ETV Bharat / international

ಇಂಡೋನೇಷ್ಯಾದ ಬಾಲಿ, ಜಾವಾ ದ್ವೀಪಗಳಲ್ಲಿ ಪ್ರಬಲ ಭೂಕಂಪ: ಯಾವುದೇ ಸಾವು- ನೋವುಗಳು ವರದಿಯಾಗಿಲ್ಲ

powerful earthquake in Indonesia: ಇಂಡೋನೇಷ್ಯಾದ ಬಾಲಿ, ಜಾವಾ ದ್ವೀಪಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. 7.1 ಭೂಕಂಪದ ತೀವ್ರತೆ ದಾಖಲಾಗಿದೆ. ಪ್ರಸ್ತುತ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.

powerful earthquake in Indonesia
ಇಂಡೋನೇಷ್ಯಾದ ಬಾಲಿ, ಜಾವಾ ದ್ವೀಪಗಳಲ್ಲಿ ಪ್ರಬಲ ಭೂಕಂಪ: ಯಾವುದೇ ಸಾವುನೋವುಗಳು ವರದಿಯಾಗಿಲ್ಲ
author img

By ETV Bharat Karnataka Team

Published : Aug 29, 2023, 8:15 AM IST

ಡೆನ್‌ಪಾಸರ್ (ಇಂಡೋನೇಷ್ಯಾ): ಇಂಡೋನೇಷ್ಯಾದ ರೆಸಾರ್ಟ್ ದ್ವೀಪವಾದ ಬಾಲಿ ಮತ್ತು ದೇಶದ ಇತರ ಭಾಗಗಳಲ್ಲಿ ಮಂಗಳವಾರ ಪ್ರಬಲ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿದ್ದರಿಂದ ಜನರು ಭಯಭೀತರಾಗಿದ್ದಾರೆ. ಆದರೆ, ಸದ್ಯ ಯಾವುದೇ ಸಾವುನೋವಿನ ಕುರಿತು ವರದಿಯಾಗಿಲ್ಲ. 513.5 ಕಿಲೋಮೀಟರ್ ಆಳದಲ್ಲಿ 7.1 ತೀವ್ರತೆಯ ಭೂಕಂಪ ಸಂಭಸಿದೆ. ಬಾಲಿಯ ಪಕ್ಕದಲ್ಲಿರುವ ಲೊಂಬಾಕ್ ದ್ವೀಪದ ಕರಾವಳಿಯ ಸಮೀಪವಿರುವ ಸಣ್ಣ ದ್ವೀಪವಾದ ಗಿಲಿ ಏರ್‌ನಿಂದ ಈಶಾನ್ಯಕ್ಕೆ 181 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಪಾಯಿಂಟ್​ ಇದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ಇಂಡೋನೇಷ್ಯಾದ ಹವಾಮಾನ ಮತ್ತು ಭೂಭೌತಿಕ ಸಂಸ್ಥೆ: ಇಂಡೋನೇಷ್ಯಾದ ಹವಾಮಾನ ಮತ್ತು ಭೂಭೌತಿಕ ಸಂಸ್ಥೆಯು ಸುನಾಮಿಯ ಅಪಾಯವಿಲ್ಲ ಎಂದು ಹೇಳಿದೆ. ಆದರೆ, ಸಂಭವನೀಯ ಆಘಾತಗಳ ಬಗ್ಗೆ ಎಚ್ಚರಿಕೆ ನೀಡಿದೆ. ಸಂಸ್ಥೆಯ ಪ್ರಾಥಮಿಕ ಪ್ರಮಾಣವು 7.4 ರಷ್ಟು ಆಗಿದೆ. ಆರಂಭಿಕ ಅಳತೆಗಳಲ್ಲಿನ ವ್ಯತ್ಯಾಸಗಳು ಸಾಮಾನ್ಯವಾಗಿದೆ. ಕೆಲವು ನಿಮಿಷಗಳ ನಂತರ ಬೆಳಗಿನ ಜಾವದ ಮೊದಲು ಅದೇ ಪ್ರದೇಶದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ.

ಪ್ರಬಲ ಭೂಕಂಪನದ ನಂತರ, ಅನೇಕ ನಿವಾಸಿಗಳು ಮತ್ತು ಪ್ರವಾಸಿಗರು ತಮ್ಮ ಮನೆಗಳು ಮತ್ತು ಹೋಟೆಲ್‌ಗಳಿಂದ ಎತ್ತರದ ನೆಲದ ಕಡೆಗೆ ಧಾವಿಸಿದರು. ಆದರೆ, ಭೂಕಂಪವು ಸುನಾಮಿಯನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಈ ಕಾರಣಕ್ಕೆ ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳಿತು.

ಹಲವು ಸೆಕೆಂಡುಗಳವರೆಗೆ ಅಲ್ಲಾಡಿದ ಕಟ್ಟಡಗಳು, ಭಯಭೀತರಾದ ಜನರು: "ಹೋಟೆಲ್ ಗೋಡೆಗಳು ಬೀಳುತ್ತವೆ ಎಂದು ನಾನು ಭಾವಿಸಿದೆ" ಎಂದು ಆಸ್ಟ್ರೇಲಿಯಾದ ಪ್ರವಾಸಿಗರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ನೆರೆಯ ಪ್ರಾಂತ್ಯಗಳಾದ ಪೂರ್ವ ಜಾವಾ, ಮಧ್ಯ ಜಾವಾ, ಪಶ್ಚಿಮ ನುಸಾ ತೆಂಗರಾ ಮತ್ತು ಪೂರ್ವ ನುಸಾ ತೆಂಗರಾ ಪ್ರಾಂತ್ಯಗಳಲ್ಲಿನ ಜನರಿಗೆ ಭೂಮಿ ಕಂಪಸಿದ ಅನುಭವವಾಗಿದೆ. ಮನೆಗಳು ಮತ್ತು ಕಟ್ಟಡಗಳು ಹಲವು ಸೆಕೆಂಡುಗಳ ಕಾಲ ಅಲ್ಲಾಡಿದ್ದರಿಂದ ಜನರು ಭಯಭೀತರಾದರು.

ರಿಂಗ್ ಆಫ್ ಫೈರ್: ಇಂಡೋನೇಷ್ಯಾ, 270 ಮಿಲಿಯನ್ ಜನರ ವಿಶಾಲವಾದ ದ್ವೀಪಸಮೂಹವಾಗಿದೆ. ಈ ದ್ವೀಪಸಮೂಹಕ್ಕೆ ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ಸುನಾಮಿಗಳಿಂದ ಆಗಾಗ್ಗೆ ಅಪ್ಪಳಿಸುತ್ತದೆ. ಏಕೆಂದರೆ ಅದು "ರಿಂಗ್ ಆಫ್ ಫೈರ್"ನಲ್ಲಿ ನೆಲೆಗೊಂಡಿದೆ. 2021ರಲ್ಲಿ ಗುಡ್ಡಗಾಡು ಕರಂಗಸೆಮ್‌ನಲ್ಲಿ ಸಂಭವಿಸಿದ ಭೂಕಂಪವು ಭೂಕುಸಿತಗಳನ್ನು ಉಂಟುಮಾಡಿತು ಮತ್ತು ಕನಿಷ್ಠ ಮೂರು ಹಳ್ಳಿಗಳ ಸಂಪರ್ಕವನ್ನು ಕಡಿತಗೊಂಡಿತ್ತು. ಆಗ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದರು.

ನವೆಂಬರ್ 21ರಂದು ಪಶ್ಚಿಮ ಜಾವಾದ ಸಿಯಾಂಜೂರ್ ನಗರದಲ್ಲಿ ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 331 ಜನರು ಸಾವನ್ನಪ್ಪಿದ್ದರು. ಸುಮಾರು 600 ಜನರು ಗಾಯಗೊಂಡರು. 2018 ರ ಭೂಕಂಪ ಮತ್ತು ಸುನಾಮಿ ಸುಲಾವೆಸಿಯಲ್ಲಿ ಸುಮಾರು 4,340 ಜನರನ್ನು ಬಲಿ ಪಡೆದಿತ್ತು. 2004 ರಲ್ಲಿ, ಅತ್ಯಂತ ಶಕ್ತಿಶಾಲಿ ಹಿಂದೂ ಮಹಾಸಾಗರದ ಭೂಕಂಪವು ಸುನಾಮಿಯನ್ನು ಉಂಟುಮಾಡಿತು. ಇದು 12 ದೇಶಗಳಲ್ಲಿ 2,30,000ಕ್ಕಿಂತ ಹೆಚ್ಚು ಜನರನ್ನು ಸಾವನ್ನಪ್ಪಿದ್ದರು. ಅವರಲ್ಲಿ ಹೆಚ್ಚಿನವರು ಇಂಡೋನೇಷ್ಯಾದ ಅಚೆ ಪ್ರಾಂತ್ಯದವರಾಗಿದ್ದರು.(ಎಪಿ)

ಇದನ್ನೂ ಓದಿ: ರಫೇಲ್​​​ ಖರೀದಿ ವಿಚಾರ... ಭಾರತಕ್ಕೆ ಭೇಟಿ ನೀಡಿ ಚರ್ಚಿಸಿದ ಫ್ರೆಂಚ್​ ನಿಯೋಗ : ಮೂಲಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.