ಪ್ಯಾರಿಸ್( ಫ್ರಾನ್ಸ್): ಇಸ್ಲಾಮಿಕ್ ಉಗ್ರಗಾಮಿಯೊಬ್ಬ ಶಿಕ್ಷಕನ ಶಿರಚ್ಛೇದನ ಮಾಡಿದ ಪ್ರಕರಣವು ಫ್ರೆಂಚ್ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ, ಫ್ರೆಂಚ್ ಬಾಲಾಪರಾಧಿ ನ್ಯಾಯಾಲಯವು ಆರು ಹದಿಹರೆಯದವರಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
2020ರಲ್ಲಿ ಶಿಕ್ಷಕ ಸ್ಯಾಮ್ಯುಯೆಲ್ ಪಾಟಿ ಅವರು ಶಾಲೆಯಲ್ಲಿ ಇಸ್ಲಾಂ ಧರ್ಮದ ಪ್ರವಾದಿಯ ವ್ಯಂಗ್ಯಚಿತ್ರಗಳನ್ನು ತೋರಿಸಿದ್ದರು. ನಂತರ, ಅಪರಾಧಿ ಅಬ್ದುಲ್ಲಾಖ್ ಅಂಜೊರೊವ್, ಶಿಕ್ಷಕ ಚರ್ಚೆಯಲ್ಲಿ ತೊಡಗಿದ್ದ ಸಮಯದಲ್ಲೇ ಕೊಲೆ ಮಾಡಿದ್ದನು. ನಂತರ, ದಾಳಿಕೋರ ಅಬ್ದುಲ್ಲಾಖ್ ಅಂಜೊರೊವ್ನನ್ನು ಪೋಲಿಸರು ಗುಂಡಿಕ್ಕಿ ಕೊಂದಿದ್ದರು.
ನ್ಯಾಯಾಲಯವು, ಶಿಕ್ಷಕನನ್ನು ಕೊಂದ ಆರೋಪದಲ್ಲಿ 14 ಮತ್ತು 15 ವರ್ಷ ವಯಸ್ಸಿನ ಐವರು ಆರೋಪಿಗಳನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ. 13 ವರ್ಷದ ಇನ್ನೊಬ್ಬ ಆರೋಪಿ, ಕೊಲೆ ಪ್ರಕರಣದ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ತಪ್ಪಿತಸ್ಥ ಎಂದು ಪರಿಗಣಿಸಿದೆ. ಹದಿಹರೆಯದವರು ಒಂದೇ ಶಾಲೆ ವಿದ್ಯಾರ್ಥಿಗಳಾಗಿದ್ದಾರೆ. ಶಿಕ್ಷಕನ ಕೊಲೆ ಪ್ರಕರಣದ ಬಗ್ಗೆ ಸಾಕ್ಷ್ಯಗಳು ದೃಢಪಟ್ಟಿವೆ.
ಇದರಿಂದ ನ್ಯಾಯಾಲಯವು ಅಪರಾಧಿಗಳಿಗೆ ಜೈಲು ಶಿಕ್ಷೆ ಪ್ರಕಟಿಸಿದೆ. ಜೊತೆಗೆ ಅಪರಾಧಿಗಳ ನಿಯಮಿತ ವೈದ್ಯಕೀಯ ತಪಾಸಣೆ ನಡೆಸುವಂತೆ ಕೋರ್ಟ್ ಹೇಳಿದೆ. ನ್ಯಾಯಾಲಯದಿಂದ ತೀರ್ಪು ಪ್ರಕಟವಾದ ನಂತರ, ಅಪರಾಧಿಗಳು ತಲೆ ತಗ್ಗಿಸಿಕೊಂಡು ನಿಂತಿರುವ ದೃಶ್ಯ ಕಂಡು ಬಂದಿದೆ.
ಈ ಪ್ರಕರಣಕ್ಕೂ ಮುನ್ನ ನಡೆದಿತ್ತು ಚಾರ್ಲಿ ಹೆಬ್ಡೋ ಹತ್ಯೆ: ಈ ಹಿಂದೆ, ಪತ್ರಿಕೆಯೊಂದರಲ್ಲಿ ಚಾರ್ಲಿ ಹೆಬ್ಡೋ ಪ್ರವಾದಿಯ ವ್ಯಂಗ್ಯಚಿತ್ರ ಪ್ರಕಟಿಸಿದ್ದರು. ಈ ಪ್ರಕಟಣೆಯ ನಂತರ, ಉಗ್ರಗಾಮಿಗಳು 2015ರಲ್ಲಿ ಚಾರ್ಲಿ ಹೆಬ್ಡೋ ಅವರನ್ನು ಕಚೇರಿಯಲ್ಲಿ ಹತ್ಯೆ ಮಾಡಿದ್ದರು. ಇದಾದ ನಂತರ, ಇತಿಹಾಸ ಮತ್ತು ಭೌಗೋಳಿಕ ಶಿಕ್ಷಕ ಪಾಟಿ ಅವರು ಅಕ್ಟೋಬರ್ 16, 2020 ರಂದು ಪ್ಯಾರಿಸ್ ಉಪನಗರದಲ್ಲಿರುವ ಅವರ ಶಾಲೆಯಲ್ಲಿ ಪ್ರವಾದಿಯ ವ್ಯಂಗ್ಯಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದರು. ಇದಾದ ನಂತರ ಪ್ಯಾರಿಸ್‌ನ ಉತ್ತರದ ಕಾನ್ಫ್ಲಾನ್ಸ್- ಸೈಂಟ್- ಹೊನೊರಿನ್ ಕಮ್ಯೂನ್‌ನಲ್ಲಿ ಶಾಲಾ ಶಿಕ್ಷಕನ ಶಿರಚ್ಛೇದನ ಮಾಡಲಾಗಿತ್ತು.
ನಂತರ ಶಂಕಿತನನ್ನು ಫ್ರೆಂಚ್ ಪೊಲೀಸರು ಕೊಂದಿದ್ದರು. ಪ್ರಾಸಿಕ್ಯೂಟರ್ ಕಚೇರಿಯ ಭಯೋತ್ಪಾದನಾ ನಿಗ್ರಹ ವಿಭಾಗವು ಪ್ರಸ್ತುತ ಘಟನೆಯ ತನಿಖೆ ಕೈಗೊಂಡಿತ್ತು.
ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಪ್ರತಿಕ್ರಿಯೆ: "ಶಿಕ್ಷಕರು ಸಮಾಜದಲ್ಲಿ ಅತ್ಯಂತ ನಿರ್ಣಾಯಕ ಮಹತ್ವ ಪಾತ್ರ ವಹಿಸುತ್ತಾರೆ. ಅವರಿಂದಾಗಿ ಗಣರಾಜ್ಯ ಮತ್ತು ಅದರ ನಾಗರಿಕರು ಮುಕ್ತವಾಗಿ ಬದುಕುತ್ತಾರೆ. ನಾವು ಈ ಪ್ರಕರಣವನ್ಜು ಕೈಬಿಡುವುದಿಲ್ಲ" ಎಂದು ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಇತ್ತೀಚೆಗಷ್ಟೇ ತಿಳಿಸಿದ್ದರು.
ಇದನ್ನೂ ಓದಿ: ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ಗುಂಡು ಹಾರಿಸಿ ನಾಲ್ವರ ಹತ್ಯೆ: ಅಪ್ರಾಪ್ತ ಆರೋಪಿಗೆ ಜೀವಾವಧಿ ಶಿಕ್ಷೆ