ಬೆರಿಸ್ಲಾವ್ (ಉಕ್ರೇನ್): ಅಂತಾರಾಷ್ಟ್ರೀಯ ಮಾಧ್ಯಮವೊಂದು ಪಡೆದ ವಿಶೇಷ ಡ್ರೋನ್ ಫೋಟೋಗಳು ಮತ್ತು ಮಾಹಿತಿಯ ಪ್ರಕಾರ, ಈ ತಿಂಗಳ ಆರಂಭದಲ್ಲಿ ರಷ್ಯಾದ ನಿಯಂತ್ರಣದಲ್ಲಿದ್ದ ಉಕ್ರೇನಿಯನ್ ಅಣೆಕಟ್ಟನ್ನು ಉರುಳಿಸುವ ಉದ್ದೇಶ ಮತ್ತು ಅವಕಾಶವನ್ನು ರಷ್ಯಾ ಹೊಂದಿತ್ತು ಎಂದು ತಿಳಿಸಿದೆ.
ಕಾಖೋವ್ಕಾ ಅಣೆಕಟ್ಟಿನ ಮೇಲಿನಿಂದ ತೆಗೆದ ಕೆಲ ಫೋಟೋಗಳಲ್ಲಿ ಸ್ಫೋಟಕ ತುಂಬಿದ ಕಾರನ್ನು ಕಾಣಬಹುದು. ರಷ್ಯಾದ ಪಡೆಗಳು ಉದ್ದೇಶಪೂರ್ವಕವಾಗಿ ಅಣೆಕಟ್ಟನ್ನು ನಾಶಪಡಿಸಿದೆ. ಈ ಸ್ಫೋಟವು ಕೇಂದ್ರೀಕೃತವಾಗಿತ್ತು ಎಂದು ಎಂದು ಉಕ್ರೇನಿಯನ್ ಅಧಿಕಾರಿಗಳು ಆರೋಪಿಸಿದ್ದಾರೆ. ಆದರೆ, ರಷ್ಯಾದ ರಕ್ಷಣಾ ಸಚಿವಾಲಯವು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಣೆಕಟ್ಟಿನ ವಿನಾಶವು ಮಾರಣಾಂತಿಕ ಪ್ರವಾಹಕ್ಕೆ ಕಾರಣವಾಯಿತು, ಡ್ನೀಪರ್ ನದಿಯ ದ್ವೀಪದಲ್ಲಿ ವಾಸಿಸುತ್ತಿದ್ದ ನೂರಾರು ಜನರು ಮಿಲಿಟರಿ ದೋಣಿ ಹಾಗೂ ತೆಪ್ಪಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ರೆಡ್ ಕ್ರಾಸ್ ತಂಡಗಳು ಜನರನ್ನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿತ್ತು. ಜೊತೆಗೆ, ಬ್ರೆಡ್‌ಬಾಸ್ಕೆಟ್‌ನಲ್ಲಿ ಅಳಿವಿನಂಚಿನಲ್ಲಿರುವ ಬೆಳೆಗಳು ನಾಶವಾಗಿದ್ದು, ಸಾವಿರಾರು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು.
ಸ್ಫೋಟದ ನಂತರ ಸಂಭವಿಸಿದ ಬೃಹತ್ ಪ್ರವಾಹದ ವೇಳೆ ರಷ್ಯಾ ಕೆಲ ಪ್ರಯೋಜನ ಪಡೆದಿದೆ, ಆದರೂ ಅದು ಆಕ್ರಮಿಸಿಕೊಂಡಿರುವ ಪ್ರದೇಶಗಳು ಸಹ ಪ್ರವಾಹಕ್ಕೆ ಸಿಲುಕ್ಕಿದ್ದವು. ರಷ್ಯಾ ಆಕ್ರಮಿತ ನೋವಾ ಕಾಖೋವ್ಕಾ ನಗರ ಜಲಾವೃತಗೊಂಡಿತ್ತು. ಈ ಸ್ಫೋಟವನ್ನು ರಷ್ಯಾ ಪಡೆಗಳು ನಡೆಸಿರುವ 'ಇಕೋಸೈಡ್' (ಪರಿಸರ ಹತ್ಯಾಕಾಂಡ) ಎಂದು ಉಕ್ರೇನ್ ಆಡಳಿತ ವ್ಯಾಖ್ಯಾನಿಸಿದೆ. ಆದರೆ, ಇದಕ್ಕೆ ಉಕ್ರೇನ್ ಹೊಣೆ ಎಂದು ರಷ್ಯಾ ಆರೋಪಿಸಿದೆ.
ಇದನ್ನೂ ಓದಿ : ರಷ್ಯಾ ಬಾಂಬ್ ದಾಳಿಯಿಂದ ಉಕ್ರೇನ್‌ನ ಬೃಹತ್ ಅಣೆಕಟ್ಟೆಗೆ ಹಾನಿ, ಭಾರಿ ಪ್ರವಾಹ ಸಾಧ್ಯತೆ- ವಿಡಿಯೋ
ಇನ್ನು ಕಾಖೋವ್ಕಾ ಅಣೆಕಟ್ಟನ್ನು 2014 ರಲ್ಲಿ ಮಾಸ್ಕೋ ತನ್ನ ಪ್ರದೇಶ ಎಂದು ಘೋಷಿಸಿಕೊಂಡಿತ್ತು. 2022ರ ಫೆಬ್ರವರಿ ತಿಂಗಳಲ್ಲಿ ಯುದ್ಧ ಪ್ರಾರಂಭಿಸಿದಾಗ ಅಣೆಕಟ್ಟನ್ನು ರಷ್ಯಾ ವಶಪಡಿಸಿಕೊಂಡಿತ್ತು. ಇದು ಮುಖ್ಯವಾಗಿ ಕ್ರಿಮಿಯಾ ಪರ್ಯಾಯ ದ್ವೀಪಕ್ಕೆ ನೀರು ಒದಗಿಸುತ್ತದೆ.
ಇತ್ತೀಚಿನ ವಾರಗಳಲ್ಲಿ ಉಕ್ರೇನ್‌ನ ಸಶಸ್ತ್ರ ಪಡೆಗಳು ಪ್ರತಿದಾಳಿ ತೀವ್ರಗೊಳಿಸಿದ್ದು, ಫೆಬ್ರವರಿ 2022 ರಲ್ಲಿನಡೆಸಿದ ಆಕ್ರಮಣದಿಂದ ರಷ್ಯನ್ನರು ವಶಪಡಿಸಿಕೊಂಡ ಕೆಲ ಪ್ರದೇಶವನ್ನು ಹಿಂಪಡೆದುಕೊಂಡಿವೆ.
ಇದನ್ನೂ ಓದಿ : ರಷ್ಯಾ ಬಾಂಬ್ ದಾಳಿಯಿಂದ ಉಕ್ರೇನ್‌ನ ಬೃಹತ್ ಅಣೆಕಟ್ಟೆಗೆ ಹಾನಿ, ಭಾರಿ ಪ್ರವಾಹ ಸಾಧ್ಯತೆ- ವಿಡಿಯೋ
ಇನ್ನೊಂದೆಡೆ, ರಷ್ಯಾದ ಅಸ್ತಿತ್ವ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲೂ ದೇಶ ಸಿದ್ಧವಿದೆ ಎಂದು ಘೋಷಿಸಿದೆ. ಪ್ರಮುಖ ಸೇನಾ ನಾಯಕನನ್ನು ಉಕ್ರೇನ್ ಬಾಂಬ್ ಹಾಕಿ ಉಡಾಯಿಸಿದ ಬಳಿಕ ರಷ್ಯಾ ಕೆರಳಿದ್ದು, ಉಕ್ರೇನ್ ಮೇಲೆ ಯುದ್ಧ ತೀವ್ರಗೊಳಿಸಲು ಮುಂದಾಗಿದೆ. ಸರ್ವನಾಶವನ್ನೇ ಸೃಷ್ಟಿಸುವ ಪರಮಾಣು ಬಾಂಬ್ಗಳನ್ನು ತನ್ನ ಗಡಿಯಲ್ಲಿರುವ ಮಿತ್ರರಾಷ್ಟ್ರವಾದ ಬೆಲಾರಸ್ಗೆ ಕಳುಹಿಸಿಕೊಟ್ಟಿದೆ. ದೇಶದ ರಾಜ್ಯತ್ವಕ್ಕೆ ಬೆದರಿಕೆಯಿದ್ದರೆ ತೀವ್ರತರವಾದ ಹಾದಿಯನ್ನು ಹಿಡಿಯಬೇಕಾಗುತ್ತದೆ. ನಾವು ಖಂಡಿತವಾಗಿಯೂ ಎಲ್ಲಾ ಪಡೆಗಳನ್ನು ಬಳಸುತ್ತೇವೆ. ರಷ್ಯಾದ ತನಗಾಗಿ ಏನು ಬೇಕಾದರೂ ಮಾಡಲು ಸಜ್ಜಾಗಿರುತ್ತದೆ ಎಂದು ಸ್ವತಃ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೇ ಮಾಹಿತಿ ನೀಡಿದ್ದಾರೆ.