೂ ಅಚ್ಚರಿಗೊಳಿಸಿದೆ" ಎಂದು ತಿಳಿಸಿದೆ. ಮಾರ್ಚ್ 3 ರಂದು ಡೌಯಿನ್‌ನಲ್ಲಿ ಚೆನ್ ಯಿನಿಂಗ್ ತನ್ನ ಪದವಿ ಸಮಾರಂಭದ ವಿಡಿಯೋ ಕ್ಲಿಪ್ ಅನ್ನು ಅಪ್‌ಲೋಡ್ ಮಾಡಿದ ನಂತರ ಲಕ್ಷಾಂತರ ಮಂದಿ ಅವರ ಉತ್ಸಾಹದ ಶೈಲಿಯನ್ನು ಶ್ಲಾಘಿಸಿದ್ದಾರೆ.
ಪೋಸ್ಟ್ ನೋಡಿ ನೆಟ್ಟಿಗರು ಹೇಳಿದ್ದೇನು?: ಓರ್ವ ಆನ್ಲೈನ್ ಬಳಕೆದಾರರು ಕಾಮೆಂಟ್ ಮಾಡಿ ಪರೋಕ್ಷವಾಗಿ ಚೀನಿಯರ ಕಾಲೆಳೆದಿದ್ದಾರೆ. "ಎಲ್ಲಾ ಚೀನಿ ಜನರು ಕುಂಗ್ ಫೂ ಮಾಸ್ಟರ್ಸ್ ಅಲ್ಲ ಎಂದು ವಿದೇಶಿಯರಿಗೆ ವಿವರಿಸಲು ಈಗ ಹೆಚ್ಚು ಕಷ್ಟವಾಗುತ್ತದೆ" ಎಂದು ಬರೆದಿದ್ದಾರೆ. ಇನ್ನೊಬ್ಬರು, "ಈ ವಿಡಿಯೋ ಚೆನ್ ಯಿನಿಂಗ್ ಅವರ ವರ್ಚಸ್ಸು ತೋರಿಸುತ್ತದೆ. ಜೊತೆಗೆ ಯುವ ಪೀಳಿಗೆಗೆ ಉತ್ಸಾಹ ಮೂಡಿಸುತ್ತದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಲಂಡನ್ನಲ್ಲಿ ಎಂಎಸ್ ಪದವಿ ಸ್ವೀಕರಿಸುವಾಗ ಕನ್ನಡ ಧ್ವಜ ಪ್ರದರ್ಶಿಸಿದ ವಿದ್ಯಾರ್ಥಿ.. ವಿಡಿಯೋ ವೈರಲ್
ಕರ್ನಾಟಕದ ವಿದ್ಯಾರ್ಥಿಯ ವಿಡಿಯೋ ವೈರಲ್: ಈ ಹಿಂದೆ ಬ್ರಿಟನ್‌ನ ಲಂಡನ್ನಲ್ಲಿ ಕರ್ನಾಟಕದ ಮೂಲದ ವಿದ್ಯಾರ್ಥಿಯೋರ್ವ ತನ್ನ ಎಂಎಸ್ ಪದವಿ ಸ್ವೀಕಾರ ಸಮಾರಂಭದಲ್ಲಿ ಕನ್ನಡ ಧ್ವಜ ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಿಟಿ ಯೂನಿವರ್ಸಿಟಿ ಆಫ್ ಲಂಡನ್ನ ಬೇಯೆಸ್ ಬ್ಯುಸಿನೆಸ್ ಸ್ಕೂಲ್ (ಕ್ಯಾಸ್)ನ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಅಧೀಶ್ ಆರ್. ವಾಲಿ ಎಂಬ ಯುವಕ ಎಂಎಸ್ ಪದವಿ ಪೂರೈಸಿದ್ದು, ಪದವಿ ಸ್ವೀಕರಿಸಲು ಬಂದಾಗ ತಮ್ಮ ಜೇಬಿನಲ್ಲಿದ್ದ ಕನ್ನಡ ಧ್ವಜವನ್ನು ತೆಗೆದು ಎಲ್ಲರೆದುರು ಪ್ರದರ್ಶಿಸಿದ್ದನು. ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಅಧೀಶ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು.