ETV Bharat / international

ಸೊಮಾಲಿಯಾ ಕಾರು ಬಾಂಬ್​ ಸ್ಫೋಟದಲ್ಲಿ ಮೃತರ ಸಂಖ್ಯೆ 100 ಕ್ಕೇರಿಕೆ; 300 ಜನರಿಗೆ ಗಾಯ

ಸೊಮಾಲಿಯಾದ ರಾಜಧಾನಿ ಮೊಗಾಡಿಶುನಲ್ಲಿ ಉಗ್ರರ ಉಪಟಳಕ್ಕೆ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.

Etv Bharatsomalia-car-bombing
ಸೊಮಾಲಿಯಾ ಕಾರು ಬಾಂಬ್​ ಸ್ಫೋಟ
author img

By

Published : Oct 30, 2022, 6:38 AM IST

Updated : Oct 30, 2022, 1:30 PM IST

ಮೊಗಾಡಿಶು(ಸೊಮಾಲಿಯಾ): ರಾಜಧಾನಿ ಮೊಗಾಡಿಶುನಲ್ಲಿ ಶನಿವಾರ ನಡೆದ ಪ್ರತ್ಯೇಕ ಕಾರು ಬಾಂಬ್​ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 100 ಕ್ಕೇರಿದೆ. ದುರ್ಘಟನೆಯಲ್ಲಿ 300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 2017 ರಲ್ಲಿ ನಡೆದ ಭೀಕರ ದಾಳಿಯಲ್ಲಿ 500 ಜನರು ಪ್ರಾಣ ಕಳೆದುಕೊಂಡಿದ್ದರು. ಇದಾದ ಬಳಿಕ ದೇಶದಲ್ಲಿ ನಡೆದ ಅತಿದೊಡ್ಡ ಬಾಂಬ್​ ದಾಳಿ ಇದಾಗಿದೆ.

ಈ ಬಗ್ಗೆ ರಾಷ್ಟ್ರಾಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಅವರೇ ಮಾಹಿತಿ ನೀಡಿದ್ದು, ಘಟನೆ ಭೀಕರವಾಗಿದೆ. ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸಾವು-ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚಬಹುದು. ದೇಶದ ಹೆಚ್ಚಿನ ಭಾಗ ಉಗ್ರರ ದಾಳಿಯಿಂದ ನಲುಗುತ್ತಿದೆ. ಈ ದಾಳಿಯೂ ಕೂಡ ಉಗ್ರ ಸಂಘಟನೆಯದ್ದೇ ಕೃತ್ಯವಾಗಿದೆ. ಹೇಡಿತನ ಮತ್ತು ಕ್ರೂರ ದಾಳಿಯ ವಿರುದ್ಧ ಸರ್ಕಾರ ಹೋರಾಡಲಿದೆ ಎಂದು ಹೇಳಿದ್ದಾರೆ.

ರಾಜಧಾನಿಯನ್ನೇ ಗುರಿಯಾಗಿಸಿಕೊಂಡು ನಡೆಸಲಾದ ಸ್ಫೋಟದಲ್ಲಿ ಮಕ್ಕಳು, ಮಹಿಳೆಯರು, ಪೊಲೀಸರು ಮತ್ತು ಪತ್ರಕರ್ತರು ಪ್ರಾಣತೆತ್ತಿದ್ದಾರೆ. ಉಗ್ರವಾದ ಹತ್ತಿಕ್ಕುವ ಬಗ್ಗೆ ಸರ್ಕಾರ ಸಭೆ ನಡೆಸುತ್ತಿರುವ ನಡುವೆಯೇ ದಾಳಿ ನಡೆದಿದೆ.

ಎಲ್ಲೆಲ್ಲಿ ಸ್ಫೋಟ?: ಸೊಮಾಲಿಯಾ ಅಧ್ಯಕ್ಷರು, ಪ್ರಧಾನಿ, ಹಿರಿಯ ಅಧಿಕಾರಿಗಳು ಭಯೋತ್ಪಾದನೆಯನ್ನು ಎದುರಿಸಲು ಸರಣಿ ಸಭೆ ನಡೆಸುತ್ತಿದ್ದಾರೆ. ಇದಕ್ಕೆ ಬೆದರಿಕೆ ಒಡ್ಡುವಂತೆ ಮೊಗಾಡಿಶುವಿನಲ್ಲಿ ಸರಣಿ ಬಾಂಬ್​ ಸ್ಫೋಟಿಸಲಾಗಿದೆ. ಶಿಕ್ಷಣ ಸಚಿವಾಲಯದ ಪಕ್ಕದಲ್ಲಿ ಮೊದಲ ಬಾಂಬ್​ ಸ್ಫೋಟಗೊಂಡರೆ, ಇನ್ನೊಂದನ್ನು ಜನನಿಬಿಡ ರೆಸ್ಟೋರೆಂಟ್​ ಮುಂದೆ ಸ್ಫೋಟಿಸಲಾಗಿದೆ.

ಉಗ್ರ ಸಂಘಟನೆಯಾದ ಅಲ್ ಖೈದಾ ಬೆಂಬಲಿತ ಅಲ್ ಶಬಾಬ್​ನಿಂದ ದಾಳಿ ನಡೆದಿರುವ ಬಗ್ಗೆ ಶಂಕಿಸಲಾಗಿದೆ. ಈವರೆಗೂ ಯಾವುದೇ ಸಂಘಟನೆ ಜವಾಬ್ದಾರಿ ಹೊತ್ತಿಲ್ಲ.

ಇದನ್ನೂ ಓದಿ: ದಕ್ಷಿಣ ಕೊರಿಯಾ: ಹ್ಯಾಲೋವೀನ್ ಹಬ್ಬದಲ್ಲಿ ಭೀಕರ ಕಾಲ್ತುಳಿತ, 151 ಮಂದಿ ಸಾವು

Last Updated : Oct 30, 2022, 1:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.