ETV Bharat / international

Sikh man killed in Peshawar: ಪಾಕ್​ನ ಪೇಶಾವರದಲ್ಲಿ ಸಿಖ್​ ವ್ಯಕ್ತಿ ಗುಂಡಿಕ್ಕಿ ಹತ್ಯೆ, 48 ಗಂಟೆಯಲ್ಲಿ 2ನೇ ದಾಳಿ

author img

By

Published : Jun 25, 2023, 12:31 PM IST

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಮುಂದುವರಿದಿದೆ. ಸಿಖ್​ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಯಲ್ಲಿ ಮತ್ತೋರ್ವ ವ್ಯಕ್ತಿ ಹತ್ಯೆಯಾಗಿದ್ದಾರೆ.

ಪಾಕ್​ನ ಪೇಶಾವರದಲ್ಲಿ ಸಿಖ್​ ವ್ಯಕ್ತಿ ಗುಂಡಿಕ್ಕಿ ಹತ್ಯೆ

ಇಸ್ಲಾಮಾಬಾದ್: ಎರಡು ದಿನಗಳ ಹಿಂದಷ್ಟೇ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ (ಕೆಪಿಕೆ) ಪ್ರಾಂತ್ಯದ ಪೇಶಾವರದಲ್ಲಿ ಅಪರಿಚಿತ ಬಂದೂಕುಧಾರಿಗಳು ಸಿಖ್​ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಗಂಭೀರವಾಗಿ ಗಾಯಗೊಳಿಸಿದ್ದರು. ಇದಾದ 48 ಗಂಟೆಗಳಲ್ಲಿ ಮತ್ತೊಮ್ಮೆ ಕ್ರೌರ್ಯ ಮೆರೆದಿರುವ ಕಿಡಿಗೇಡಿಗಳು ಮತ್ತೊಬ್ಬ ಸಿಖ್​ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಇದು ಉದ್ದೇಶಿತ ದಾಳಿಯಾಗಿದ್ದು ಸರ್ಕಾರ ಭದ್ರತೆ ನೀಡಬೇಕು ಎಂದು ಅಲ್ಲಿನ ಸಿಖ್​ ಸಮುದಾಯ ಆಗ್ರಹಿಸಿದೆ.

ಮನಮೋಹನ್​ ಸಿಂಗ್​ (32) ಮೃತಪಟ್ಟ ವ್ಯಕ್ತಿ. ಪೇಶಾವರದ ಉಪನಗರವಾದ ರಶೀದ್ ಗರ್ಹಿಯ ನಿವಾಸಿಯಾಗಿದ್ದಾರೆ. ಪೇಶಾವರಕ್ಕೆ ಪ್ರಯಾಣಿಸುತ್ತಿದ್ದಾಗ ಗುಲ್ದಾರ ಚೌಕ್ ಕಕ್ಷಾಲ್ ಬಳಿ ಶಸ್ತ್ರಸಜ್ಜಿತ ವ್ಯಕ್ತಿಗಳ ದಾಳಿಗೆ ಒಳಗಾಗಿ ಪ್ರಾಣ ತೆತ್ತಿದ್ದಾರೆ. ಗುಂಡಿನ ದಾಳಿಗೀಡಾದ ಸಿಂಗ್​ರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಚಿಕಿತ್ಸೆ ನೀಡುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೇಶಾವರ ಮೂಲದ ಸಿಖ್ಖರು ಮೂಲತಃ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಸರಾಂತ ವೈದ್ಯ ಹಕೀಮ್ (ಯುನಾನಿ ವೈದ್ಯ) ರನ್ನು ಕಳೆದ ವರ್ಷ ಪೇಶಾವರದ ಅವರ ಆಸ್ಪತ್ರೆಯಲ್ಲೇ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಶುಕ್ರವಾರ(ಜೂನ್​ 23 ರಂದು) ಇನ್ನೊಬ್ಬ ಸಿಖ್​​ ವ್ಯಕ್ತಿಯ ಮೇಲೆ ಗುಂಡು ಹಾರಿಸಲಾಗಿತ್ತು. ಕಾಲುಗಳಿಗೆ ಗುಂಡು ತಗುಲಿ ಆತ ತೀವ್ರ ಗಾಯಗೊಂಡಿದ್ದ. ಪೇಶಾವರದಲ್ಲಿ ಸುಮಾರು 15,000 ಸಿಖ್ಖರು ನೆಲೆಸಿದ್ದಾರೆ. ಪ್ರಾಂತೀಯ ರಾಜಧಾನಿ ಪೇಶಾವರದ ಜೋಗನ್ ಶಾ ನೆರೆಹೊರೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ.

  • **We are deeply saddened to hear about the cold-blooded murder of Manmohan Singh in Peshawar, Pakistan today.**

    Manmohan Singh was a Sikh man who ran a grocery store in Rashid Garhi, Peshawar. He was the sole breadwinner for his family. He is survived by his wife, a child,… pic.twitter.com/V3EN5s0qRX

    — UNITED SIKHS (@unitedsikhs) June 24, 2023 " class="align-text-top noRightClick twitterSection" data=" ">

**We are deeply saddened to hear about the cold-blooded murder of Manmohan Singh in Peshawar, Pakistan today.**

Manmohan Singh was a Sikh man who ran a grocery store in Rashid Garhi, Peshawar. He was the sole breadwinner for his family. He is survived by his wife, a child,… pic.twitter.com/V3EN5s0qRX

— UNITED SIKHS (@unitedsikhs) June 24, 2023

ಕ್ರಮ, ಭದ್ರತೆಗೆ ಸಿಖ್​ ಸಂಘ ಆಗ್ರಹ: ನಿರಂತರ ದಾಳಿ, ಹತ್ಯೆಯಿಂದ ಆತಂಕಕ್ಕೀಡಾದ ಸಮುದಾಯದ ಸಂಘಟನೆಯಾದ ಯುನೈಟೆಡ್ ಸಿಖ್ಸ್ ಅಲ್ಪಸಂಖ್ಯಾತ ಸಮುದಾಯಕ್ಕೆ ಭದ್ರತೆ ಮತ್ತು ದಾಳಿಕೋರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಇತರ ಗುಂಪುಗಳೊಂದಿಗೆ ಪಾಕಿಸ್ತಾನದ ದೂತಾವಾಸವನ್ನು ಭೇಟಿ ಮಾಡುವುದಾಗಿ ಅದು ಹೇಳಿದೆ.

ಪಾಕಿಸ್ತಾನದಲ್ಲಿ ಸಿಖ್ಖರ ಮೇಲಿನ ಉದ್ದೇಶಿತ ದಾಳಿಗಳಿಂದ ಆತಂಕ್ಕೀಡಾಗಿದ್ದೇವೆ. ಈ ದಾಳಿಗಳು ಭಯಾನಕವಲ್ಲದಿದ್ದರೂ, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಗುಂಡಿನ ದಾಳಿ ನಡೆಸಿದ ಆಗಂತುಕರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಸಮುದಾಯದಕ್ಕೆ ನ್ಯಾಯ ಒದಗಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಕೊಲೆಯ ವಿಧಾನ ತುಂಬಾ ಭಯಾನಕವಾಗಿದೆ. ಪಾಕಿಸ್ತಾನದಿಂದ ಸಿಖ್ ಸಮುದಾಯವನ್ನು ಬೇರುಸಹಿತ ಕಿತ್ತೊಗೆಯುವ ಸಲುವಾಗಿ ನಡೆಸುತ್ತಿರುವ ಪಿತೂರಿಯಾಗಿದೆ. ಸಿಖ್ಖರು 1947 ರಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿ ಬದುಕುತ್ತಿದ್ದಾರೆ. ಕಷ್ಟಪಟ್ಟು ದುಡಿಯುವ ಸಿಖ್ಖರ ಮೇಲೆ ಏಕೆ ಹೆಚ್ಚುತ್ತಿರುವ ದಾಳಿ ಇದಾಗಿದೆ. ಅವರ ಹಿಂದೆ ಯಾರಿದ್ದಾರೆ? ಇದರ ಉದ್ದೇಶವೇನು? ಎಂಬುದನ್ನು ಪಾಕಿಸ್ತಾನ ಸರ್ಕಾರ ತುರ್ತು ತನಿಖೆ ಮಾಡಬೇಕಿದೆ ಎಂದು ಸಂಘಟನೆ ಕೋರಿದೆ.

ಕಳೆದ ವರ್ಷವೂ ಪೇಶಾವರದಲ್ಲಿ ಇಬ್ಬರು ಸಿಖ್ ಉದ್ಯಮಿಗಳಾದ ಕುಲ್ಜಿತ್ ಸಿಂಗ್ ಮತ್ತು ರಂಜಿತ್ ಸಿಂಗ್ ಎಂಬುವರನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದರು. ಪೇಶಾವರ ಸಮೀಪದ ಸರ್ಬಾದ್ ಪಟ್ಟಣದ ಬಾರಾ ಮಾರ್ಕೆಟ್‌ನಲ್ಲಿ ಇಬ್ಬರೂ ದಿನಸಿ ಅಂಗಡಿಗಳನ್ನು ಹೊಂದಿದ್ದರು.

ಇದನ್ನೂ ಓದಿ: ತೆಹ್ರೀಕ್-ಎ-ತಾಲಿಬಾನ್ ಉಗ್ರರ ಮಾತುಕತೆ ಪ್ರಸ್ತಾಪ ತಿರಸ್ಕರಿಸಿದ ಪಾಕ್ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.