ಸಿಯೋಲ್(ದಕ್ಷಿಣ ಕೊರಿಯಾ): ವಾಯುಪಡೆಗೆ ಸೇರಿದ ಎರಡು ತರಬೇತುದಾರ ವಿಮಾನಗಳು ಶುಕ್ರವಾರ ಪರಸ್ಪರ ಡಿಕ್ಕಿಯಾಗಿ ಮೂವರು ಪೈಲಟ್‌ಗಳು ಸಾವನ್ನಪ್ಪಿ, ಓರ್ವ ಗಾಯಗೊಂಡಿರುವ ಘಟನೆ ದಕ್ಷಿಣ ಕೊರಿಯಾದ ಆಗ್ನೇಯದಲ್ಲಿರುವ ಸಚೆನ್ನ ನಗರದ ಸಮೀಪ ನಡೆದಿದೆ ಎಂದು ಮಾಧ್ಯಮಗಳು ತಿಳಿಸಿವೆ.
ಆಗ್ನೇಯ ನಗರದ ಸಚೆನ್‌ನಲ್ಲಿ ಮಧ್ಯಾಹ್ನ 1:35ಕ್ಕೆ ಅಪಘಾತ ಸಂಭವಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಾಯುಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಅಧಿಕಾರಿಗಳನ್ನು ಉಲ್ಲೇಖಿಸಿರುವ ಯೋನ್ಹಾಪ್ ಸುದ್ದಿ ಸಂಸ್ಥೆ ಮೂವರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ. 30ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಅಪಘಾತ ನಡೆದ ಸ್ಥಳವನ್ನು ಶೋಧಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆಂದು ಯೋನ್ಹಾಪ್ ಮಾಹಿತಿ ನೀಡಿದೆ
ಇದನ್ನೂ ಓದಿ: ಶ್ರೀಲಂಕಾದಲ್ಲಿ ಬಿಗಡಾಯಿಸಿದ ಪರಿಸ್ಥಿತಿ; ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ, ಹಿಂಸಾಚಾರ