ಸ್ಯಾನ್ ಫ್ರಾನ್ಸಿಸ್ಕೋ: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕಂಪನಿಯೆಂದರೆ ಸ್ಯಾಮ್ಸಂಗ್. ಈ ಕಂಪನಿ ಮಾರುಕಟ್ಟೆಗೆ ಹಲವಾರು ಬಗೆಯ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದೆ. ಇದೀಗ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ ಹೊಸ "ಸ್ಯಾಮ್‌ಸಂಗ್ ಮೆಸೇಜ್ ಗಾರ್ಡ್" ಎಂಬ ಭದ್ರತಾ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಬಳಕೆದಾರರು ಮೋಸಕ್ಕೊಳಗಾದದಂತೆ ತಡೆಯುತ್ತದೆ.
ಮೊಬೈಲ್ ಬಳಕೆದಾರರಿಗೆ ಹೆಚ್ಚಿನ ಭದ್ರತೆ ಒದಗಿಸುವ ಟೆಕ್ ಸಂಸ್ಥೆ.. ಹೌದು, ಬಳಕೆದಾರರಿಗೆ ಸ್ಯಾಮ್‌ಸಂಗ್ ಮೆಸ್ಸೇಜ್ ಗಾರ್ಡ್ ಬಹಳ ಉಪಕಾರಿಯಾಗಿದೆ. "ಪೂರ್ವಭಾವಿಯಾಗಿ" ಬಳಕೆದಾರರನ್ನು ರಕ್ಷಿಸುವ ಮೂಲಕ ಹೆಚ್ಚಿನ ಭದ್ರತೆ ನೀಡುತ್ತದೆ ಎಂದು ದೈತ್ಯ ಟೆಕ್ ಸಂಸ್ಥೆ ಶುಕ್ರವಾರ ಬ್ಲಾಗ್ನಲ್ಲಿ ಪೋಸ್ಟ್ ಮಾಡಿ ತಿಳಿಸಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಸ್ಮಾರ್ಟ್‌ಫೋನ್ ವಿನ್ಯಾಸ ಹೇಗಿದೆ ಗೊತ್ತಾ..
ಫೋನ್ಗೆ ಇಮೇಜ್ ಫೈಲ್ ಬಂದಾಗ ಅದನ್ನು ಸಂದೇಶ ಗಾರ್ಡ್ ಪರಿಶೀಲಿಸುತ್ತದೆ.. ಹೊಸ ಸಂದೇಶ ಗಾರ್ಡ್ ಸುಧಾರಿತ "ಸ್ಯಾಂಡ್‌ಬಾಕ್ಸ್" ಅಥವಾ ಒಂದು ರೀತಿಯ ವರ್ಚುವಲ್ ಕ್ವಾರಂಟೈನ್ ಆಗಿದೆ. ಫೋನ್ಗೆ ಇಮೇಜ್ ಫೈಲ್ ಬಂದಾಗ ಅದನ್ನು ಸಂದೇಶ ಗಾರ್ಡ್ ಪರಿಶೀಲಿಸುತ್ತದೆ. ಪರಿಣಾಮವಾಗಿ ದುರುದ್ದೇಶಪೂರಿತ ಕೋಡ್, ಬಳಕೆದಾರರ ಫೋನ್‌ನ ಫೈಲ್‌ಗಳನ್ನು ಪ್ರವೇಶಿಸಲು ಅಥವಾ ಆಪರೇಟಿಂಗ್ ಸಿಸ್ಟಮ್ ತಲುಪಲು ಸಾಧ್ಯವಾಗುವುದಿಲ್ಲ. ಇದನ್ನು ವರ್ಷದ ನಂತರ ಇತರೆ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೂ ಅಳವಡಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ನ ISOCELL HP2 ಮಾರುಕಟ್ಟೆಗೆ ಬಿಡುಗಡೆ.. ಭಾರತದ 5G ಫೋನ್ ಮಾರುಕಟ್ಟೆ ಶೇ.70ರಷ್ಟು ವಿಸ್ತರಣೆ ಸಾಧ್ಯತೆ
ಬಳಕೆದಾರರ ಡೇಟಾ ಗುರಿಯಾಗಿಸಿಕೊಂಡು ಸೈಬರ್ ಖದೀಮರ ಕೈಚಳಕ.. "ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಅಧಿಕವಾಗುತ್ತಿವೆ. 2013 ಮತ್ತು 2021 ರ ನಡುವೆ ದರಗಳು ಮೂರು ಪಟ್ಟು ಹೆಚ್ಚಾದ ನಂತರ ಇಂತಹ ಕೃತ್ಯಗಳು ಅಧಿಕವಾಗುತ್ತಿವೆ. ಬಳಕೆದಾರರ ಡೇಟಾವನ್ನು ಗುರಿಯಾಗಿಸಿಕೊಂಡು ಸೈಬರ್ ಖದೀಮರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಪ್ರಪಂಚದಾದ್ಯಂತ ಮೂರು ಗ್ರಾಹಕರಲ್ಲಿ ಒಬ್ಬರು ಡೇಟಾ ಹ್ಯಾಕಿಂಗ್ಗೆ ಬಲಿಯಾಗಿದ್ದಾರೆ" ಎಂದು ಕಂಪನಿ ಉಲ್ಲೇಖಿಸಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ಗೆ One UI 5 ಅಪ್ಡೇಟ್ ಬಿಡುಗಡೆ
ಕಳೆದ ತಿಂಗಳ ಅಂದ್ರೆ ಜನವರಿ 17 ರಂದು ಸ್ಯಾಮ್‌ಸಂಗ್ 200 - ಮೆಗಾಪಿಕ್ಸೆಲ್ ಇಮೇಜ್ ಸೆನ್ಸಾರ್ - ISOCELL HP2 ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದು ಸುಧಾರಿತ ಪಿಕ್ಸೆಲ್ ತಂತ್ರಜ್ಞಾನ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ರೆಸಲ್ಯೂಶನ್ ಇಮೇಜ್ ಸಾಮರ್ಥ್ಯ ಹೊಂದಿದೆ. ಇದು ನಮ್ಮ ಸಂವೇದಕಗಳು ಪಿಕ್ಸೆಲ್‌ಗಳ ಸಂಖ್ಯೆ ಮತ್ತು ಗಾತ್ರವನ್ನು ಮೀರಿ ಹೋಗಲು ಅನುವು ಮಾಡಿಕೊಡುತ್ತದೆ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಸೆನ್ಸಾರ್ ಬ್ಯುಸಿನೆಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜೂನ್‌ಸಿಯೋ ಯಿಮ್ ಹೇಳಿಕೆಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಅಗ್ಗದ ಬೆಲೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ಸ್ಮಾರ್ಟ್‌ಫೋನ್ ಬಿಡುಗಡೆ