ವಾಷಿಂಗ್ಟನ್( ಅಮೆರಿಕ): ಫೆಬ್ರವರಿ 24ಕ್ಕೆ ಉಕ್ರೇನ್ ಮೇಲೆ ದಾಳಿ ಆರಂಭಿಸಿದ್ದ ರಷ್ಯಾ, ಗಡಿಯಲ್ಲಿರುವ ಚೆರ್ನೋಬಿಲ್ ಪರಮಾಣು ಸ್ಥಾವರವನ್ನು ವಶಕ್ಕೆ ಪಡೆದುಕೊಂಡಿತ್ತು. ಅಂದಿನಿಂದ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ನಿಷ್ಕ್ರಿಯ ಅಣು ಸ್ಥಾವರ ಸ್ಥಳದಿಂದ ರಷ್ಯಾ ಸೇನೆ ಹೊರ ಬರುತ್ತಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಬುಧವಾರ ಮಾಹಿತಿ ನೀಡಿದ್ದಾರೆ.
ಚೆರ್ನೋಬಿಲ್ನಿಂದ ಕೆಲವು ರಷ್ಯಾ ಪಡೆಗಳು ತೆರಳುತ್ತಿದ್ದರೆ, ಇನ್ನು ಕೆಲವು ಪಡೆಗಳು ಅಲ್ಲಿಂದ ಹೊರ ಬಂದು ಬೇರೊಂದು ಸ್ಥಳಕ್ಕೆ ಹೋಗುತ್ತಿವೆ. ಕೆಲವು ಪಡೆಗಳು ಬೆಲಾರಸ್ಗೆ ಹೋಗುತ್ತಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೆಲವು ಪಡೆಗಳು ಮಾತ್ರ ಚೆರ್ನೋಬಿಲ್ ಅಣು ಸ್ಥಾವರ ಸೈಟ್ನಿಂದ ಕಾಲ್ಕಿತ್ತಿವೆ. ಆದರೆ ಸಂಪೂರ್ಣ ರಷ್ಯಾ ಪಡೆ ಅಲ್ಲಿಂದ ತೆರಳಿದೆ ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಅಮೆರಿಕ ಅಧಿಕಾರಿ ಹೇಳಿದ್ದಾರೆ.
ಇದನ್ನು ಓದಿ: ಬಹುಮತ ಕಳೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಬಿಎಪಿ ಪಕ್ಷದಿಂದಲೂ ಬೆಂಬಲ ವಾಪಸ್