ನ್ಯೂಯಾರ್ಕ್ : ಆಗಸ್ಟ್‌ನಲ್ಲಿ ಮುಂಬೈ ಮೂಲದ ಖ್ಯಾತ ಲೇಖಕ ಸಲ್ಮಾನ್ ರಶ್ದಿ(75)ಗೆ ನ್ಯೂಯಾರ್ಕ್ನಲ್ಲಿ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಸದ್ಯ ರಶ್ದಿ ಚೇತರಿಸಿಕೊಂಡಿದ್ದು, ಅವರು ಒಂದು ಕಣ್ಣಿನ ದೃಷ್ಟಿ ಮತ್ತು ಒಂದು ಕೈ ಕಳೆದು ಕೊಂಡಿದ್ದಾರೆ ಸಾಹಿತ್ಯಿಕ ಏಜೆಂಟ್ ಒಬ್ಬರು ತಿಳಿಸಿದೆ.
ದಿ ಸೈಟಾನಿಕ್ ವರ್ಸಸ್ ಪುಸ್ತಕವನ್ನು ಬರೆದ ನಂತರ ರಶ್ದಿಗೆ ಇಸ್ಲಾಮಿಸ್ಟ್ಗಳಿಂದ ಜೀವ ಬೆದರಿಕೆ ಇತ್ತು. ಪಶ್ಚಿಮ ನ್ಯೂಯಾರ್ಕ್ ಚೌಟೌಕ್ವಾ ಸಂಸ್ಥೆಯಲ್ಲಿ ಆಗಸ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಶ್ದಿ ಅವರು ಉಪನ್ಯಾಸ ನೀಡುತ್ತಿದ್ದಾಗ 24 ವರ್ಷದ ಹದಿ ಮತರ್ ಎಂಬಾತ ದಿಢೀರ್ ವೇದಿಕೆಗೆ ಆಗಮಿಸಿ ಏಕಾಏಕಿ ಚಾಕುವಿನಿಂದ ದಾಳಿ ಮಾಡಿದ್ದ. ತಕ್ಷಣವೇ ಅವರನ್ನು ವಿಮಾನದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಶ್ದಿಯ ಕಣ್ಣಿಗೆ ಆಳವಾಗಿ ಗಾಯವಾಗಿದೆ ಇದರಿಂದ ಅವರು ದೃಷ್ಟಿ ಕಳೆದುಕೊಂಡಿದ್ದಾರೆ. ಅವರ ಕುತ್ತಿಗೆಯಲ್ಲಿ ಮೂರು ಕಡೆ ಗಂಭೀರ ಗಾಯಗಳಾಗಿವೆ. ತೋಳಿನ ನರಗಳು ಕತ್ತರಿಸಿದ ಕಾರಣ ಅವರ ಒಂದು ಕೈ ಕೆಲಸ ಮಾಡುವುದಿಲ್ಲ. ಅವರ ಎದೆ ಮತ್ತ ದೇಹದ ಮೇಲೆ 15 ಗಾಯಗಳಿವೆ ಎಂದು ಸಾಹಿತ್ಯಿಕ ಏಜೆಂಟ್ ಎಲ್ ಪಾಲ್ ಅವರು ಸ್ಪ್ಯಾನಿಷ್ ಪತ್ರಿಕೆ ಒಂದರ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : ಚಾಕು ದಾಳಿಗೀಡಾದ ಲೇಖಕ ಸಲ್ಮಾನ್ ರಶ್ದಿ ದೇಹಸ್ಥಿತಿ ತುಸು ಚೇತರಿಕೆ