ETV Bharat / international

ಉಕ್ರೇನ್‌ನ ಕೊನೆಯ ಪೂರ್ವ ಭದ್ರಕೋಟೆಗೆ ರಷ್ಯನ್ನರ ಲಗ್ಗೆ.. ಉಕ್ರೇನ್​ ಪಡೆಗಳ ಪ್ರತಿ ಹೋರಾಟ! - ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಹೋರಾಟ

ಉಕ್ರೇನ್‌ನ ಕೊನೆಯ ಪೂರ್ವ ಭದ್ರಕೋಟೆ ಸುತ್ತುವರಿಯಲು ರಷ್ಯನ್ನರು ತಮ್ಮ ಹೋರಾಟ ಮುಂದುವರಿಸಿದ್ದಾರೆ.

Russians fight to encircle Ukraine last eastern stronghold  RUSSIA UKRAINE WAR  Ukraine shopping mall news  ಉಕ್ರೇನ್‌ನ ಕೊನೆಯ ಪೂರ್ವ ಭದ್ರಕೋಟೆಯನ್ನು ಸುತ್ತುವರಿಯಲು ರಷ್ಯನ್ನರ ಹೋರಾಟ  ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಹೋರಾಟ  ಉಕ್ರೇನ್​ ಶಾಪಿಂಗ್​ ಮಾಲ್​ ಮೇಲೆ ದಾಳಿ
ಉಕ್ರೇನ್‌ನ ಕೊನೆಯ ಪೂರ್ವ ಭದ್ರಕೋಟೆಯನ್ನು ಸುತ್ತುವರಿಯಲು ರಷ್ಯನ್ನರ ಹೋರಾಟ
author img

By

Published : Jun 30, 2022, 8:12 AM IST

ಕ್ರೆಮೆನ್‌ಚುಕ್ (ಉಕ್ರೇನ್): ಉಕ್ರೇನಿಯನ್​ನ ಕೊನೆಯ ಭದ್ರಕೋಟೆ ಪೂರ್ವ ಪ್ರಾಂತ್ಯವನ್ನು ಸುತ್ತುವರಿಯಲು ರಷ್ಯಾ ಪಡೆಗಳು ಹೋರಾಡುತ್ತಿವೆ. ಆದ್ರೆ ರಷ್ಯಾ ಪಡೆಗಳನ್ನು ಸರ್ಮಥವಾಗಿಯೇ ಉಕ್ರೇನ್​ ಪಡೆಗಳು ಹಿಮ್ಮೆಟ್ಟಿಸಿವೆ. ಎರಡು ದಿನಗಳ ಹಿಂದೆ ಉಕ್ರೇನ್​ನ ಕ್ರೆಮೆನ್​ಚುಕ್​ನಲ್ಲಿರುವ ಶಾಪಿಂಗ್​ ಮಾಲ್​ವೊಂದರ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಕನಿಷ್ಠ 18 ಜನರನ್ನು ಸಾವನ್ನಪ್ಪಿದ್ದಾರೆ.

ಉಕ್ರೇನ್‌ನಿಂದ ಸಂಪೂರ್ಣ ಡಾನ್‌ಬಾಸ್ ಪ್ರದೇಶವನ್ನು ವಶಪಡಿಸಿಕೊಳ್ಳಲು ರಷ್ಯಾದ ಪಡೆಗಳು ಲಿಸಿಚಾನ್ಸಕ್​ ದಕ್ಷಿಣದ ಎರಡು ಹಳ್ಳಿಗಳ ಕಡೆಗೆ ತೆರಳುತ್ತಿದ್ದವು. ಆದರೆ, ಉಕ್ರೇನಿಯನ್ ಪಡೆಗಳು ತಮ್ಮ ಸುತ್ತುವರಿಯುವಿಕೆ ವಿರುದ್ಧ ತಡೆಯಲು ಹೋರಾಡಿದವು.

ಉಕ್ರೇನ್‌ನ ಪಡೆಗಳು ನೆರೆಯ ನಗರವಾದ ಸ್ವ್ಯಾರೊಡೊನೆಟ್ಸಕ್​ನಿಂದ ಹಿಮ್ಮೆಟ್ಟಿಸಿದ ನಂತರ ಲುಹಾನ್ಸಕ್​ ಪ್ರಾಂತ್ಯದ ಕೊನೆಯ ನಗರವಾದ ಲಿಸಿಚಾನ್ಸಕ್​ ಅನ್ನು ವಶಪಡಿಸಿಕೊಳ್ಳಲು ರಷ್ಯಾದ ಪಡೆಗಳು ತಮ್ಮ ಆಕ್ರಮಣದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಿವೆ ಎಂದು ಬ್ರಿಟನ್​ ರಕ್ಷಣಾ ಸಚಿವಾಲಯ ಹೇಳಿದೆ.

ಓದಿ: ಪುಟಿನ್ ಭಯೋತ್ಪಾದಕ, ವಿಶ್ವಸಂಸ್ಥೆಯಿಂದ ರಷ್ಯಾ ಹೊರಹಾಕಿ: ಝೆಲೆನ್​ಸ್ಕಿ ಆಗ್ರಹ

ರಷ್ಯಾದ ಪಡೆಗಳು ಮತ್ತು ಅವರ ಪ್ರತ್ಯೇಕತಾವಾದಿ ಮಿತ್ರರು ಲುಹಾನ್ಸಕ್​ನ ಶೇ.95 ರಷ್ಟು ಮತ್ತು ಡೊನೆಟ್ಸಕ್​ನ ಅರ್ಧದಷ್ಟು ಭಾಗವನ್ನು ನಿಯಂತ್ರಿಸಿದರು. ಇದು ಹೆಚ್ಚಾಗಿ ರಷ್ಯನ್ - ಮಾತನಾಡುವ ಡಾನ್‌ಬಾಸ್ ಅನ್ನು ರೂಪಿಸುವ ಎರಡು ಪ್ರಾಂತ್ಯಗಳಾಗಿವೆ.

ಉಕ್ರೇನಿಯನ್ನರು ತಮ್ಮ ಪ್ರದೇಶಗಳನ್ನು ಮರಳಿ ವಶಕ್ಕೆ ಪಡೆಯಲು ಮತ್ತೆ ಯುದ್ಧಕ್ಕೆ ಮರಳುವ ಸಾಧ್ಯತೆಯಿದೆ. ಅಷ್ಟೇ ಅಲ್ಲ ರಷ್ಯಾದ ಪಡೆಗಳ ಮಾನವಶಕ್ತಿ ಮತ್ತು ಸಂಪನ್ಮೂಲಗಳನ್ನು ಬರಿದುಮಾಡುತ್ತಿವೆ ಎಂಬದು ವಾಷಿಂಗ್ಟನ್ ಮೂಲದ ಥಿಂಕ್ ಟ್ಯಾಂಕ್ ಇನ್‌ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ವಾರ್‌ನ ಇತ್ತೀಚಿನ ವರದಿ ಹೇಳುತ್ತಿದೆ.

ಪಶ್ಚಿಮದಿಂದ ಹೆಚ್ಚುತ್ತಿರುವ ವೆಚ್ಚಗಳು ಮತ್ತು ಯುದ್ಧದ ದೀರ್ಘಾವಧಿಯಿಂದ ಉಂಟಾದ ನಷ್ಟದಿಂದಾಗಿ ರಷ್ಯಾ ‘ಸಮಯವು ತನ್ನ ಕಡೆ ಇದೆ ಎಂದು ಭಾವಿಸಬಹುದು’ ಎಂದು ಯುಎಸ್ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಅವ್ರಿಲ್ ಹೇನ್ಸ್ ಹೇಳಿದ್ದಾರೆ.

ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಅನ್ನು ಆಕ್ರಮಿಸುತ್ತದೆ ಎಂದು ಯುಎಸ್ ಸರಿಯಾಗಿ ಊಹಿಸಿತ್ತು. ಆದರೆ, ಅದು ತ್ವರಿತವಾಗಿ ಕೀವ್​ ಅನ್ನು ವಶಪಡಿಸಿಕೊಳ್ಳುತ್ತದೆ ಎಂದು ಹೇಳಿರುವುದು ತಪ್ಪಾಗಿದೆ. ಬುಧವಾರ ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹೇನ್ಸ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮೊದಲು ಹೊಂದಿದ್ದ ರಾಜಕೀಯ ಗುರಿಗಳನ್ನೇ ಪರಿಣಾಮಕಾರಿಯಾಗಿ ಹೊಂದಿದ್ದಾರೆ. ಅಂದರೆ ಅವರು ಉಕ್ರೇನ್‌ನ ಹೆಚ್ಚಿನ ಭಾಗವನ್ನು ವಶಪಡಿಸಿಕೊಳ್ಳಲು ಬಯಸುತ್ತಾರೆ ಎಂದು ಹೇಳಿದರು.

ಕ್ರೆಮೆನ್‌ಚುಕ್‌ನಲ್ಲಿರುವ ಶಾಪಿಂಗ್ ಮಾಲ್‌ನ ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ. ಇನ್ನು 20 ಜನರು ಕಾಣೆಯಾಗಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.