ETV Bharat / international

ಮರಿಯುಪೋಲ್ ಉಕ್ಕಿನ ಘಟಕದ ಮೇಲೆ ಶೆಲ್ ದಾಳಿ ಆರಂಭಿಸಿದ ರಷ್ಯಾ - ನ್ಯಾಷನಲ್ ಗಾರ್ಡ್ ಬ್ರಿಗೇಡ್ ಕಮಾಂಡರ್ ಡೆನಿಸ್ ಶ್ಲೇಗಾ

ಉಕ್ಕಿನ ಘಟಕದಿಂದ ಒಂದು ಸುತ್ತಿನ ನಾಗರಿಕರ ತೆರವು ಬಾಕಿ ಇತ್ತು. ಹತ್ತಾರು ಸಣ್ಣ ಮಕ್ಕಳು ಕೈಗಾರಿಕೆಗಳ ಬಂಕರ್‌ಗಳಲ್ಲಿ ಇದ್ದಾರೆ ಎಂದು ಉಕ್ರೇನಿಯನ್ ನ್ಯಾಷನಲ್ ಗಾರ್ಡ್ ಬ್ರಿಗೇಡ್ ಕಮಾಂಡರ್ ಡೆನಿಸ್ ಶ್ಲೇಗಾ ತಿಳಿಸಿದ್ದಾರೆ.

Russia resumes shelling of steel plant in Mariupol
ಮರಿಯುಪೋಲ್ ಉಕ್ಕಿನ ಘಟಕದ ಮೇಲೆ ಶೆಲ್ ದಾಳಿ ಆರಂಭಿಸಿದ ರಷ್ಯಾ
author img

By

Published : May 2, 2022, 9:47 AM IST

ಕೀವ್(ಉಕ್ರೇನ್​​): ನಾಗರಿಕರ ಭಾಗಶಃ ಸ್ಥಳಾಂತರದ ನಡುವೆ ರಷ್ಯಾದ ಪಡೆಗಳು ಉಕ್ರೇನ್‌ನ ಮರಿಯುಪೋಲ್‌ ನಗರದ ಉಕ್ಕಿನ ಘಟಕದ ಮೇಲೆ ಶೆಲ್ ದಾಳಿಯನ್ನು ಪುನರಾರಂಭಿಸಿದೆ ಎಂದು ಉಕ್ರೇನ್ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೂರದರ್ಶನದ ಸಂದರ್ಶನವೊಂದರಲ್ಲಿ ಮಾತನಾಡಿರುವ ನ್ಯಾಷನಲ್ ಗಾರ್ಡ್ ಬ್ರಿಗೇಡ್ ಕಮಾಂಡರ್ ಡೆನಿಸ್ ಶ್ಲೇಗಾ, ಅಜೋವ್‌ಸ್ಟಲ್ ಉಕ್ಕಿನ ಘಟಕದಿಂದ ಒಂದು ಸುತ್ತಿನ ನಾಗರಿಕರ ತೆರವು ಬಾಕಿ ಇತ್ತು. ಹತ್ತಾರು ಸಣ್ಣ ಮಕ್ಕಳು ಕೈಗಾರಿಕೆಗಳ ಬಂಕರ್‌ಗಳಲ್ಲಿ ಇದ್ದಾರೆ. ಸ್ಥಾವರದಿಂದ ನಾಗರಿಕರ ಸ್ಥಳಾಂತರವನ್ನು ರಕ್ಷಣಾ ಸಿಬ್ಬಂದಿ ನಿಲ್ಲಿಸಿದ ತಕ್ಷಣ ಶೆಲ್ ದಾಳಿ ಪ್ರಾರಂಭವಾಯಿತು ಎಂದು ಹೇಳಿದರು.

ಸುಮಾರು 500 ಮಂದಿ ಗಾಯಗೊಂಡ ಸೈನಿಕರು ಮತ್ತು ಹಲವಾರು ಮೃತ ದೇಹಗಳ ಜತೆಗೆ ಇನ್ನೂ ನೂರಾರು ನಾಗರಿಕರು ಸ್ಥಳದಲ್ಲಿ ಸಿಲುಕಿದ್ದಾರೆ ಎಂದು ಕಮಾಂಡರ್ ಅಂದಾಜಿಸಿದ್ದಾರೆ. ಈ ಘಟಕವು ರಷ್ಯನ್ನರು ಆಕ್ರಮಿಸದ ನಗರದ ಏಕೈಕ ಭಾಗವಾಗಿದೆ. ರಷ್ಯಾದ ರಕ್ಷಣಾ ಸಚಿವಾಲಯವು ಭಾನುವಾರ ಪ್ರಕಟಿಸಿರುವ ವಿಡಿಯೋದಲ್ಲಿ ಜನರು ಉಕ್ಕಿನ ಘಟಕದಿಂದ ಹೊರಬರುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ: 'ನಮ್ಮ ಭೂಮಿಯಲ್ಲಿ ನಾಶವಾಗುವುದಕ್ಕಿಂತ ನೀವು ರಷ್ಯಾದಲ್ಲಿ ಬದುಕುವುದು ಉತ್ತಮ'

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.