ETV Bharat / international

ಜೈಲಿನಿಂದ ಪರಾರಿಯಾದ ಅಪರಾಧಿಯನ್ನು ದಟ್ಟಾರಣ್ಯದಲ್ಲಿ ಹಿಡಿದುಕೊಟ್ಟ ಪೊಲೀಸ್​ ಶ್ವಾನ

author img

By ETV Bharat Karnataka Team

Published : Sep 14, 2023, 11:59 AM IST

ಮಾಜಿ ಗೆಳತಿಯ ಕೊಲೆ ಪ್ರಕರಣ ಸೇರಿದಂತೆ ಅನೇಕ ಅಪರಾಧ ಕೃತ್ಯಗಳಲ್ಲಿ ಬೇಕಾಗಿದ್ದ ಆರೋಪಿ ಅರಣ್ಯದಲ್ಲಿ ಯಾರ ಕಣ್ಣಿಗೂ ಬೀಳದಂತೆ ತೇವಳುತ್ತಾ ಸಾಗಿದ್ದ.

police dog found the convict who escaped from jail

ವಾಷಿಂಗ್ಟನ್​​: ಅಮೆರಿಕದ ಪೆನ್ಸಿಲ್ವೇನಿಯಾ ಜೈಲಿನಿಂದ ತಪ್ಪಿಸಿಕೊಂಡು ಅರಣ್ಯದಲ್ಲಿ ಪರಾರಿಯಾಗಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸ್​ ನಾಯಿ ಹಿಡಿದಿರುವ ರೋಚಕ ಘಟನೆ ವರದಿಯಾಗಿದೆ. ಪರಾರಿಯಾಗಿ ಎರಡು ವಾರಗಳಾದ ನಂತರ ದಟ್ಟಾರಣ್ಯದಲ್ಲಿ ತೆವಳುತ್ತಾ ಸಾಗಿದ ಅಪರಾಧಿಯನ್ನು ಶ್ವಾನ ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದೆ.

ನಾಲ್ಕು ವರ್ಷದ ಬೆಲ್ಜಿಯನ್​ ಮೊಲಿನೊಯಿಸ್​ ಎಂಬ ಗಂಡು ನಾಯಿ ಯೋಡಾ ಈ ಸಾಹಸ ಮೆರೆದಿದೆ. 34 ವರ್ಷದ ಆರೋಪಿ ಕ್ಯಾವಲ್ಕೊಂಟೆ ಚೆಸ್ಟರ್​ ಕೌಂಟಿಯ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ ಸಿಕ್ಕಿಬಿದ್ದಿದ್ದು, ಈತನ ಪತ್ತೆಗೆ ಮುಂದಾಗಿದ್ದ 500 ಮಂದಿ ಅಧಿಕಾರಿಗಳ ಕೆಲಸವನ್ನು ಶ್ವಾನ ಸುಲಭಗೊಳಿಸಿದೆ ಎಂದು ಸಿಎನ್​ಎನ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರಕರಣದ ಸಂಪೂರ್ಣ ವಿವರ: 2021ರಲ್ಲಿ ತಮ್ಮ ಮಾಜಿ ಗೆಳತಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಕ್ಯಾವಲ್ಕೊಂಟೆ ಚೆಸ್ಟರ್​ ಕೌಂಟಿ ಜೈಲಿನಿಂದ ತಪ್ಪಿಸಿಕೊಂಡಿದ್ದ. 2017ರಲ್ಲಿ ಬ್ರೆಜಿಲ್​ನ ನರಹತ್ಯೆ ಪ್ರಕರಣದಲ್ಲಿ ಕೂಡ ಈತ ಬೇಕಾಗಿದ್ದ ಎಂದು ಅಮೆರಿಕದ ಮಾರ್ಷಲ್ಸ್​ ಸರ್ವೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬುಧವಾರ ರಾತ್ರಿ ನಡೆದ ಸಭೆಯಲ್ಲಿ ಮಾತನಾಡಿದ ಪೆನ್ಸಿಲ್ವೇನಿಯಾ ರಾಜ್ಯದ ಪೊಲೀಸ್​ ಅಧಿಕಾರಿ ಜಾರ್ಜ್​ ಬಿವೆನ್ಸ್​, ಪರಾರಿಯಾದವರನ್ನು ಪತ್ತೆ ಮಾಡುವಲ್ಲಿ ಯೋಡಾ ಪಾತ್ರ ಪ್ರಮುಖವಾಗಿತ್ತು. ಕದ್ದ ರೈಫಲ್‌ಗಳನ್ನು ಮರು ಬಳಸದಂತೆ ಆತ ತಡೆಯುತ್ತಾನೆ. ಕೆ 9ಗಳಂತೆ ಹಲವು ಪತ್ತೆ ಮತ್ತು ಶೋಧ ಕಾರ್ಯದಲ್ಲಿ ಅತ್ಯಂತ ಮಹತ್ವದ ಜವಾಬ್ದಾರಿಯಿಂದ ಶೋಧ ನಡೆಸಬಲ್ಲ ಎಂದು ಪೆನ್ಸಿಲ್ವೇನಿಯಾ ಪೂರ್ವ ಜಿಲ್ಲೆಯ ಉಪ ಮೇಲ್ವಿಚಾರಕ ಮಾರ್ಶಲ್ ಹೇಳಿದರು.

ಪತ್ತೆ ಕಾರ್ಯಾಚರಣೆಗೆ ಯೋಡಾ ನೇಮಕ: ಶ್ವಾನ ಯೋಡಾ ಚಲಿಸಿದಾಗ ಅಪರಾಧಿಯ ತಲೆಯ ಮೇಲಿನ ಟೊಪ್ಪಿ ಮಾತ್ರ ಕಾಣಿಸಿದೆ. ಆತ ಯಾರನ್ನಾದರೂ ಕಚ್ಚುವುದು ಮತ್ತು ಹಿಡಿದಿಟ್ಟುಕೊಳ್ಳುವಲ್ಲಿ ಅತ್ಯಂತ ನಿಪುಣ. ಯಾರನ್ನಾದರೂ ಆತ ಹಿಡಿದಿಟ್ಟುಕೊಂಡರೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ವಿವರಿಸಿದರು.

ಅಪರಾಧಿಯನ್ನು ಸೆರೆಹಿಡಿಯುವಲ್ಲಿ ಯೋಡಾ ಕಾರ್ಯ ಅಸಾಧಾರಣ ಕೆಲಸವಾಗಿದ್ದು ಸಾರ್ವಜನಿಕರಿಂದಲೂ ವ್ಯಾಪಕ ಮೆಚ್ಚುಗೆ ಗಳಿಸಿದೆ. ಬಂಧಿಸಿದ ಅಪರಾಧಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಟಾರ್ನಿ ಜನರಲ್​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಲಿಬಿಯಾ ಪ್ರವಾಹ: ಡೆರ್ನಾ ನಗರದಲ್ಲಿ 5300ಕ್ಕೂ ಹೆಚ್ಚು ಮಂದಿ ಸಾವು, 30 ಸಾವಿರ ಜನ ನಿರಾಶ್ರಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.