ETV Bharat / international

ಆರ್ಥಿಕ ಬಿಕ್ಕಟ್ಟಿನಿಂದ ಸಂಪೂರ್ಣ ಕಂಗೆಟ್ಟ ಶ್ರೀಲಂಕಾ.. ಪ್ರತಿದಿನ 10 ಗಂಟೆ ವಿದ್ಯುತ್​ ಕಟ್​!

author img

By

Published : Mar 30, 2022, 4:26 PM IST

ತೀವ್ರ ಆರ್ಥಿಕ ಬಿಕ್ಕಟ್ಟು ಸಮಸ್ಯೆಗೊಳಗಾಗಿರುವ ಶ್ರೀಲಂಕಾಗೆ ಭಾರತ ಈಗಾಗಲೇ ಸಾಧ್ಯವಾದಷ್ಟು ಆರ್ಥಿಕ ಸಹಾಯ ಮಾಡಿದೆ. ಇದರ ಜೊತೆಗೆ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಣೆ ಮಾಡಿದೆ. ಔಷಧಿಗಳ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಿರುವ ಶ್ರೀಲಂಕಾಗೆ ಭಾರತದ ವಿದೇಶಾಂಗ ಸಚಿವರು ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ..

Sri Lanka plunges into 10-hour daily power cut

ಕೊಲಂಬೊ(ಶ್ರೀಲಂಕಾ) : ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ನೆರೆಯ ದೇಶ ಶ್ರೀಲಂಕಾ ಸಂಪೂರ್ಣವಾಗಿ ಕಂಗೆಟ್ಟು ಹೋಗಿದೆ. ಇನ್ನಿಲ್ಲದ ಸಮಸ್ಯೆ ಅನುಭವಿಸುವಂತಾಗಿದೆ. ಇದೀಗ ಶ್ರೀಲಂಕಾದಲ್ಲಿ ಇಂಧನ ಕೊರತೆ ಸಹ ಉಂಟಾಗಿದ್ದು,ಕಾರಣ ರಾಷ್ಟ್ರವ್ಯಾಪಿ 10 ಗಂಟೆಗಳ ಕಾಲ ದೈನಂದಿನ ವಿದ್ಯುತ ಕಡಿತ ಮಾಡಿದೆ. ವಿದೇಶಿ ವಿನಿಮಯದ ಕೊರತೆಯಿಂದಾಗಿ ಶ್ರೀಲಂಕಾ ತೀವ್ರ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟು ಎದುರಿಸುತ್ತಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯ ಮಟ್ಟದ ಏರಿಕೆ ಕಂಡು ಬಂದಿದೆ.

ಶ್ರೀಲಂಕಾದ ಲೋಕೋಪಯೋಗಿ ಆಯೋಗ ಇಂದಿನಿಂದ ಪ್ರತಿದಿನ 10 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸುವುದಾಗಿ ಪ್ರಕಟಣೆ ಹೊರಡಿಸಿದೆ. ಜಲವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ. ಉಷ್ಣ ವಿದ್ಯುತ್​ ಉತ್ಪಾದನೆ ಮಾಡಲು ಸರಿಯಾಗಿ ಇಂಧನ ಲಭ್ಯವಾಗುತ್ತಿಲ್ಲವಾದರಿಂದ 750 ಮೆಗಾವ್ಯಾಟ್ ವಿದ್ಯುತ್ ಕೊರತೆ ಉಂಟಾಗಿದೆ ಎಂದು ಲೋಕೋಪಯೋಗಿ ಆಯೋಗದ ಅಧ್ಯಕ್ಷ ಜನಕ ರತ್ನಾಯಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್​ ಪತನ: 8 ಯುಎನ್ ಶಾಂತಿಪಾಲಕರಲ್ಲಿ 6 ಪಾಕಿಸ್ತಾನಿ ಸೇನಾ ಸೈನಿಕರು ಸಾವು!

ತೀವ್ರ ಆರ್ಥಿಕ ಬಿಕ್ಕಟ್ಟು ಸಮಸ್ಯೆಗೊಳಗಾಗಿರುವ ಶ್ರೀಲಂಕಾಗೆ ಭಾರತ ಈಗಾಗಲೇ ಸಾಧ್ಯವಾದಷ್ಟು ಆರ್ಥಿಕ ಸಹಾಯ ಮಾಡಿದೆ. ಇದರ ಜೊತೆಗೆ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಣೆ ಮಾಡಿದೆ. ಔಷಧಿಗಳ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಿರುವ ಶ್ರೀಲಂಕಾಗೆ ಭಾರತದ ವಿದೇಶಾಂಗ ಸಚಿವರು ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಆರ್ಥಿಕ ದಿವಾಳಿತನದಿಂದಾಗಿ ಶ್ರೀಲಂಕಾದಲ್ಲಿ ಮುದ್ರಣ ಮಾಡಲು ಪೇಪರ್​ಗಳ ಕೊರತೆ ಸಹ ಉಂಟಾಗಿರುವ ಕಾರಣ ಈಗಾಗಲೇ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಿ, ಆದೇಶ ಹೊರಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.