ನವದೆಹಲಿ : ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಟ್ರಕ್‌ನಲ್ಲಿ ಪ್ರಯಾಣಿಸುವ ಮೂಲಕ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಅವರು ಹೀಗೆ ಮಾಡಿದ್ದು ಭಾರತದಲ್ಲಿ ಅಲ್ಲ, ಬದಲಾಗಿ ಅಮೆರಿಕದಲ್ಲಿ. ವಾಶಿಂಗ್ಟನ್ನಿಂದ ನ್ಯೂಯಾರ್ಕ್ವರೆಗೆ ಟ್ರಕ್‌ನಲ್ಲಿ ಪ್ರಯಾಣಿಸಿದ ರಾಹುಲ್, ಪ್ರಯಾಣದುದ್ದಕ್ಕೂ ಟ್ರಕ್ ಚಾಲಕನೊಂದಿಗೆ ಆತ್ಮೀಯ ಸಂವಾದ ನಡೆಸಿದ್ದಾರೆ. ಅಮೆರಿಕದಲ್ಲಿ ಟ್ರಕ್ ಚಾಲಕರಾಗಿ ಕೆಲಸ ಮಾಡುವ ಭಾರತೀಯರ ಸ್ಥಿತಿಗತಿಗಳ ಬಗ್ಗೆ ಈ ಸಂದರ್ಭದಲ್ಲಿ ಅವರು ತಿಳಿಯಲು ಪ್ರಯತ್ನಿಸಿದ್ದಾರೆ.
ಇತ್ತೀಚೆಗೆ ರಾಹುಲ್ ಭಾರತದಲ್ಲಿ ದೆಹಲಿಯಿಂದ ಚಂಡೀಗಢವರೆಗೆ ಟ್ರಕ್‌ನಲ್ಲಿ ಪ್ರಯಾಣಿಸಿ, ಚಾಲಕರ ಸುಖ ದುಃಖಗಳನ್ನು ಅರಿಯುವ ಪ್ರಯತ್ನ ಮಾಡಿದ್ದರು. ಈಗ ಅದೇ ಮಾದರಿಯಲ್ಲಿ ಅವರು ಅಮೆರಿಕದಲ್ಲಿ ಟ್ರಕ್ ಪ್ರಯಾಣ ಮಾಡಿದ್ದಾರೆ.
-
These countries are growing by using our potential because we don’t have opportunities in India.
— Shantanu (@shaandelhite) June 13, 2023 " class="align-text-top noRightClick twitterSection" data="
The truck driver made this deep remark with Rahul Gandhi Ji.
Watch the full conversation: https://t.co/E5dhdGAlVs pic.twitter.com/eNx3WrKqJ8
">These countries are growing by using our potential because we don’t have opportunities in India.
— Shantanu (@shaandelhite) June 13, 2023
The truck driver made this deep remark with Rahul Gandhi Ji.
Watch the full conversation: https://t.co/E5dhdGAlVs pic.twitter.com/eNx3WrKqJ8These countries are growing by using our potential because we don’t have opportunities in India.
— Shantanu (@shaandelhite) June 13, 2023
The truck driver made this deep remark with Rahul Gandhi Ji.
Watch the full conversation: https://t.co/E5dhdGAlVs pic.twitter.com/eNx3WrKqJ8
ಭಾರತ ಮತ್ತು ಸಾಗರೋತ್ತರ ಜನರ ಮಾತುಗಳನ್ನು ಆಲಿಸುವ ಪ್ರಯತ್ನದ ಭಾಗವಾಗಿ ತಮ್ಮ ಪ್ರಯಾಣವನ್ನು ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್, ವಾಷಿಂಗ್ಟನ್ ಡಿಸಿಯಿಂದ ನ್ಯೂಯಾರ್ಕ್‌ಗೆ 190 ಕಿಮೀ ಅಮೆರಿಕನ್ ಟ್ರಕ್ ಯಾತ್ರೆ ಮಾಡಿದ್ದಾರೆ. ಚಾಲಕ ತಲ್ಜಿಂದರ್ ಸಿಂಗ್ ವಿಕ್ಕಿ ಗಿಲ್ ಮತ್ತು ಅವರ ಸಹಚರ ರಂಜೀತ್ ಸಿಂಗ್ ಬಾನಿಪಾಲ್ ಅವರೊಂದಿಗೆ ರಾಹುಲ್ ಪ್ರವಾಸ ಕೈಗೊಂಡರು. ಒಂದು ಉಪಾಹಾರ ಗೃಹದಲ್ಲಿ ರುಚಿಕರವಾದ ಉಪಹಾರದೊಂದಿಗೆ ಅವರ ಯಾತ್ರೆ ಕೊನೆಗೊಂಡಿತು ಎಂದು ಕಾಂಗ್ರೆಸ್ ಪಕ್ಷದ ಪ್ರಕಟಣೆ ಹೇಳಿದೆ.
ದೆಹಲಿಯಿಂದ ಚಂಡೀಗಢಕ್ಕೆ ಅವರ ಟ್ರಕ್ ಸವಾರಿಯಂತೆಯೇ ಅಮೆರಿಕದಲ್ಲಿರುವ ಭಾರತೀಯ ಮೂಲದ ಟ್ರಕ್ ಡ್ರೈವರ್‌ಗಳ ದೈನಂದಿನ ಜೀವನದ ಸುತ್ತ ರಾಹುಲ್ ಅವರ ಸಂವಾದ ಕೇಂದ್ರೀಕೃತವಾಗಿತ್ತು. ಅಮೆರಿಕದಲ್ಲಿನ ಟ್ರಕ್‌ಗಳನ್ನು ಚಾಲಕನ ಸುರಕ್ಷತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದ್ದನ್ನು ರಾಹುಲ್ ಈ ಸಂದರ್ಭದಲ್ಲಿ ಪ್ರಮುಖವಾಗಿ ಗಮನಿಸಿದರು. ಆದರೆ ಭಾರತದಲ್ಲಿ ಟ್ರಕ್‌ಗಳನ್ನು ಹೀಗೆ ವಿನ್ಯಾಸಗೊಳಿಸಿಲ್ಲ ಎಂದು ಅವರು ಹೇಳಿದರು.
ಕನಿಷ್ಠ ಕೂಲಿ ಹಾಗೂ ಹಣದುಬ್ಬರದ ಕಾರಣದಿಂದ ಭಾರತದಲ್ಲಿನ ಟ್ರಕ್ ಚಾಲಕರು ಜೀವನೋಪಾಯಕ್ಕಾಗಿ ಪರದಾಡುತ್ತಿದ್ದಾರೆ. ಆದರೆ ಅಮೆರಿಕದ ಟ್ರಕ್ ಚಾಲಕರು ವೃತ್ತಿ ಗೌರವ ಹೊಂದಿದ್ದು ಉತ್ತಮ ಸಂಬಳ ಕೂಡ ಪಡೆಯುತ್ತಿದ್ದಾರೆ ಎಂಬ ವಿಚಾರ ಸಂವಾದದಲ್ಲಿ ಮುನ್ನೆಲೆಗೆ ಬಂದಿತು. ಭಾರತದಲ್ಲಿನ ಸರಕುಗಳ ಬೆಲೆಗಳು, ಹಣದುಬ್ಬರ ಮತ್ತು ರಾಜಕೀಯದ ಬಗ್ಗೆ ಚಾಲಕ ಗಿಲ್ ಪ್ರಸ್ತಾಪಿಸಿದರು. ಯಾವ ಧರ್ಮವೂ ದ್ವೇಷ ಹರಡುವುದನ್ನು ಕಲಿಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
"ಭಾರತದಲ್ಲಿ ಟ್ರಕ್ ಉದ್ಯಮಕ್ಕೆ ಹೊಸ ದೃಷ್ಟಿಕೋನವನ್ನು ಯೋಜಿಸಲು ನಾವು ಅಮೇರಿಕನ್ ಟ್ರಕ್ ಉದ್ಯಮದಿಂದ ಸಾಕಷ್ಟು ಪಾಠಗಳನ್ನು ಕಲಿಯಬಹುದು. ಭಾರತೀಯ ಟ್ರಕ್ ಡ್ರೈವರ್‌ಗಳು ನಮ್ಮ ಲಾಜಿಸ್ಟಿಕ್ಸ್‌ನ ಜೀವನಾಡಿ ಮತ್ತು ಘನತೆಯ ಜೀವನಕ್ಕೆ ಅರ್ಹರು" ಎಂದು ಕಾಂಗ್ರೆಸ್ ಪಕ್ಷದ ಹೇಳಿಕೆಯಲ್ಲಿ ಬರೆಯಲಾಗಿದೆ. ಟ್ರಕ್ ಚಾಲಕರು ಭಾರತ್ ಜೋಡೊ ಆಂದೋಲನದ ಮುಂಚೂಣಿಯಲ್ಲಿದ್ದಾರೆ ಮತ್ತು ಅವರ ಏಳಿಗೆಯು ಭಾರತದ ಆರ್ಥಿಕ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಕಳೆದ ತಿಂಗಳು ರಾಹುಲ್ ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದರು. ಟ್ರಕ್‌ನೊಳಗೆ ಕುಳಿತುಕೊಂಡು ಚಾಲಕನೊಂದಿಗೆ ಪ್ರಯಾಣಿಸುತ್ತಿರುವುದು ಮತ್ತು ಧಾಬಾದಲ್ಲಿ ಚಾಲಕರೊಂದಿಗೆ ಮಾತನಾಡುತ್ತಿರುವುದು ಚಿತ್ರಗಳು ಮತ್ತು ವೀಡಿಯೊಗಳಲ್ಲಿ ಕಾಣಿಸುತ್ತದೆ.
ಇದನ್ನೂ ಓದಿ : AI safety: AI ನಿಂದ ಅಪಾಯ: ವರ್ಷಾಂತ್ಯಕ್ಕೆ ಜಾಗತಿಕ ಎಐ ಸುರಕ್ಷತಾ ಶೃಂಗಸಭೆ