ETV Bharat / international

ಇನ್ನಷ್ಟು ಡ್ರೋನ್‌, ಕ್ಷಿಪಣಿ ಪೂರೈಕೆಗೆ ಇರಾನ್‌ನತ್ತ ದೃಷ್ಟಿ ನೆಟ್ಟ ರಷ್ಯಾ: ಅಮೆರಿಕ ಕಳವಳ - ರಾಷ್ಟ್ರೀಯ ಭದ್ರತಾ ಮಂಡಳಿ ಅಧಿಕಾರಿಗಳು

ಒಂಬತ್ತು ತಿಂಗಳುಗಳಿಂದ ಯುದ್ಧ ಮುಂದುವರಿಸುತ್ತಲೇ ಇರುವ ರಷ್ಯಾ ಇನ್ನೊಂದೆಡೆ ಫಿರಂಗಿಗಾಗಿ ಉತ್ತರ ಕೊರಿಯಾದತ್ತ ಗಮನ ಹರಿಸಿದೆ ಎಂದು ಬೈಡನ್​​ ಸರ್ಕಾರ ಕಳವಳ ವ್ಯಕ್ತಪಡಿಸಿದೆ.

russia-looks-iran-supplying-more-drones-missiles-us-concern
ಕ್ಷಿಪಣಿ ಪೂರೈಕೆಗೆ ಇರಾನ್‌ನತ್ತ ದೃಷ್ಟಿ ನೆಟ್ಟ ರಷ್ಯಾ
author img

By

Published : Dec 8, 2022, 11:10 AM IST

ವಾಷಿಂಗ್ಟನ್​ ​: ಕಳೆದ ಒಂಬತ್ತು ತಿಂಗಳುಗಳಿಂದ ಉಕ್ರೇನ್​ನಲ್ಲಿ ಯುದ್ಧ ಮಾಡುತ್ತಿರುವ ಉಕ್ರೇನ್​ ಸ್ಥಿರವಾದ ಶಸ್ತ್ರಾಸ್ತ್ರಗಳ ಪೂರೈಕೆ ನಿರ್ವಹಿಸಲು ಹೆಣಗಾಡುತ್ತಿದೆ. ಮಾಸ್ಕೋ ಇದೀಗ ರಷ್ಯಾದ ಮಿಲಿಟರಿಗೆ ಅಗತ್ಯವಿರುವ ಡ್ರೋನ್​ಗಳು ಹಾಗೂ ಕ್ಷಿಪಣಿಗಳನ್ನು ಮರು ಪೂರೈಸಲು ಮತ್ತೊಮ್ಮೆ ಇರಾನ್​ನತ್ತ ದೃಷ್ಟಿ ಹರಿಸಿದೆ ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ.

ರಷ್ಯಾ ಇರಾನ್‌ನಿಂದ ಹೆಚ್ಚುವರಿ ಸುಧಾರಿತ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಪಡೆಯಲು ಪ್ರಯತ್ನಿಸಬಹುದು. ಇರಾನ್‌ನಿಂದ ಮತ್ತೆ ಹೆಚ್ಚಿನ ಕ್ಷಿಪಣಿಗಳನ್ನು ಪಡೆಯಲು ರಷ್ಯಾ ಪ್ರಯತ್ನಿಸಬಹುದು ಎಂದು ಅಮೆರಿಕ​ ಆಡಳಿತ ವಿಶೇಷವಾಗಿ ಕಳವಳ ವ್ಯಕ್ತಪಡಿಸಿದೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ಅಧಿಕಾರಿಗಳು ತಿಳಿದ್ದಾರೆ.

ಟೆಹ್ರಾನ್ ಮತ್ತು ಆರು ಪ್ರಮುಖ ಪ್ರಬಲ ದೇಶಗಳ ನಡುವೆ ಪರಮಾಣು ಒಪ್ಪಂದ ಅನುಮೋದಿಸಿದ 2015 ರ ಭದ್ರತಾ ಮಂಡಳಿಯ ನಿರ್ಣಯ ಉಲ್ಲಂಘಿಸಿ ರಷ್ಯಾಕ್ಕೆ ನೂರಾರು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಮಾರಾಟ ಮಾಡಲು ಇರಾನ್ ಯೋಚಿಸಿದೆ ಎಂದು ಅಮೆರಿಕ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ.

2015 ರ ಒಪ್ಪಂದಕ್ಕೆ ರಷ್ಯಾ ಕೂಡ ಸಹಿ ಹಾಕಿದ್ದು, ಈಗ ನಿರ್ಣಯ ದುರ್ಬಲಗೊಳಿಸಿ ಇರಾನ್​ನಿಂದ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಪಡೆಯುವ ಯೋಜನೆಯಲ್ಲಿದೆ. ಇವುಗಳಿಗೆ ಪ್ರತಿಯಾಗಿ ರಷ್ಯಾ ಇರಾನ್‌ಗೆ ಏನು ನೀಡಲಿದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ ಎಂದು ಹೇಳಿದರು.

ರಷ್ಯಾ ಮತ್ತು ಇರಾನ್ ನಡುವಿನ ರಕ್ಷಣಾ ಸಹಕಾರದಲ್ಲಿ ಬೆಳವಣಿಗೆ ಕಂಡು ಬರುತ್ತಿದ್ದು, ಆ ಪ್ರದೇಶಗಳ ಭದ್ರತೆ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ. ಒಂಬತ್ತು ತಿಂಗಳುಗಳಿಂದ ಯುದ್ಧ ಮುಂದುವರಿಸುತ್ತಲೇ ಇರುವ ರಷ್ಯಾ ಇನ್ನೊಂದೆಡೆ ಫಿರಂಗಿಗಾಗಿ ಉತ್ತರ ಕೊರಿಯಾದತ್ತ ಗಮನ ಹರಿಸಿದೆ ಎಂದು ಬೈಡನ್​​​ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: 2 ದಿನದಲ್ಲಿ ಖೆರ್ಸನ್​ ಪ್ರದೇಶದ ಮೇಲೆ 54 ಶೆಲ್​ ದಾಳಿ ಮಾಡಿದ ರಷ್ಯಾ: ಉಕ್ರೇನ್​ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.