ಅಥೆನ್ಸ್ (ಗ್ರೀಸ್): ಸಾವಿರಾರು ಪ್ರತಿಭಟನಾಕಾರರು ಬುಧವಾರ ಅಥೆನ್ಸ್ ಮತ್ತು ಉತ್ತರ ಗ್ರೀಕ್ ನಗರವಾದ ಥೆಸಲೋನಿಕಿ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಸಾರ್ವಜನಿಕ ಮತ್ತು ಕೆಲವು ಖಾಸಗಿ ವಲಯದ ಕಾರ್ಮಿಕರು ಬೆಲೆ ಏರಿಕೆಯನ್ನು ಖಂಡಿಸಿ, ಪ್ರತಿಭಟನೆ ನಡೆಸಿದರು. ಬೆಲೆ ಏರಿಕೆ ಖಂಡಿಸಿ 24 ಗಂಟೆಗಳ ಕಾಲ ಕೆಲಸ ಸ್ಥಗಿತಗೊಳಿದ್ದರು.
ಈ ಮುಷ್ಕರದಿಂದ ದೇಶಾದ್ಯಂತ ಸೇವೆಗಳಿಗೆ ಅಡ್ಡಿಪಡಿಸಿತು. ಗ್ರೀಸ್‌ನ ದ್ವೀಪಗಳಿಗೆ ಬರುವ ಹಡಗುಗಳ ಸಂಪರ್ಕ ಕಡಿತಗೊಂಡಿತ್ತು. ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಕಡಿಮೆ ಸಿಬ್ಬಂದಿಯೊಂದಿಗೆ ಸಾರ್ವಜನಿಕ ಆಸ್ಪತ್ರೆಗಳು ಕಾರ್ಯನಿರ್ವಹಿಸಿದ್ದು, ಹೆಚ್ಚಿನ ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿತ್ತು.
ಇದನ್ನೂ ಓದಿ: ವಿಶ್ವ ಆರ್ಥಿಕತೆಯಲ್ಲಿ ಬ್ರಿಟನ್ ಹಿಂದಿಕ್ಕಿದ ಭಾರತ.. 5ನೇ ಸ್ಥಾನಕ್ಕೆ ಜಿಗಿದ ಹಿಂದೂಸ್ತಾನ್
ಸಾವಿರಾರು ಜನರು ಅಥೆನ್ಸ್ನಲ್ಲಿ ಮೆರವಣಿಗೆ ನಡೆಸಿದರು. ಗ್ರೀಸ್‌ನ ಎರಡನೇ ಅತಿದೊಡ್ಡ ನಗರವಾದ ಥೆಸಲೋನಿಕಿಯಲ್ಲಿ, ಸುಮಾರು 11,000 ಜನರು ಪ್ರತಿಭಟನೆ ನಡೆಸಿದರು. ಯುವಕರು ಮೊಲೊಟೊವ್ ಕಾಕ್ಟೈಲ್ ಮತ್ತು ಕಲ್ಲುಗಳನ್ನು ಪೊಲೀಸರ ಮೇಲೆ ಎಸೆದರು. ಹಾಗಾಗಿ ಪೊಲೀಸರು ಅಶ್ರುವಾಯು ಮತ್ತು ಸ್ಟನ್ ಗ್ರೆನೇಡ್ಗಳನ್ನು ಹಾರಿಸಿದರು. ಯುರೋಪ್ ಕಳೆದ ಕೆಲವು ತಿಂಗಳುಗಳಿಂದ ಹಣ ದುಬ್ಬರದ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ.