ETV Bharat / international

ಪ್ರಾರ್ಥನೆ ವೇಳೆ ಕುಸಿದು ಬಿದ್ದ ಮಸೀದಿ: 7 ಮಂದಿ ಭಕ್ತರು ಜೀವಂತ ಸಮಾಧಿ - ನೈಜೀರಿಯಾ

Nigeria mosque collapse: ವಾಯವ್ಯ ನೈಜೀರಿಯಾದಲ್ಲಿ ಮಸೀದಿಯೊಂದು ಪ್ರಾರ್ಥನೆಯ ವೇಳೆ ಕುಸಿದು ಬಿದ್ದಿದೆ. ದುರ್ಘಟನೆಯಲ್ಲಿ ಭಾರಿ ಸಾವು ನೋವು ಸಂಭವಿಸಿವೆ.

Representative image
ಪ್ರಾತಿನಿಧಿಕ ಚಿತ್ರ
author img

By

Published : Aug 12, 2023, 12:03 PM IST

ಅಬುಜಾ (ನೈಜೀರಿಯಾ): ವಾಯುವ್ಯ ನೈಜೀರಿಯಾದ ಕಡುನಾ ರಾಜ್ಯದಲ್ಲಿ ಶುಕ್ರವಾರ ಪ್ರಾರ್ಥನೆ ಮಾಡುತ್ತಿದ್ದ ವೇಳೆ ಝರಿಯಾ ಸೆಂಟ್ರಲ್ ಮಸೀದಿಯ ಒಂದು ಭಾಗ ಕುಸಿದು ಬಿದ್ದು ಏಳು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಘಟನೆ ನಡೆದಾಗ ನೂರಾರು ಜನರು ಮಸೀದಿಯ ಒಳಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಝರಿಯಾ ಸೆಂಟ್ರಲ್ ಮಸೀದಿ ಝರಿಯಾ ನಗರದಲ್ಲಿದೆ. ಇದು ಉತ್ತರ ನೈಜೀರಿಯಾದ ದೊಡ್ಡ ನಗರಗಳಲ್ಲಿ ಒಂದಾಗಿದೆ.

ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. "ಸ್ಥಳದಲ್ಲಿ ಹೃದಯ ವಿದ್ರಾವಕ ದೃಶ್ಯಗಳು ಕಂಡು ಬಂದವು. ಘಟನೆಯಲ್ಲಿ ಸುಮಾರು 23 ಮಂದಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ ಎಂದು ರಾಜ್ಯ ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. 1830ರ ದಶಕದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್​​ ಆದ ವಿಡಿಯೋದಲ್ಲಿ ಮಸೀದಿಯ ಮೇಲ್ಛಾವಣಿಯ ಒಂದು ಭಾಗ ಕುಸಿದು ಬೀಳುತ್ತಿರುವುದಲ್ಲಿ ಕಾಣಬಹುದಾಗಿದೆ.

'ಹೃದಯ ವಿದ್ರಾವಕ ಘಟನೆ': ಕಡುನಾ ಗವರ್ನರ್ ಉಬಾ ಸಾನಿ ಅವರು ದುರಂತದ ಬಗ್ಗೆ ತಕ್ಷಣ ತನಿಖೆಗೆ ಆದೇಶಿಸಿದರು. ಮತ್ತು ಇದನ್ನು ಹೃದಯ ವಿದ್ರಾವಕ ಘಟನೆ ಎಂದು ಕರೆದಿದ್ದಾರೆ. ಘಟನೆಯ ಸಂತ್ರಸ್ತರಿಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ತುರ್ತು ರಕ್ಷಣಾ ಸಿಬ್ಬಂದಿ ಈಗಾಗಲೇ ಝರಿಯಾದಲ್ಲಿದೆ ಎಂದು ಅವರ ಕಚೇರಿಯ ಮೂಲಗಳು ತಿಳಿಸಿವೆ. ಕಳೆದ ವರ್ಷ ಪಶ್ಚಿಮ ಆಫ್ರಿಕಾದ ರಾಷ್ಟ್ರದಲ್ಲಿ 10ಕ್ಕೂ ಹೆಚ್ಚು ಕಟ್ಟಡಗಳು ಕುಸಿದು ಬಿದ್ದ ಘಟನೆಗಳು ವರದಿಯಾಗಿದ್ದವು. ಬಳಿಕ ಈಗ ಮಸೀದಿ ಕುಸಿತ ಸಂಭವಿಸಿದೆ. ಕಟ್ಟಡ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಲು ಅಧಿಕಾರಿಗಳು ವಿಫಲರಾಗಿರುವುದು ಮತ್ತು ಕಳಪೆ ನಿರ್ವಹಣೆಯ ಇಂತಹ ಅನಾಹುತಗಳಿಗೆ ಕಾರಣ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.

ಇದನ್ನೂ ಓದಿ: ಮೂರಂಸ್ತಿನ ರೈಸ್​ ಮಿಲ್​ ಕಟ್ಟಡ ಕುಸಿತ: ಇಬ್ಬರ ಸಾವು, 30 ಕ್ಕೂ ಅಧಿಕ ಮಂದಿ ನಾಪತ್ತೆ

ಒಂದೇ ಕುಟುಂಬದ ಮೂವರ ಸಾವು: ಇತ್ತೀಚೆಗೆ ಗುಜರಾತ್​ನ ಜಾಮ್‌ನಗರದ ಸಾಧನಾ ಕಾಲೋನಿ ಬ್ಲಾಕ್ ಸಂಖ್ಯೆ 69 ಪ್ರದೇಶದಲ್ಲಿನ ಮೂರು ಅಂತಸ್ತಿನ ವಸತಿ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ್ದು, ಏಳು ಜನ ಗಾಯಗೊಂಡಿರುವ ಘಟನೆ ನಡೆದಿತ್ತು. 30 ವರ್ಷಗಳಷ್ಟು ಹಳೆಯದಾದ ವಸತಿ ಕಟ್ಟಡ ಇದಾಗಿತ್ತು. ಕಟ್ಟಡದಲ್ಲಿ ಒಟ್ಟು ಆರು ಫ್ಲ್ಯಾಟ್‌ಗಳಿದ್ದವು. ಈ ಪೈಕಿ ಎರಡು ಫ್ಲಾಟ್‌ಗಳಲ್ಲಿ ಕುಟುಂಬಗಳು ವಾಸಿಸುತ್ತಿದ್ದವು. ಏಕಾಏಕಿ ಕಟ್ಟಡದ ಒಂದು ಭಾಗ ಕುಸಿದು ಬಿದ್ದದ್ದರಿಂದ ಒಂದೆ ಕುಟುಂಬದ ಮೂವರು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪಾಲಿಕೆ ತಂಡವೂ ರಕ್ಷಣಾ ಕಾರ್ಯಾಚರಣೆ ನಡೆಸಿ, ಅವಶೇಷಗಳಡಿ ಸಿಲುಕಿದ್ದ ಜನರನ್ನು ರಕ್ಷಿಸಿದ್ದರು. ನಂತರ ಅವರನ್ನು ಚಿಕಿತ್ಸೆಗಾಗಿ ಜಾಮ್‌ನಗರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಮೂರು ಅಂತಸ್ತಿನ ವಸತಿ ಕಟ್ಟಡ ಕುಸಿತ: ಒಂದೇ ಕುಟುಂಬದ ಮೂವರ ಸಾವು, ಏಳು ಜನರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.