ETV Bharat / international

Viral Video: ನೋಡ ನೋಡುತ್ತಿದ್ದಂತೆ ತಂದೆಯೆದುರೇ ಮಗನ ಕೊಂದು ತಿಂದ ಬೃಹತ್‌​ ಶಾರ್ಕ್‌! ಕ್ಯಾಮರಾದಲ್ಲಿ ಸೆರೆಯಾದ ಆಘಾತಕಾರಿ ಘಟನೆ - ಶಾರ್ಕ್‌ ದಾಳಿ

ಈಜಿಪ್ಟ್‌ನ ಹರ್ಘಾದಾದಲ್ಲಿ ವ್ಯಕ್ತಿಯೊಬ್ಬ ಶಾರ್ಕ್‌ನ ಬಾಯಿಗೆ ಆಹಾರವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

shark attack
ಟೈಗರ್​ ಶಾರ್ಕ್‌
author img

By

Published : Jun 11, 2023, 8:18 AM IST

ಈಜಿಪ್ಟ್‌ನ ಜನಪ್ರಿಯ ರೆಸಾರ್ಟ್‌ ಹರ್ಘಾದಾ ಎಂಬಲ್ಲಿ 23 ವರ್ಷದ ರಷ್ಯಾ ದೇಶದ ಪ್ರವಾಸಿಯೊಬ್ಬನನ್ನು ಬೃಹತ್ ಗಾತ್ರದ ಶಾರ್ಕ್‌ ಮೀನು ಕೊಂದು ತಿಂದಿರುವ ಭೀಕರ ಘಟನೆ ಜರುಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನೀರಿನ ಅಡಿಯಲ್ಲಿದ್ದ ಶಾರ್ಕ್‌ ಹಲವಾರು ಬಾರಿ ವ್ಯಕ್ತಿಯನ್ನು ಎಳೆದಿದೆ. ಆತ ಸಹಾಯಕ್ಕಾಗಿ ತನ್ನ ತಂದೆಯನ್ನು ಕಿರುಚಿ ಕರೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವ್ಲಾಡಿಮಿರ್ ಪೊಪೊವ್ ಎಂಬ ವ್ಯಕ್ತಿ ಗುರುವಾರ ಈಜಲು ಹೋಗಿದ್ದಾಗ ಟೈಗರ್​ ಶಾರ್ಕ್​ಗೆ ಆಹಾರವಾಗಿದ್ದಾನೆ. ಈ ಘಟನೆ ಕಂಡು ದಿಗ್ಭ್ರಮೆಗೊಂಡ ಆತನ ಗೆಳತಿಯು ಮೀನಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಮಗನ ರಕ್ಷಿಸಲಾಗದೇ ಅಸಹಾಯಕನಾಗಿ ನಿಂತಿದ್ದ ತಂದೆ : ವ್ಲಾಡಿಮಿರ್ ತನ್ನ ತಂದೆಯೊಂದಿಗೆ ಕೆಲವು ತಿಂಗಳುಗಳ ಹಿಂದೆ ರೆಸಾರ್ಟ್‌ಗೆ ಬಂದಿದ್ದ. ಶಾರ್ಕ್ ಮಾರಣಾಂತಿಕ ದಾಳಿಯನ್ನು ಆತನ ತಂದೆ ಭಯಭೀತರಾಗಿ ವೀಕ್ಷಿಸಿದ್ದಾರೆ. ಕಣ್ಣೆದುರೇ ಮಗ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದಾಗ ಆತನನ್ನು ರಕ್ಷಿಸಲಾಗದೇ ಅಸಹಾಯಕರಾಗಿಯೇ ನಿಂತಿದ್ದರು.

ಇದನ್ನೂ ಓದಿ : Whale Shark : ಮೀನುಗಾರರ ಬಲೆಯಲ್ಲಿ ಸಿಲುಕಿದ್ದ ವಿಶ್ವದ ಅತಿ ದೊಡ್ಡ ಮೀನಿನ ರಕ್ಷಣೆ

ವಿಡಿಯೋದಲ್ಲೇನಿದೆ? : ಪ್ರವಾಸಿಗನನ್ನು ಶಾರ್ಕ್ ಎಳೆದಾಡುತ್ತಿರುವ ದೃಶ್ಯವನ್ನು ತೀರದಿಂದ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿ, ಮೀನಿನ ದಾಳಿಯ ನಂತರ ನೀರು ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಂತೆ ಅವನು 'ಪಾಪಾ' ಎಂದು ಕಿರುಚುವುದನ್ನು ಕೇಳಬಹುದು. ಹಾಗೆಯೇ, ಹಿಂಬದಿ ನಿಂತಿದ್ದ ಒಬ್ಬ ಮಹಿಳೆ "ಓ ಮೈ ಗಾಡ್, ಓ ಮೈ ಗಾಡ್.." ಎಂದು ಹೇಳುತ್ತಿರುವುದು ಕೇಳಿಸುತ್ತದೆ.

  • Tourists stunned watching a Tiger Shark chomping a Russian tourist who was out on a swim at an Egypt beach resort

    23YO Vladimir Popov died in the attack, girlfriend escaped alive. Shark has been captured & killed pic.twitter.com/xUsitoCN5X

    — Nabila Jamal (@nabilajamal_) June 9, 2023 " class="align-text-top noRightClick twitterSection" data=" ">

ಇದನ್ನೂ ಓದಿ : ಒಡಿಶಾದಲ್ಲಿ ಕಂಡು ಬಂತು 40 ಅಡಿ ತಿಮಿಂಗಿಲದ ಮೃತದೇಹ : ವಿಡಿಯೋ

"ಹೋಟೆಲ್ ಸಿಬ್ಬಂದಿ ಕೂಡಲೇ ಅಪಾಯದ ಅಲಾರಂ ಹೊಡೆದು, ನೀರಿನಿಂದ ತಕ್ಷಣ ಎಲ್ಲರೂ ಮೇಲೆ ಬರುವಂತೆ ಉಳಿದ ಈಜುಗಾರರಿಗೆ ಸೂಚಿಸಿದರು. ಒಂದು ಸೆಕೆಂಡ್‌ನಲ್ಲಿ ದುರಂತ ನಡೆದೇಹೋಯಿತು. ಕೂಡಲೇ, ಅದು ಶಾರ್ಕ್ ಎಂದು ನನಗನ್ನಿಸಿತು. ತಕ್ಷಣ ನಾನು ನೀರಿಗೆ ಜಿಗಿದು ‘ಶಾರ್ಕ್, ಶಾರ್ಕ್! ನಿಮ್ಮನ್ನು ರಕ್ಷಿಸಿಕೊಳ್ಳಿ ಎಂದು ಕೂಗಲು ಪ್ರಾರಂಭಿಸಿದೆ. ಇದು ಯಾರಿಗೂ ಅರ್ಥವಾಗಲೇ ಇಲ್ಲ" ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದರು.

ಇದನ್ನೂ ಓದಿ : ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಶೋಧಕನನ್ನು ಕೊಂದ ಬಿಳಿ ಶಾರ್ಕ್

"ಇದು ನಿಜಕ್ಕೂ ಭಯಾನಕ ಘಟನೆ. ಆ ವ್ಯಕ್ತಿಯನ್ನು ಒಮ್ಮೆ ನೆನಪಿಸಿಕೊಂಡರೆ ಈಗಲೂ ನಾನು ನಡುಗುತ್ತೇನೆ. ನನ್ನ ಕಣ್ಣುಗಳ ಮುಂದೆಯೇ ಶಾರ್ಕ್ ಆ ವ್ಯಕ್ತಿಯನ್ನು ತಿಂದು ಹಾಕಿತು" ಎಂದು ಮತ್ತೋರ್ವ ಪ್ರತ್ಯಕ್ಷದರ್ಶಿ ಮಹಿಳೆ ಸುದ್ದಿ ಮಾಧ್ಯಮಗಳಿಗೆ ಹೇಳಿದರು. "ಹತ್ತಿರದ ಹೋಟೆಲ್‌ನ ಜೀವರಕ್ಷಕರು ಸೇರಿದಂತೆ ಕೆಲವು ವೀಕ್ಷಕರು ಪ್ರವಾಸಿಗನ ರಕ್ಷಣೆಗೆ ಧಾವಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ" ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ : ಆಸ್ಟ್ರೇಲಿಯಾದಲ್ಲಿ ಶಾರ್ಕ್​ ದಾಳಿಗೆ ಬಾಲಕಿ ಬಲಿ : 1960 ಬಳಿಕ ಇದೇ ಮೊದಲ ಪ್ರಕರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.