ETV Bharat / international

ತಮ್ಮ ಐಫೋನ್​ನಲ್ಲಿ "ಹಲೋ ಮಿಸ್ಟರ್ ಮೋದಿ" ಎಂದ ರಾಹುಲ್​ ಗಾಂಧಿ: ಯಾಕೆ ಗೊತ್ತಾ? - ಹಲೋ ಮಿಸ್ಟರ್ ಮೋದಿ

ತಮ್ಮ ಫೋನ್ ಟ್ಯಾಪ್ ಬಗ್ಗೆ ಅಮೆರಿಕದಲ್ಲಿ ಮಾತನಾಡಿರುವ ಕಾಂಗ್ರೆಸ್​ ರಾಹುಲ್​ ಗಾಂಧಿ, ತಮಾಷೆಯಾಗಿ ತಮ್ಮ ಐಫೋನ್‌ನಲ್ಲಿ "ಹಲೋ! ಮಿಸ್ಟರ್ ಮೋದಿ" ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.

rahul-gandhi-holds-interactions-with-silicon-valley-ai-experts-startup-entrepreneurs
ಸಿಲಿಕಾನ್ ವ್ಯಾಲಿಯ ಸ್ಟಾರ್ಟ್‌ಅಪ್ ಉದ್ಯಮಿಗಳೊಂದಿಗೆ ರಾಹುಲ್​ ಗಾಂಧಿ ಸಂವಾದ
author img

By

Published : Jun 1, 2023, 6:07 PM IST

Updated : Jun 1, 2023, 6:17 PM IST

ವಾಷಿಂಗ್ಟನ್ (ಅಮೆರಿಕ): ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೃತಕ ಬುದ್ಧಿಮತ್ತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಸಿಲಿಕಾನ್ ವ್ಯಾಲಿಯ ಸ್ಟಾರ್ಟ್‌ಅಪ್ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಡೇಟಾ ಸುರಕ್ಷತೆ ಬಗ್ಗೆ ಮಾತನಾಡುವಾಗ ರಾಹುಲ್​ ತಮ್ಮ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮತ್ತು ಅವರೊಂದಿಗೆ ಭಾರತದಿಂದ ಪ್ರಯಾಣಿಸಿದ ಕೆಲ ಪ್ರಮುಖ ಸಹಾಯಕರೊಂದಿಗೆ ಪ್ಲಗ್ ಮತ್ತು ಪ್ಲೇ ಸಭಾಂಗಣದಲ್ಲಿ ರಾಹುಲ್​ ಕೃತಕ ಬುದ್ಧಿಮತ್ತೆಯ ವಿವಿಧ ಅಂಶಗಳ ಕುರಿತು ತಜ್ಞರ ಪ್ಯಾನೆಲ್ ಚರ್ಚೆಯಲ್ಲಿ ಪಾಲ್ಗೊಂಡರು. ಡೇಟಾ, ಯಾಂತ್ರಿಕ ಕಲಿಕೆ ಮತ್ತು ಮಾನವಕುಲದ ಮೇಲೆ ಅವುಗಳ ಪರಿಣಾಮಗಳು ಹಾಗೂ ಆಡಳಿತ, ಸಮಾಜ ಕಲ್ಯಾಣ ಕ್ರಮಗಳು ಮತ್ತು ತಪ್ಪು ಮಾಹಿತಿಯಂತಹ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

  • It was a pleasure to engage with the learned audience at @Stanford on 'The New Global Equilibrium'.

    We discussed the challenges and opportunities of a changing world order. Actions based on truth is the way forward. pic.twitter.com/6tEoCV6OsM

    — Rahul Gandhi (@RahulGandhi) June 1, 2023 " class="align-text-top noRightClick twitterSection" data=" ">

ರಾಹುಲ್​ ಗಾಂಧಿ ಮಾತನಾಡಿ, ಡೇಟಾ ಹೊಸ ಸ್ವರ್ಣವಾಗಿದ್ದು, ಭಾರತದಂತಹ ದೇಶಗಳು ಅದರ ನೈಜ ಸಾಮರ್ಥ್ಯವನ್ನು ಅರಿತುಕೊಂಡಿವೆ. ಡೇಟಾ ಸುರಕ್ಷತೆ ಮತ್ತು ಭದ್ರತೆಯ ಮೇಲೆ ಸೂಕ್ತ ನಿಯಮಾವಳಿಗಳನ್ನು ಹೊಂದುವ ಅಗತ್ಯವಿದೆ ಎಂದು ತಿಳಿಸಿದರು. ಆದಾಗ್ಯೂ, ಪೆಗಾಸಸ್ ಸ್ಪೈವೇರ್ ಮತ್ತು ಅಂತಹ ತಂತ್ರಜ್ಞಾನಗಳ ವಿಷಯದ ಕುರಿತು ಮಾತನಾಡಿ, ಇದರ ಬಗ್ಗೆ ನಾನು ಚಿಂತಿಸುವುದಿಲ್ಲ. ತನ್ನ ಫೋನ್ ಟ್ಯಾಪ್ ಆಗುತ್ತಿದೆ ಎಂದು ನನಗೆ ಗೊತ್ತಿದೆ ಎಂದೂ ಹೇಳಿದರು. ಇದೇ ವೇಳೆ ತಮಾಷೆಯಾಗಿ ತಮ್ಮ ಐಫೋನ್‌ನಲ್ಲಿ "ಹಲೋ! ಮಿಸ್ಟರ್ ಮೋದಿ" ಎಂದು ರಾಹುಲ್​ ಹೇಳಿದರು.

ನನ್ನ ಐಫೋನ್ ಅನ್ನು ಟ್ಯಾಪ್ ಮಾಡಲಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ನೀವು ರಾಷ್ಟ್ರವಾಗಿ ಮತ್ತು ವೈಯಕ್ತಿಕವಾಗಿ ಡೇಟಾ ಮಾಹಿತಿಯ ಗೌಪ್ಯತೆಗೆ ಸಂಬಂಧಿಸಿದಂತೆ ನಿಯಮಗಳನ್ನು ಸ್ಥಾಪಿಸಬೇಕಾಗಿದೆ. ನಿಮ್ಮ ಫೋನ್ ಟ್ಯಾಪ್ ಮಾಡಲು ಒಂದು ರಾಷ್ಟ್ರವು ನಿರ್ಧರಿಸಿದರೆ, ಯಾರೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ಇದು ನನ್ನ ಭಾವನೆ" ಎಂದು ಅವರು ಹೇಳಿದರು. ದೇಶವು ಫೋನ್ ಟ್ಯಾಪಿಂಗ್ ಮಾಡಲು ಆಸಕ್ತಿ ಹೊಂದಿದ್ದರೆ ಇದು ಹೋರಾಡಲು ಯೋಗ್ಯವಾದ ಸಮರವಲ್ಲ. ನಾನು ಏನೇ ಮಾಡಿದರೂ ಮತ್ತು ಯಾವುದೇ ಕೆಲಸ ಮಾಡಿದರೂ ಅದು ಸರ್ಕಾರಕ್ಕೆ ಲಭ್ಯ ಎಂದೇ ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

ಕ್ಯಾಲಿಫೋರ್ನಿಯಾದ ಸನ್ನಿವೇಲ್ ಮೂಲದ ಪ್ಲಗ್ ಮತ್ತು ಪ್ಲೇ ಟೆಕ್ ಸೆಂಟರ್ ಸ್ಟಾರ್ಟ್‌ಅಪ್‌ಗಳ ಅತಿದೊಡ್ಡ ಇನ್ಕ್ಯುಬೇಟರ್ ಆಗಿದೆ. ಈ ಪ್ಲಗ್ ಮತ್ತು ಪ್ಲೇನಲ್ಲಿನ ಶೇ.50ರಷ್ಟು ಸ್ಟಾರ್ಟ್‌ಅಪ್​ಗಳ ಸಂಸ್ಥಾಪಕರು ಭಾರತೀಯರು ಅಥವಾ ಭಾರತೀಯ ಅಮೆರಿಕನ್ನರು ಎಂದು ಸಿಇಒ ಮತ್ತು ಸಂಸ್ಥಾಪಕ ಸಯೀದ್ ಅಮಿದಿ ತಿಳಿಸಿದ್ದಾರೆ. ರಾಹುಲ್​ ಗಾಂಧಿ ಐಟಿ ಕ್ಷೇತ್ರದ ಬಗ್ಗೆ ಆಳವಾದ ತಿಳಿವಳಿಕೆಯನ್ನು ಹೊಂದಿದ್ದಾರೆ. ಇತ್ತೀಚಿನ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ಅವರು ಸಾಕಷ್ಟು ಜ್ಞಾನವು ಹೊಂದಿದ್ದಾರೆ ಎಂದು ಅಮಿದಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬಿಜೆಪಿಯಿಂದ ಸರ್ಕಾರಿ ಸಂಸ್ಥೆಗಳ ದುರ್ಬಳಕೆ, ಜನರಿಗೆ ಬೆದರಿಕೆ: ಅಮೆರಿಕದಲ್ಲಿ ರಾಹುಲ್ ಗಾಂಧಿ

Last Updated : Jun 1, 2023, 6:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.