ETV Bharat / international

ಬ್ರಿಕ್ಸ್​ ಶೃಂಗಸಭೆ ಮುಗಿಸಿ ಅಥೆನ್ಸ್​​ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ.. ಭವ್ಯ ಸ್ವಾಗತ - ಗ್ರೀಸ್‌ಗೆ ಮೊದಲ ಭೇಟಿ

ಸುಮಾರು 40 ವರ್ಷಗಳ ಬಳಿಕ ಗ್ರೀಸ್​ಗೆ ಭಾರತದ ಪ್ರಧಾನಿ ಒಬ್ಬರು ಭೇಟಿ ನೀಡಿದ್ದಾರೆ. ನರೇಂದ್ರ ಮೋದಿ ಭೇಟಿ ಹಿನ್ನೆಲೆ ಗ್ರೀಸ್​ನಲ್ಲಿರುವ ಭಾರತೀಯ ಸಮುದಾಯ ಖುಷಿಯಾಗಿದೆ.

Etv BharatGreek students from a Bollywood dance academy prepare
Etv Bharatಇಂದು ಅಥೆನ್ಸ್​​ಗೆ ಪ್ರಧಾನಿ ಭೇಟಿ.. ಭರ್ಜರಿ ಸ್ವಾಗತ ಕೋರಲು ಗ್ರೀಸ್​ ಸನ್ನದ್ಧ
author img

By ETV Bharat Karnataka Team

Published : Aug 25, 2023, 6:57 AM IST

Updated : Aug 25, 2023, 11:05 AM IST

ಅಥೆನ್ಸ್( ಗ್ರೀಸ್​): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಥೆನ್ಸ್‌ಗೆ ಭೇಟಿ ನೀಡಿದ್ದಾರೆ. 40 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ಗ್ರೀಸ್‌ಗೆ ಮೊದಲ ಭೇಟಿ ನೀಡಿದ್ದಾರೆ. ಇದಕ್ಕಾಗಿ ಅಥೆನ್ಸ್​ನಲ್ಲಿ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಯುರೋಪಿನ ಐತಿಹಾಸಿಕ ಭೂಮಿಗೆ ಇದು ನನ್ನ ಮೊದಲ ಭೇಟಿಯಾಗಿದೆ. 40 ವರ್ಷಗಳ ನಂತರ ಗ್ರೀಸ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಗೌರವ ನನಗೆ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಗ್ರೀಸ್​ಗೆ ಬಂದಿಳಿದ ಪ್ರಧಾನಿಗೆ ಭಾರತೀಯ ಸಮುದಾಯವು ಅಥೆನ್ಸ್‌ನಲ್ಲಿ ಗ್ರೀಕ್ ಶಿರಸ್ತ್ರಾಣ ಉಡುಗೊರೆಯಾಗಿ ನೀಡುವ ಮೂಲಕ ಅವರಿಗೆ ಆತ್ಮೀಯ ಸ್ವಾಗತ ಕೋರಿದೆ. ಅಥೆನ್ಸ್‌ನ ಹೋಟೆಲ್ ಗ್ರಾಂಡೆ ಬ್ರೆಟಾಗ್ನೆ ಹೊರಗೆ ಜಮಾಯಿಸಿದ ಅನಿವಾಸಿ ಭಾರತೀಯರು ಗ್ರೀಸ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಗ್ರೀಸ್‌ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಅಲ್ಲಿನ ಪ್ರಧಾನಿ ಮಿತ್ಸೋಟಾಕಿಸ್ ಅವರನ್ನು ಭೇಟಿ ಮಾಡಲಿದ್ದು, ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಬಂಧ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಪ್ರಧಾನಮಂತ್ರಿ ಮೋದಿಯವರು ಎರಡೂ ದೇಶಗಳ ನಡುವಣ ವ್ಯಾಪಾರ ವಹಿವಾಟುಗಳ ಬಗ್ಗೆ ಚರ್ಚಿಸಲಿದ್ದಾರೆ. ಅಷ್ಟೇ ಅಲ್ಲ ಗ್ರೀಸ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆ ಮುಕ್ತಾಯದ ನಂತರ ಪ್ರಧಾನಿ ಇಂದು ಅಥೆನ್ಸ್​​​ಗೆ ತೆರಳಲಿದ್ದಾರೆ. 1983 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಗ್ರೀಸ್‌ಗೆ ಭೇಟಿ ನೀಡಿದ್ದರು. ಇದು ಭಾರತದ ಪ್ರಧಾನಿಯೊಬ್ಬರು ಗ್ರೀಸ್​ಗೆ ಭೇಟಿ ನೀಡಿದ ಕೊನೆಯ ಪ್ರಧಾನಿ ಆಗಿದ್ದರು. 83 ರ ಬಳಿಕ ಈಗ ಪ್ರಧಾನಿ ಗ್ರೀಸ್​ ಪ್ರವಾಸ ಕೈಗೊಂಡಿದ್ದಾರೆ.

ಪ್ರಧಾನಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ: ಪ್ರಧಾನಿ ಗ್ರೀಸ್​ಗೆ ಆಗಮಿಸುವ ಮುನ್ನ ಭಾರತೀಯ ಸಮುದಾಯ ಪ್ರಧಾನಿ ಸ್ವಾಗತಿಸಲು ಪೂರ್ವ ತಯಾರಿ ಮಾಡಿಕೊಂಡಿತ್ತು. ಗ್ರೀಕ್ ವಿದ್ಯಾರ್ಥಿಗಳು, ಬಾಲಿವುಡ್ ನೃತ್ಯ ಅಕಾಡೆಮಿಯಲ್ಲಿ ನೃತ್ಯಾಭ್ಯಾಸ ಮಾಡಿದ್ದರು. ಭಾರತೀಯ ಡಯಾಸ್ಪೊರಾ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅವರು ತರಬೇತಿ ಪಡೆದು ಸಿದ್ಧರಾಗಿದ್ದರು. ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿತ್ಸೋಟಾಕಿಸ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಗ್ರೀಸ್‌ಗೆ ಭೇಟಿ ನೀಡಿದ್ದಾರೆ.

  • #WATCH | Athens | Greek students from a Bollywood dance academy prepare to perform at the Indian diaspora event in Athens, Greece.

    PM Narendra Modi will visit Greece today at the invitation of Greek PM Kyriakos Mitsotakis. This is the first visit by an Indian Prime Minister to… pic.twitter.com/12MKeERo3p

    — ANI (@ANI) August 24, 2023 " class="align-text-top noRightClick twitterSection" data=" ">

ನೃತ್ಯ ಸಂಯೋಜಕಿ ಸುಮನ್ ರುದ್ರ ಪ್ರಧಾನಿ ಗ್ರೀಸ್​ ಭೇಟಿ ಬಗ್ಗೆ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶಕ್ಕೆ ಆಗಮಿಸುತ್ತಿದ್ದಾರೆ. ಈ ವಿಷಯ ಕೇಳಿ ನಾವು ತುಂಬಾ ಉತ್ಸುಕರಾಗಿದ್ದೇವೆ. ನಾವು ಅವರಿಗಾಗಿ ವಿಶೇಷವಾದದ್ದನ್ನು ಸಿದ್ಧಪಡಿಸಿದ್ದೇವೆ. ಇದೇ ಮೊದಲ ಬಾರಿಗೆ ನಮ್ಮ ಪ್ರಧಾನಮಂತ್ರಿಗಳನ್ನು ಸ್ವಾಗತಿಸಲು ಗ್ರೀಕ್ ಮಹಿಳೆಯರು ಭಾರತೀಯ ಡಯಾಸ್ಪೊರಾದಲ್ಲಿ ಭಾಗವಹಿಸುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  • #WATCH | Choreographer Suman Rudra says "We are very excited that Prime Minister Narendra Modi is coming to our country. We have prepared something special for him. This is the first time, Greek women will participate in the Indian diaspora to welcome our prime minister. We… pic.twitter.com/uKkSJpsZhk

ಬಾಲಿವುಡ್ ಡ್ಯಾನ್ಸ್ ಅಕಾಡೆಮಿಯ ಗ್ರೀಕ್ ವಿದ್ಯಾರ್ಥಿಗಳು ಆಸ್ಕರ್ ಪ್ರಶಸ್ತಿ ವಿಜೇತ 'ನಾಟು ನಾಟು' ಹಾಡಿನ ಟ್ಯೂನ್‌ಗೆ ನೃತ್ಯ ಮಾಡುವ ಮೂಲಕ ಪ್ರಧಾನಿ ಅವರನ್ನು ಸ್ವಾಗತಿಸಲಿದ್ದಾರೆ. ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಯೊಬ್ಬರು ಮಾತನಾಡಿ, ನಾವು ನಿಜವಾಗಿಯೂ ಪ್ರಧಾನಿ ನೋಡಲು ಉತ್ಸುಕರಾಗಿದ್ದೇವೆ ಎಂದು ಖುಷಿ ಹೊರ ಹಾಕಿದ್ದಾರೆ.(ANI)

  • #WATCH | A student from a Bollywood dance academy who will perform in front of PM Modi in Athens, Greece says "We are really excited, it is his first visit to Greece. We are really honoured. I have been here for six years and have learnt Indian dance form Bharatanatyam..." pic.twitter.com/gURa27Idfy

ಇದನ್ನು ಓದಿ: ಬ್ರಿಕ್ಸ್ ಶೃಂಗಸಭೆ: ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಧ್ಯೆ ಚುಟುಕು ಮಾತುಕತೆ

Last Updated : Aug 25, 2023, 11:05 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.