ETV Bharat / international

ಭೀಕರ ರಸ್ತೆ ಅಪಘಾತ: ಟ್ರಕ್ ಡಿಕ್ಕಿಗೆ 25 ಪ್ರವಾಸಿಗರ ದುರ್ಮರಣ

Brazil accident: ಬ್ರೆಜಿಲ್​ನಲ್ಲಿ ಭೀಕರ ಅಪಘಾತ ಸಂಭವಿಸಿ 25 ಮಂದಿ ಪ್ರವಾಸಿಗರು ದಾರುಣವಾಗಿ ಮೃತಪಟ್ಟಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ.

ಬ್ರೆಜಿಲ್‌ನಲ್ಲಿ ಭೀಕರ ರಸ್ತೆ ಅಪಘಾತ
ಬ್ರೆಜಿಲ್‌ನಲ್ಲಿ ಭೀಕರ ರಸ್ತೆ ಅಪಘಾತ
author img

By PTI

Published : Jan 9, 2024, 10:18 AM IST

ರಿಯೊ ಡಿ ಜನೈರೊ (ಬ್ರೆಜಿಲ್​) : ಬ್ರೆಜಿಲ್‌ನ ಈಶಾನ್ಯ ಬಹಿಯಾ ರಾಜ್ಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ 25 ಪ್ರವಾಸಿಗರು ದಾರುಣವಾಗಿ ಸಾವನ್ನಪ್ಪಿದ ಘಟನೆ ಸೋಮವಾರ ಸಂಭವಿಸಿದೆ. ದುರಂತದಲ್ಲಿ 6 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾವೊ ಜೋಸ್ ಡೊ ಜಕ್ಯೂಪ್ ನಗರದ ಸಮೀಪವಿರುವ ಹೆದ್ದಾರಿಯಲ್ಲಿ ಪ್ರವಾಸಿಗರನ್ನು ಸಾಗಿಸುತ್ತಿದ್ದ ಮಿನಿಬಸ್ ಮತ್ತು ಟ್ರಕ್ ನಡುವೆ ಸ್ಥಳೀಯ ಕಾಲಮಾನ 10.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರಭಸವಾಗಿ ಬಂದ ಟ್ರಕ್​, ಬಸ್ಸಿಗೆ ಗುದ್ದಿದ ಏಟಿಗೆ ಬಸ್​ ಛಿದ್ರವಾಗಿದೆ. ಇದರಿಂದಾಗಿ ಸಾವು ಸಂಭವಿಸಿದೆ ಎಂದು ಅಲ್ಲಿನ ಅಗ್ನಿಶಾಮಕ ದಳವು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ನೀಡಿದೆ.

ಬಹಿಯಾದ ಉತ್ತರ ಕರಾವಳಿಯಲ್ಲಿರುವ ಪ್ರವಾಸಿ ಗ್ವಾರಾಜೂಬಾ ಬೀಚ್‌ಗೆ ಪ್ರವಾಸ ತೆರಳಿದ್ದ ಮಿನಿಬಸ್​, ಅಲ್ಲಿಂದ ಜಾಕೋಬಿನಾ ನಗರಕ್ಕೆ ಹಿಂತಿರುಗುತ್ತಿತ್ತು. ವಾಹನಗಳೆರಡು ವೇಗವಾಗಿ ಚಲಿಸುತ್ತ ಓವರ್​ಟೇಕ್​ ಮಾಡುವಾಗ ಎದುರಿನಿಂದ ಬಂದ ಟ್ರಕ್​ ಬಸ್ಸಿಗೆ ಗುದ್ದಿರಬಹುದು ಎಂದು ಫೆಡರಲ್ ಹೆದ್ದಾರಿ ಪೊಲೀಸರು ಊಹಿಸಿದ್ದಾರೆ. ಆದರೆ, ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ. ಭೀಕರ ದುರಂತದ ಹಿನ್ನೆಲೆ ಜಾಕೋಬಿನಾ ಪುರಸಭೆಯು ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.

ಅಮೆರಿಕದಲ್ಲಿ ಭಾರತೀಯ ಕುಟುಂಬ ಸಾವು: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಪಿಕಪ್ ಟ್ರಕ್‌ಗೆ ಮಿನಿ ವ್ಯಾನ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಭಾರತೀಯ ಕುಟುಂಬದ ಕನಿಷ್ಠ ಆರು ಮಂದಿ ಸಾವನ್ನಪ್ಪಿದ ಘಟನೆ ಇತ್ತೀಚಿಗೆ ನಡೆದಿತ್ತು.

ಟೆಕ್ಸಾಸ್ ಸಾರ್ವಜನಿಕ ಸುರಕ್ಷತಾ ಇಲಾಖೆ (ಡಿಪಿಎಸ್) ನೀಡಿದ ಮಾಹಿತಿ ಪ್ರಕಾರ, ಫೋರ್ಟ್‌ವರ್ತ್ ಬಳಿಯ ಜಾನ್ಸನ್ ಕೌಂಟಿ ಬಳಿ ಈ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ಅಮಲಾಪುರಂ ಪಟ್ಟಣದ ಒಂದೇ ಕುಟುಂಬದ 7 ಜನರು ಮಿನಿ ವ್ಯಾನ್‌ನಲ್ಲಿದ್ದರು. ಅವರಲ್ಲಿ ಒಬ್ಬರಾದ 43 ವರ್ಷದ ಲೋಕೇಶ್ ಪೋತಬತುಲಾ ಎಂಬುವರು ಮಾತ್ರ ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದಾರೆ ಎಂದು ತಿಳಿಸಿದೆ.

ಮೃತಪಟ್ಟವರನ್ನು ಪೋತಬತುಲಾ ಅವರ ಪತ್ನಿ 36 ವರ್ಷದ ನವೀನ ಪೊತಬತುಲಾ, ದಂಪತಿಯ ಮಕ್ಕಳಾದ 9 ವರ್ಷದ ನಿಶಿಧಾ ಪೋತಬತುಲಾ ಮತ್ತು 10 ವರ್ಷದ ಕೃತಿಕ್ ಪೋತಬತುಲಾ ಹಾಗೂ ನವೀನ ಪೋತಬತುಲಾ ತಂದೆ ತಾಯಿಗಳಾದ 60 ವರ್ಷದ ಸೀತಾಮಹಾಲಕ್ಷ್ಮಿ ಪೊನ್ನದ ಮತ್ತು 64 ವರ್ಷದ ನಾಗೇಶ್ವರ ರಾವ್​ ಪೊನ್ನದ ಮತ್ತು ಮಿನಿ ವ್ಯಾನ್‌ ಚಾಲಕ ರುಶಿಲ್ ಬ್ಯಾರಿ (28) ಎಂದು ಗುರುತಿಸಲಾಗಿತ್ತು. ದಂಪತಿ L1 ವೀಸಾದಡಿ TCS ನಲ್ಲಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಋಷಿಕೇಶ್​ನಲ್ಲಿ ಭೀಕರ ರಸ್ತೆ ಅಪಘಾತ : ನಾಲ್ವರು ಅರಣ್ಯಾಧಿಕಾರಿಗಳು ಸಾವು, ಮಹಿಳಾ ಸಿಬ್ಬಂದಿ ನಾಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.