ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಪರಮಾಣು ದಾಳಿಗೆ ಸಿದ್ಧತೆ ನಡೆಸಿದೆಯಾ?. ಹೀಗೊಂದು ಪ್ರಶ್ನೆ ಉದ್ಭವಿಸಲು ರಷ್ಯಾ ತನ್ನ ಮಿತ್ರ ರಾಷ್ಟ್ರ ಬೆಲಾರಸ್‌ಗೆ ಪರಮಾಣು ಕ್ಷಿಪಣಿಯನ್ನು ಸಾಗಿಸಿದೆ. ಇದು ಉಕ್ರೇನ್ ಯುದ್ಧದ ಭಾಗವಾಗಿ ಕೈಗೊಂಡ ಕ್ರಮ ಎಂದು ಶಂಕಿಸಲಾಗಿದೆ.
ಬೆಲಾರಸ್‌ಗೆ ಪರಮಾಣು ಕ್ಷಿಪಣಿಯನ್ನು ಸಾಗಿಸಿದ ಬಗ್ಗೆ ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೇ ಬಹಿರಂಗಪಡಿಸಿದ್ದಾರೆ. ನಿನ್ನೆಯಷ್ಟೇ(ಶನಿವಾರ) ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕೆಂಕೋ ಮತ್ತು ವ್ಲಾಡಿಮಿರ್ ಪುಟಿನ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ದಿನದ ಬಳಿಕ ಪರಮಾಣು ಹೊತ್ತ ರಷ್ಯಾ ಸೇನಾ ವಾಹನ ಬೆಲಾರಸ್ ಗಡಿಗೆ ಬಂದಿದೆ.
ಉಭಯ ನಾಯಕರ ಭೇಟಿ ವೇಳೆ ಮಾತನಾಡಿದ ಪುಟಿನ್, ಬೆಲಾರಸ್‌ಗೆ ಐಕಾಸೆಂಡರ್-ಎಂ ಯುದ್ಧತಂತ್ರದ ಕ್ಷಿಪಣಿ ವ್ಯವಸ್ಥೆಗಳನ್ನು ಒದಗಿಸಲು ನಿರ್ಧರಿಸಿದ್ದೇವೆ. ಉಭಯ ದೇಶಗಳ ರಕ್ಷಣಾ ವ್ಯವಸ್ಥೆ ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.
ಲಿಥುವೇನಿಯಾಗೆ ಎಚ್ಚರಿಕೆ: ಕೆಲ ದಿನಗಳ ಹಿಂದಷ್ಟೇ ಬೆಲಾರಸ್ ಜೊತೆ ಗಡಿ ಹಂಚಿಕೊಂಡಿರುವ ಲಿಥುವೇನಿಯಾ ತನ್ನ ದೇಶದ ಗಡಿಭಾಗದಿಂದ ರಷ್ಯಾ ಸಲಕರಣೆಗಳ ಸಾಗಣೆಯನ್ನು ನಿಷೇಧಿಸಿ ಶಾಕ್ ನೀಡಿತ್ತು. ಇದನ್ನು ಟೀಕಿಸಿದ್ದ ರಷ್ಯಾ, ಬೆಲಾರಸ್‌ಗೆ ಯುದ್ಧ ಸಾಮಗ್ರಿಗಳನ್ನು ಸಾಗಿಸಿ ಎಚ್ಚರಿಕೆ ನೀಡಿದೆ.
ಓದಿ: ದ.ಆಫ್ರಿಕಾದ ನೈಟ್‌ಕ್ಲಬ್‌ನಲ್ಲಿ 17 ಜನರ ಶವ ಪತ್ತೆ! ಕಾರಣ ನಿಗೂಢ