ETV Bharat / international

ಪಿಟಿಐ ಸದಸ್ಯರು ಪಕ್ಷ ತೊರೆಯುವುದಾಗಿ ಬೆದರಿಕೆ ಹಾಕಿದ್ದಾರೆ: ಇಮ್ರಾನ್ ಖಾನ್

ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಸದಸ್ಯರು ಪಕ್ಷ ತೊರೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Imran Khan
ಇಮ್ರಾನ್ ಖಾನ್
author img

By

Published : Jun 6, 2023, 10:43 AM IST

ಇಸ್ಲಾಮಾಬಾದ್(ಪಾಕಿಸ್ತಾನ): ತಮ್ಮ ಕುಟುಂಬದ ಸದಸ್ಯರು ಮತ್ತು ಮಹಿಳೆಯರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಪಕ್ಷವನ್ನು ತೊರೆಯುವಂತೆ ಒತ್ತಾಯಿಸಲಾಗುತ್ತಿದೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಹೇಳಿದ್ದಾರೆ. ಮಾಜಿ ಪಿಟಿಐ ಸದಸ್ಯ ಎಂದು ಹೇಳಿಕೊಂಡಿರುವ ಪಠ್ಯ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಇಮ್ರಾನ್ ಖಾನ್ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

"ನಾನು ಪಿಟಿಐ ತೊರೆಯಲು ಸಾಕಷ್ಟು ಒತ್ತಡವನ್ನು ಹೊಂದಿದ್ದೇನೆ. ಬೆದರಿಕೆಗಳು ಅಸಹನೀಯವಾಗಿದೆ. ಈಗ ಪತ್ರಿಕಾಗೋಷ್ಠಿ ಹೊರತುಪಡಿಸಿ ಬೇರೆ ಮಾರ್ಗವಿಲ್ಲ. ಪಿಟಿಐನಿಂದ ವಿಘಟನೆಯನ್ನು ಘೋಷಿಸುವುದು ಅನಿವಾರ್ಯ" ಎಂದು ಉರ್ದು ಭಾಷೆಯಲ್ಲಿ ಬರೆದ ಪಠ್ಯ ಸಂದೇಶದ ಸ್ಕ್ರೀನ್‌ಶಾಟ್ ಮತ್ತು ಅನುವಾದವನ್ನು ಇಮ್ರಾನ್ ಖಾನ್ ಪೋಸ್ಟ್ ಮಾಡಿದ್ದಾರೆ.

"ಇದು ಹೀಗಾಗುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ನನಗೆ ಈಗ ಕೇವಲ 2 ಆಯ್ಕೆಗಳಿವೆ. ಆತ್ಮಹತ್ಯೆ ಅಥವಾ ಪತ್ರಿಕಾಗೋಷ್ಠಿ. ಅಧ್ಯಕ್ಷರೇ ನೀವು ಮೊದಲ ಬಾರಿಗೆ ಮಿಯಾನ್ವಾಲಿಯಿಂದ ಚುನಾವಣೆಗೆ ಸ್ಪರ್ಧಿಸಿದಾಗ ಮೊದಲಿನಿಂದಲೂ ನಾನು ನಿಮ್ಮೊಂದಿಗೆ ಇದ್ದೇನೆ" ಎಂದು ಬರೆಯಲಾದ ಸಂದೇಶವು ಅದರಲ್ಲಿದೆ.

ಆಂತರಿಕ ಸಚಿವ ರಾಣಾ ಸನಾವುಲ್ಲಾ ಭವಿಷ್ಯದಲ್ಲಿ ಮೂರು ಛಿದ್ರ ಗುಂಪುಗಳು ಹೊರಹೊಮ್ಮುತ್ತವೆ ಮತ್ತು ಅದು ಇನ್ನು ಮುಂದೆ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್‌ಗೆ ಬೆದರಿಕೆಯಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ ಎಂದು ಪಾಕಿಸ್ತಾನ ಮೂಲದ ಮಾಧ್ಯಮವೊಂದು ವರದಿ ಮಾಡಿದೆ.

"ಜಹಾಂಗೀರ್ ತರೀನ್ ಅವರ ವಿಷಯದ ಬಗ್ಗೆ ಎನ್-ಲೀಗ್ ಶಾಂತವಾಗಿರಬೇಕು. ಏಕೆಂದರೆ ನಮ್ಮ ಮತ ಬ್ಯಾಂಕ್ ಎಲ್ಲಿಯೂ ಹೋಗುವುದಿಲ್ಲ" ಎಂದು ಸನಾವುಲ್ಲಾ ಹೇಳಿದ್ದಾರೆ. ಪಂಜಾಬ್‌ನಲ್ಲಿ ಇದು ಪಿಟಿಐ ವಿರುದ್ಧ ಪಿಎಂಎಲ್-ಎನ್ ಆದರೆ ಮೇ 9 ರ ಗಲಭೆಯ ನಂತರ ಪರಿಸ್ಥಿತಿ ಬದಲಾಗಿದೆ ಎಂದು ಅವರು ಹೇಳಿದರು. ಪಿಟಿಐ ಎರಡು ಅಥವಾ ಮೂರು ಭಾಗಗಳಾಗಿ ವಿಭಜನೆಯಾಗುತ್ತದೆ. ಒಂದು ಭಾಗವು ಪಿಪಿಪಿಗೆ ಹೋಗುತ್ತದೆ, ಎರಡನೆಯದು ಜಹಾಂಗೀರ್ ತರೀನ್ ಮತ್ತು ಮೂರನೆಯದು ಪಿಟಿಐನಲ್ಲಿ ಉಳಿಯುತ್ತದೆ" ಎಂದು ಆಂತರಿಕ ಸಚಿವರು ಭವಿಷ್ಯ ನುಡಿದಿದ್ದಾರೆ.

ಮೇ 9 ರಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಂಧನದ ನಂತರದ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಸುಮಾರು ಮೂರು ದಿನಗಳ ಕಾಲ ನಡೆದ ಪ್ರತಿಭಟನೆಯಲ್ಲಿ ಕನಿಷ್ಠ 8 ಮಂದಿ ಬಲಿಯಾಗಿದ್ದರು. ಈ ವೇಳೆ, ಸರ್ಕಾರ ದೇಶದಾದ್ಯಂತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿತು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೇನಾ ಪಡೆಗಳನ್ನು ನಿಯೋಜಿಸಿತ್ತು.

ರಕ್ಷಣೆ ಮತ್ತು ಸಾರ್ವಜನಿಕ ಆಸ್ತಿಗಳ ಮೇಲಿನ ದಾಳಿಯ ನಂತರ, ದೇಶದ ಉನ್ನತ ನಾಗರಿಕ-ಮಿಲಿಟರಿ ನಾಯಕತ್ವವು ಸೇನೆಯ ಕಾಯಿದೆ ಸೇರಿದಂತೆ ದೇಶದ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಗಲಭೆಕೋರರನ್ನು ಶಿಕ್ಷಿಸುವುದಾಗಿ ಹೇಳಿತ್ತು. ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವ ಶಂಕಿತರನ್ನು ಬಂಧಿಸಲು ಪಿಟಿಐ ಮೇಲೆ ದಮನ ಕಾರ್ಯ ಪ್ರಾರಂಭಿಸಲಾಯಿತು.

ಅಲ್ಲಿಂದೀಚೆಗೆ, ಖಾನ್ ಅವರ ಆಪ್ತ ಸಹಾಯಕರು ಸೇರಿದಂತೆ ಹಲವಾರು ಪಿಟಿಐ ನಾಯಕರು ಮೇ 9 ರಂದು ವಿಧ್ವಂಸಕ ಕೃತ್ಯಗಳ ಬಗ್ಗೆ ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ್ದಾರೆ ಮತ್ತು ಕೆಲವರು ಮಿಲಿಟರಿ ಸ್ಥಾಪನೆಗಳ ಮೇಲಿನ ದಾಳಿಗೆ ಖಾನ್ ಅವರ ನೀತಿಗಳನ್ನು ದೂಷಿಸಿದ್ದಾರೆ. ಇದುವರೆಗೆ ರಾಷ್ಟ್ರದಾದ್ಯಂತ 80ಕ್ಕೂ ಹೆಚ್ಚು ಪಿಟಿಐ ನಾಯಕರು ಪಕ್ಷ ತೊರೆದಿದ್ದಾರೆ ಎಂದು ಅಲ್ಲಿ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: ಮೇ 9ರ ಗಲಭೆ: ಇಮ್ರಾನ್​ ಖಾನ್​ಗೆ ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.