ETV Bharat / international

ಪಾಕಿಸ್ತಾನದಲ್ಲಿ ರಾಜಕೀಯ ನಾಯಕರ ಹತ್ಯೆಯ ಮಹಾ ಚರಿತ್ರೆ.. ದಾಳಿಯಲ್ಲಿ ಸತ್ತವರೆಷ್ಟು.. ಬದುಕಿ ಬಂದವರೆಷ್ಟು?

author img

By

Published : Nov 3, 2022, 9:15 PM IST

ಪಖ್ತುಂಖ್ವಾದ ಮಾಜಿ ಗವರ್ನರ್ ಹಯಾತ್ ಮೊಹಮ್ಮದ್ ಹಯಾತ್ ಖಾನ್ ಶೆರ್ಪಾವೊ, ಬಾಂಬ್ ಸ್ಫೋಟದಲ್ಲಿ ಕೊಲ್ಲಲ್ಪಟ್ಟರು. ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸಹ - ಸಂಸ್ಥಾಪಕರಲ್ಲಿ ಒಬ್ಬರು ಎಂಬುದು ಗಮನಾರ್ಹ

Read: Mapping significant assassination attempts in Pakistan over the years
ಪಾಕಿಸ್ತಾನದಲ್ಲಿ ರಾಜಕೀಯ ನಾಯಕರ ಹತ್ಯೆಯ ಮಹಾಚರಿತ್ರೆ...ದಾಳಿಯಲ್ಲಿ ಸತ್ತವರೆಷ್ಟು.. ಬದುಕಿ ಬಂದವರೆಷ್ಟು?

ನವದೆಹಲಿ: ಪಾಕಿಸ್ತಾನದಲ್ಲಿ ಪ್ರಧಾನಿಗಳು ಹಾಗೂ ಇತರ ಪ್ರಮುಖ ರಾಜಕೀಯ ವ್ಯಕ್ತಿಗಳ ಮೇಲೆ ಹತ್ಯೆ ಯತ್ನಗಳು ಹೊಸದೇನಲ್ಲ. ಪಾಕ್​ನಲ್ಲಿ ಇಂತಹ ಹಿಂಸಾಚಾರಕ್ಕೆ ಅತಿದೊಡ್ಡ ಇತಿಹಾಸವೇ ಇದೆ. 1950 ರ ದಶಕದ ಆರಂಭಕ್ಕೂ ಮೊದಲೇ ಅಂದರೆ, ಸ್ವಾತಂತ್ರ್ಯದ ನಂತರ ಸ್ವಲ್ಪ ಸಮಯದ ನಂತರ ಆರಂಭವಾದ ಈ ದಾಳಿಯ ಸ್ವರೂಪ ಆನಂತರದಿಂದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಲೇ ಇದೆ.

ಈ ವಿಷಯ ಏಕೆ ಹೇಳುತ್ತಿದ್ದೇವೆ ಎಂದರೆ ಇಂದು ಪಾಕ್ ಮಾಜಿ ಪ್ರಧಾನಿ ಹಾಗೂ ಕ್ರಿಕೆಟಿಗ ಇಮ್ರಾನ್ ಖಾನ್​ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಶಸ್ವಿ ಹತ್ಯೆಗಳ ಕರಾಳ ಇತಿಹಾಸ:

ಅಕ್ಟೋಬರ್ 10, 1951: ದೇಶದ ಮೊದಲ ಪ್ರಧಾನಿ ಲಿಯಾಕತ್ ಅಲಿ ಖಾನ್ ರಾವಲ್ಪಿಂಡಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು.

1958: ಅತ್ಯಂತ ಪ್ರಸಿದ್ಧ ಹಾಗೂ ಅತ್ಯುನ್ನತ ಮಟ್ಟದ ದೊಡ್ಡ 2ನೇ ಹತ್ಯೆ ಎಂದರೆ ಅದು NWFP ರಾಜಕಾರಣಿ ಖಾನ್ ಅಬ್ದುಲ್ ಜಬ್ಬಾರ್ ಖಾನ್ ಅವರದ್ದು. ಖಾನ್, ಪಾಕಿಸ್ತಾನದಲ್ಲಿ ಖಾನ್ ಸಾಹಿಬ್ ಎಂದೇ ಜನಪ್ರಿಯರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರ ಖಾನ್ ಅಬ್ದುಲ್ ಗಫರ್ ಖಾನ್ ಅವರ ಸಹೋದರರಾಗಿದ್ದರು.

1975: ಖೈಬರ್ - ಪಖ್ತುಂಖ್ವಾದ ಮಾಜಿ ಗವರ್ನರ್ ಹಯಾತ್ ಮೊಹಮ್ಮದ್ ಹಯಾತ್ ಖಾನ್ ಶೆರ್ಪಾವೊ, ಬಾಂಬ್ ಸ್ಫೋಟದಲ್ಲಿ ಕೊಲ್ಲಲ್ಪಟ್ಟರು. ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸಹ - ಸಂಸ್ಥಾಪಕರಲ್ಲಿ ಒಬ್ಬರು ಎಂಬುದು ಗಮನಾರ್ಹ

ಅಕ್ಟೋಬರ್ 3, 1991: ಮಾಜಿ ಗವರ್ನರ್ ಮತ್ತು ಮುಖ್ಯಮಂತ್ರಿ, ಲೆಫ್ಟಿನೆಂಟ್ ಜನರಲ್ ಫಜಲ್ - ಎ - ಹಕ್ ಅವರನ್ನು ಪೇಶಾವರದಲ್ಲಿ ಅಪರಿಚಿತ ಆಕ್ರಮಣಕಾರರು ಕೊಂದು ಹಾಕಿದ್ದರು.

ಸೆಪ್ಟೆಂಬರ್, 1996: ಕರಾಚಿಯಲ್ಲಿ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರ ಹಿರಿಯ ಮಗ ಮೀರ್ ಮುರ್ತಾಜಾ ಭುಟ್ಟೋ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.

ಡಿಸೆಂಬರ್ 27, 2007: ರಾವಲ್ಪಿಂಡಿಯ ಲಿಯಾಕತ್ ಬಾಗ್‌ನಲ್ಲಿ ನಡೆದ ಗುಂಡಿನ ದಾಳಿ ಮತ್ತು ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆಗೀಡಾದರು. ದಾಳಿಯ ತೀವ್ರತೆಗೆ ಅವರ ತಲೆ ಕಾರಿನ ಮೇಲ್ಭಾಗಕ್ಕೆ ಬಡಿದು ಸಾವನ್ನಪ್ಪಿದ್ದರು.

ಜನವರಿ 4, 2011: ಪಂಜಾಬ್ ಗವರ್ನರ್ ಸಲ್ಮಾನ್ ತಸೀರ್ ಇಸ್ಲಾಮಾಬಾದ್‌ನಲ್ಲಿ ತಮ್ಮದೇ ಅಂಗರಕ್ಷಕನಿಂದ ಕೊಲ್ಲಲ್ಪಟ್ಟರು.

ಮಾರ್ಚ್ 2, 2011: ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಶಹಬಾಜ್ ಭಟ್ಟಿ ಅವರನ್ನು ದುರುಳರು ಇಸ್ಲಾಮಾಬಾದ್‌ನಲ್ಲಿ ಗುಂಡಿಕ್ಕಿ ಕೊಂದು ಹಾಕಿದ್ದರು.

ಜುಲೈ 2018: ಮತದಾನಕ್ಕೆ ಕೇವಲ 14 ದಿನಗಳ ಮೊದಲು ಪೇಶಾವರದಲ್ಲಿ ನಡೆದ ಪಕ್ಷದ ಚುನಾವಣಾ ರ್ಯಾಲಿ ವೇಳೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅವಾಮಿ ನ್ಯಾಷನಲ್ ಪಾರ್ಟಿಯ ಹಿರಿಯ ನಾಯಕ, ಬ್ಯಾರಿಸ್ಟರ್ ಹರೂನ್ ಬಿಲೋರ್ ಅಸುನೀಗಿದರು. ಇವರ ಜತೆ ಇತರ 13 ಜನರು ಪ್ರಾಣ ಕಳೆದುಕೊಂಡರು. ಈ ಘಟನೆಯಲ್ಲಿ ಕನಿಷ್ಠ 45 ಮಂದಿ ಗಾಯಗೊಂಡಿದ್ದರು.

ಜುಲೈ 24, 2018: ಮಾಜಿ ಪ್ರಾಂತೀಯ ಸಚಿವ ಮತ್ತು ಪಾಕಿಸ್ತಾನ್ ತೆಹ್ರೀಕ್ - ಎ - ಇನ್ಸಾಫ್‌ನ ಹಿರಿಯ ನಾಯಕ ಇಕ್ರಮುಲ್ಲಾ ಗಂಡಾಪುರ್ ಅವರನ್ನು ಆತ್ಮಾಹುತಿ ಬಾಂಬರ್ ಸ್ಫೋಟಿಸಿಕೊಂಡು ಹತ್ಯೆ ಮಾಡಿದ್ದರು.

ಗುಂಡಿನ ದಾಳಿಯಲ್ಲಿ ಬದುಕುಳಿದವರು:

ಡಿಸೆಂಬರ್ 14, 2003: ಜನರಲ್ ಫರ್ವೇಜ್​ ಮುಷರಫ್ ರಾವಲ್ಪಿಂಡಿಯಲ್ಲಿ ಸೇತುವೆಯೊಂದನ್ನು ದಾಟಿದ ಕೆಲವೇ ನಿಮಿಷಗಳಲ್ಲಿ ಶಕ್ತಿಯುತ ಬಾಂಬ್ ಸ್ಫೋಟಗೊಂಡಿತ್ತು. ಇದರಿಂದಾಗಿ ಕುದಲೆಳೆ ಅಂತರದಲ್ಲಿ ಮುಷರಫ್​ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದರು.

ಆಗಸ್ಟ್ 2, 2004: ಬಲೂಚಿಸ್ತಾನದ ಮಾಜಿ ಮುಖ್ಯಮಂತ್ರಿ ಜಮ್ ಮೊಹಮ್ಮದ್ ಯೂಸಫ್ ಅವರ ಬೆಂಗಾವಲು ಪಡೆಗೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದಾಗ ಹತ್ಯೆಯ ಪ್ರಯತ್ನದಿಂದ ತಪ್ಪಿಸಿಕೊಂಡಿದ್ದರು.

ಸೆಪ್ಟೆಂಬರ್ 10, 2010: ಬಲೂಚಿಸ್ತಾನದ ಪ್ರಾಂತೀಯ ಹಣಕಾಸು ಸಚಿವ ಅಸಿಮ್ ಅಲಿ ಕುರ್ದ್ ಅವರು ತಮ್ಮ ಕ್ವೆಟ್ಟಾ ನಿವಾಸದಲ್ಲಿ ಆತ್ಮಹತ್ಯಾ ಕಾರ್ ಬಾಂಬ್ ದಾಳಿಯಿಂದ ಬಚಾವ್​ ಆಗಿದ್ದರು.

ಇದೀಗ ಇಂತಹುದೇ ದಾಳಿಯಲ್ಲಿ ಇಮ್ರಾನ್​ ಖಾನ್​ ಬಚಾವ್​ ಆಗಿದ್ದಾರೆ. ಅವರನ್ನು ಕೊಲ್ಲಲು ಅಂತಲೇ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ: ಭಾರತ ಹೊಗಳಿದ್ದ ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ಗುಂಡಿನ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.