ETV Bharat / international

ಪಾಕಿಸ್ತಾನದಲ್ಲಿ ಬಡತನ ಹೆಚ್ಚಳ - ಶೇ 40ರಷ್ಟು ಜನ ಬಡತನ ರೇಖೆಯ ಕೆಳಗೆ; ವಿಶ್ವಬ್ಯಾಂಕ್

ಪಾಕಿಸ್ತಾನದಲ್ಲಿ ಬಡತನದ ಪ್ರಮಾಣ ಹೆಚ್ಚಾಗುತ್ತಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.

Pakistan's 40% Population Lives Below Poverty Line,

author img

By ETV Bharat Karnataka Team

Published : Sep 25, 2023, 2:35 PM IST

ನವದೆಹಲಿ: ಪಾಕಿಸ್ತಾನದ ಜನಸಂಖ್ಯೆಯ ಶೇಕಡಾ 40 ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ. ತನ್ನ ಮಿಲಿಟರಿ, ರಾಜಕೀಯ ಮತ್ತು ಉದ್ಯಮ ನಾಯಕರ ಬಲವಾದ ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರೇರಿತವಾದ ನೀತಿ ನಿರ್ಧಾರಗಳನ್ನು ಪಾಕಿಸ್ತಾನ ಪುನರ್​ ಪರಿಶೀಲನೆ ಮಾಡುವ ಸಮಯ ಇದಾಗಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.

ಬರುವ ವರ್ಷ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಅದಕ್ಕೂ ಮುನ್ನ ಬಂದಿರುವ ವಿಶ್ವಬ್ಯಾಂಕ್ ವರದಿ ಮಹತ್ವದ್ದಾಗಿದೆ. ಈ ವರದಿಯನ್ನಾಧರಿಸಿ ಹೊಸ ಸರ್ಕಾರ ದೇಶಹಿತಕ್ಕೆ ಪೂರಕವಾದ ನೀತಿ ನಿಯಮಗಳನ್ನು ರೂಪಿಸಬಹುದು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಆರ್ಥಿಕತೆಯ ಗಾತ್ರದ ಶೇಕಡಾ 7 ಕ್ಕಿಂತ ಹೆಚ್ಚಿನ ಹಣಕಾಸಿನ ಹೊಂದಾಣಿಕೆಯ ಮೂಲಕ ಆರ್ಥಿಕ ಸ್ಥಿರತೆಯನ್ನು ಸಾಧಿಸಲು ತನ್ನ ಕೃಷಿ ಮತ್ತು ರಿಯಲ್ ಎಸ್ಟೇಟ್​​ ವಲಯದ ಮೇಲೆ ತೆರಿಗೆ ವಿಧಿಸುವಂತೆ ವಿಶ್ವ ಬ್ಯಾಂಕ್ ಪಾಕಿಸ್ತಾನವನ್ನು ಕೇಳಿದೆ ಎಂದು ವರದಿಗಳು ತಿಳಿಸಿವೆ.

ಕಳೆದ ಹಣಕಾಸು ವರ್ಷದ ವೇಳೆಗೆ ಪಾಕಿಸ್ತಾನದಲ್ಲಿ ಬಡತನವು ಶೇಕಡಾ 39.4 ಕ್ಕೆ ಏರಿದೆ. ಹದಗೆಟ್ಟ ಆರ್ಥಿಕ ಪರಿಸ್ಥಿತಿಗಳಿಂದಾಗಿ ಇನ್ನೂ 12.5 ಮಿಲಿಯನ್ ಜನ ಬಡತನದ ಕೂಪಕ್ಕೆ ತಳ್ಳಲ್ಪಡುವ ಸಾಧ್ಯತೆಯಿದೆ ಎಂದು ವಿಶ್ವಬ್ಯಾಂಕ್ ಶುಕ್ರವಾರ ಬಹಿರಂಗಪಡಿಸಿದೆ. ಪ್ರಸ್ತುತ ಸುಮಾರು 95 ಮಿಲಿಯನ್ ಪಾಕಿಸ್ತಾನಿಗಳು ಬಡತನದಲ್ಲಿ ಬದುಕುತ್ತಿದ್ದಾರೆ.

ಕಡಿಮೆ ಮಾನವ ಅಭಿವೃದ್ಧಿ, ಸಮರ್ಥನೀಯವಲ್ಲದ ಹಣಕಾಸಿನ ಪರಿಸ್ಥಿತಿ, ಅತಿಯಾದ ನಿಯಂತ್ರಿತ ಖಾಸಗಿ ವಲಯ, ಕೃಷಿ ಮತ್ತು ಇಂಧನ ಕ್ಷೇತ್ರಗಳಲ್ಲಿ ಮುಂದಿನ ಸರ್ಕಾರ ಸುಧಾರಣೆ ತರಬೇಕೆಂದು ವಿಶ್ವಬ್ಯಾಂಕ್ ಗುರುತಿಸಿದೆ. ತೆರಿಗೆ ಮತ್ತು ಜಿಡಿಪಿ ಅನುಪಾತವನ್ನು ತಕ್ಷಣವೇ ಶೇಕಡಾ 5 ರಷ್ಟು ಹೆಚ್ಚಿಸುವ ಮತ್ತು ವೆಚ್ಚಗಳನ್ನು ಜಿಡಿಪಿಯ ಶೇಕಡಾ 2.7 ರಷ್ಟು ಕಡಿತಗೊಳಿಸುವ ಕ್ರಮಗಳನ್ನು ವಿಶ್ವ ಬ್ಯಾಂಕ್ ಪ್ರಸ್ತಾಪಿಸಿದೆ.

ಇದಲ್ಲದೆ, ಪಾಕಿಸ್ತಾನವು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕಡಿಮೆ ತಲಾ ಆದಾಯ ಹೊಂದಿರುವ ದೇಶವಾಗಿದೆ ಮತ್ತು ಜಾಗತಿಕವಾಗಿ ಅತಿ ಹೆಚ್ಚು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಹೊಂದಿದೆ. 2000 ಮತ್ತು 2020 ರ ನಡುವೆ ಪಾಕಿಸ್ತಾನದ ಸರಾಸರಿ ನೈಜ ತಲಾ ಬೆಳವಣಿಗೆಯ ದರವು ಕೇವಲ 1.7% ರಷ್ಟಿದೆ ಎಂದು ವಿಶ್ವ ಬ್ಯಾಂಕ್ ಒತ್ತಿಹೇಳಿದೆ. ಇದು ದಕ್ಷಿಣ ಏಷ್ಯಾದ ದೇಶಗಳ ಸರಾಸರಿ 4% ಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಈ ಆರ್ಥಿಕ ಸವಾಲು ದೇಶದಲ್ಲಿ ಆರ್ಥಿಕ ಸ್ಥಿರತೆಯನ್ನು ಪುನಃಸ್ಥಾಪಿಸಲು ಕ್ರಮಗಳ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ.

ಇದನ್ನೂ ಓದಿ : ಜನಾಂಗೀಯ ಹಿಂಸಾಚಾರದ ಭೀತಿ; 1 ಲಕ್ಷ 20 ಸಾವಿರ ಅರ್ಮೇನಿಯನ್ನರ ಸಾಮೂಹಿಕ ವಲಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.