ಕಿಂಗ್‌ಸ್ಟನ್: ನಾಲ್ಕು ದಿನಗಳ ಜಮೈಕಾ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಿಂಗ್‌ಸ್ಟನ್ ನಾರ್ಮನ್ ಮ್ಯಾನ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಜಮೈಕಾ ಪ್ರಜೆಗಳು ಮತ್ತು ಭಾರತೀಯರು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.
ಜಮೈಕಾಕ್ಕೆ ಭಾರತೀಯ ಅಧ್ಯಕ್ಷರ ಮೊದಲ ಭೇಟಿ ಇದಾಗಿದೆ. ಪತ್ನಿ ಸವಿತಾ ಕೋವಿಂದ್, ಪುತ್ರಿ ಸ್ವಾತಿ ಕೋವಿಂದ್, ಕೇಂದ್ರ ಸಚಿವ ಪಂಕಜ್ ಚೌಧರಿ, ಲೋಕಸಭೆ ಸಂಸದೆ ರಮಾದೇವಿ, ಸತೀಶ್ ಕುಮಾರ್ ಗೌತಮ್ ಮತ್ತು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ರಾಷ್ಟ್ರಪತಿಗಳ ಪ್ರವಾಸದಲ್ಲಿದ್ದಾರೆ.
ಇದನ್ನೂ ಓದಿ: ಓದಿದ್ದು 10ನೇ ತರಗತಿ, ಹಲವು ಕೃಷಿ ಸಾಧನಗಳ ಆವಿಷ್ಕಾರ!: ಧಾರವಾಡದ ರೈತ ಅಬ್ದುಲ್ ಖಾದರ್‌ಗೆ 'ಪದ್ಮಶ್ರಿ'
ನ್ಯೂ ಕಿಂಗ್‌ಸ್ಟನ್‌ನಲ್ಲಿರುವ ಪೆಗಾಸಸ್ ಹೋಟೆಲ್‌ಗೆ ಆಗಮಿಸಿದ ನಂತರ, ಜಮೈಕನ್ನರು ಮತ್ತು ಭಾರತೀಯ ವಲಸಿಗರು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಆತ್ಮೀಯ ಸ್ವಾಗತ ನೀಡಿದರು. ಈ ಭೇಟಿಯ ವೇಳೆ ರಾಷ್ಟ್ರಪತಿಗಳು ಮಾರ್ಕಸ್ ಮೊಸಿಯಾ ಗಾರ್ವೆ ಪುತ್ಥಳಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ನಾಳೆ ಅಂಬೇಡ್ಕರ್ ಹೆಸರಿನ ರಸ್ತೆ ‘ಅಂಬೇಡ್ಕರ್ ಅವೆನ್ಯೂ’ ಉದ್ಘಾಟಿಸಲಿದ್ದಾರೆ. ಜಮೈಕಾ-ಭಾರತ ಸ್ನೇಹ ಉದ್ಯಾನ ಲೋಕಾರ್ಪಣೆಯಾಗಲಿದೆ. ಸಂಜೆ ಜಮೈಕಾದ ಮಹತ್ವಾಕಾಂಕ್ಷಿ ಕ್ರಿಕೆಟ್ ಆಟಗಾರರಿಗೆ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ.
ಇದನ್ನೂ ಓದಿ: ಅಸ್ಸೋಂನ ಕಾಜೀರಂಗ ಉದ್ಯಾನವನದಲ್ಲಿ ಆನೆ ಸವಾರಿ ಮಾಡಿ ಆನಂದಿಸಿದ ರಾಷ್ಟ್ರಪತಿ ಕೋವಿಂದ್- ವಿಡಿಯೋ