ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸ್ನೇಹಪರವಲ್ಲದ ದೇಶಗಳ ನಾಗರಿಕರಿಗೆ ವೀಸಾ ನಿರ್ಬಂಧಗಳನ್ನು ಹೇರುವ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ ಎಂದು ಕ್ರೆಮ್ಲಿನ್ ಹೇಳಿದೆ. ಯುರೋಪಿಯನ್ ಒಕ್ಕೂಟ ರಷ್ಯಾ ವಿರುದ್ಧ ತೆಗೆದುಕೊಂಡ ಪ್ರತಿಕೂಲ ಕ್ರಮಗಳಿಗೆ ಪ್ರತೀಕಾರವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ಒಪ್ಪಂದದ ಪ್ರಕಾರ, ನಾರ್ವೆ, ಐಸ್‌ಲ್ಯಾಂಡ್, ಸ್ವಿಟ್ಜರ್‌ಲ್ಯಾಂಡ್ ಮತ್ತು ಲೀಚ್‌ಟೆನ್‌ಸ್ಟೈನ್ ಸೇರಿದಂತೆ ಯೂರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳೊಂದಿಗಿನ ತನ್ನ ಸರಳೀಕೃತ ವೀಸಾ ಒಪ್ಪಂದಗಳನ್ನು ಭಾಗಶಃ ರದ್ದುಗೊಳಿಸಿ ರಷ್ಯಾ ಆದೇಶ ಹೊರಡಿಸಿದೆ ಎಂದು ಕ್ರೆಮ್ಲಿನ್ ಹೇಳಿದೆ.
ಜೊತೆಗೆ ರಷ್ಯಾದ ವಿರುದ್ಧ, ಅಲ್ಲಿನ ನಾಗರಿಕರ ವಿರುದ್ಧ ಮತ್ತು ಕಾನೂನು ವ್ಯವಸ್ಥೆಯ ವಿರುದ್ಧ ಪ್ರತಿಕೂಲ ಕೃತ್ಯಗಳನ್ನು ಎಸಗುವ ವಿದೇಶಿಯರು ಮತ್ತು ಅನ್ಯ ದೇಶದ ನಿರಾಶ್ರಿತರಿಗೆ ವೈಯಕ್ತಿಕ ನಿರ್ಬಂಧಗಳನ್ನು ವಿಧಿಸಿ ರಷ್ಯಾ ವಿದೇಶಾಂಗ ಸಚಿವಾಲಯ ಆದೇಶ ಹೊರಡಿಸಿದೆ ಎಂದು ಹೇಳಲಾಗಿದೆ.
ಓದಿ : ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾ ಸಂಸತ್ತಿನ ಹೊರಗೆ ಬೃಹತ್ ಪ್ರತಿಭಟನೆ: ಸಂಪೂರ್ಣ ವಿವರ ಇಲ್ಲಿದೆ!