ನಾಮ್ ಪೆನ್ (ಕಾಂಬೋಡಿಯಾ): ಥಾಯ್ಲೆಂಡ್ ದೇಶದ ಗಡಿಯಲ್ಲಿರುವ ಕಾಂಬೋಡಿಯಾದ ಹೋಟೆಲ್ ಕ್ಯಾಸಿನೊದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 10 ಜನರು ಸಾವಿಗೀಡಾಗಿದ್ದಾರೆ. ಪೊಯಿಪೆಟ್‌ನಲ್ಲಿರುವ ಗ್ರ್ಯಾಂಡ್ ಡೈಮಂಡ್ ಸಿಟಿ ಹೋಟೆಲ್-ಕ್ಯಾಸಿನೊದಲ್ಲಿ ಬುಧವಾರ ಸ್ಥಳೀಯ ಕಾಲಮಾನ ರಾತ್ರಿ 11:30ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು.
ಈ ಅವಘಡದಲ್ಲಿ 10 ಜನರು ಸಾವನ್ನಪ್ಪಿದ್ದಾರೆ. 30 ಮಂದಿ ಗಾಯಗೊಂಡಿದ್ದಾರೆ. ಹೋಟೆಲ್‌ನಲ್ಲಿ ಸುಮಾರು 400 ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಬೋಡಿಯನ್ ಪೊಲೀಸರ ಅಂತಿಮ ವರದಿ ತಿಳಿಸಿದೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ತುಣುಕಲ್ಲಿ ಬೆಂಕಿ ಹೊಟೇಲ್ ಕಾಂಪೌಂಡ್ ಆವರಿಸಿರುವುದನ್ನು ನೋಡಬಹುದು. ಕೆಲವು ಕ್ಲಿಪ್‌ಗಳು, ಹೊತ್ತಿ ಉರಿಯುತ್ತಿರುವ ಕಟ್ಟಡದಿಂದ ಜನರು ಜಿಗಿಯುವುದನ್ನು ತೋರಿಸುತ್ತಿವೆ. ಬೆಂಕಿ ಆವರಿಸಿದ ಸಂದರ್ಭದಲ್ಲಿ ಕ್ಯಾಸಿನೊದಲ್ಲಿ ವಿದೇಶಿ ಪ್ರಜೆಗಳಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಸಕ್ಕರೆ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಮೂರನೇ ಮಹಡಿಯಿಂದ ಜಿಗಿದು ಎಂಜಿನಿಯರ್ ಸಾವು
ಗಾಯಾಳುಗಳನ್ನು ಥಾಯ್ಲೆಂಡ್‌ನ ಸಾ ಕೆಯೊ ಪ್ರಾಂತ್ಯದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಥಾಯ್ ಕಡೆಯಿಂದ ಅಗ್ನಿಶಾಮಕ ವಾಹನಗಳನ್ನು ಕಳುಹಿಸುವುದೂ ಸೇರಿದಂತೆ ಬೆಂಕಿ ನಿಯಂತ್ರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ದುಬೈ ಬುರ್ಜ್ ಖಲೀಫಾ ಪಕ್ಕದ 35 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ
ಥಾಯ್ ರಕ್ಷಣಾ ಕಾರ್ಯಾಚರಣೆಯ ಗುಂಪಿನ ರುವಾಮ್ಕಟಾನ್ಯು ಫೌಂಡೇಶನ್‌ನ ಸ್ವಯಂಸೇವಕರೊಬ್ಬರು, ಬೆಂಕಿಯು ಮೊದಲ ಮಹಡಿಯಲ್ಲಿ ಹೊತ್ತಿಕೊಂಡಿತ್ತು. ಬಳಿಕ ಕಟ್ಟಡದುದ್ದಕ್ಕೂ ಹರಡಿತು. ಬಹುಮಹಡಿ ಕಟ್ಟಡದ ಮೂಲಕ ಮೇಲಕ್ಕೂ ಬೆಂಕಿ ಹೊತ್ತಿಕೊಂಡಿತು ಎಂದು ಹೇಳಿದರು.
ಗ್ರ್ಯಾಂಡ್ ಡೈಮಂಡ್ ಸಿಟಿಯು ಥಾಯ್-ಕಾಂಬೋಡಿಯನ್ ಗಡಿಯಲ್ಲಿರುವ ಹಲವು ಕ್ಯಾಸಿನೊ-ಹೋಟೆಲ್‌ಗಳಲ್ಲಿ ಒಂದಾಗಿದೆ.