ಪೋರ್ಟ್ ಮೊರೆಸ್ಬಿ: ನೈಋತ್ಯ ಪೆಸಿಫಿಕ್ ರಾಷ್ಟ್ರದ ಜನರಿಗೆ ಭಾರತೀಯ ಚಿಂತನೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಟೋಕ್ ಪಿಸಿನ್ ಭಾಷೆಯಲ್ಲಿ ತಮಿಳು ಕ್ಲಾಸಿಕ್ 'ತಿರುಕ್ಕುರಲ್' ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಬಿಡುಗಡೆ ಮಾಡಿದರು. ಪುಸ್ತಕ ಬಿಡುಗಡೆ ವೇಳೆ ಮೋದಿಗೆ ಪಪುವಾ ನ್ಯೂಗಿನಿ ಪ್ರಧಾನ ಮಂತ್ರಿ ಜೇಮ್ಸ್ ಮರಾಪೆ ಸಾಥ್ ನೀಡಿದರು.
ಪ್ರಥಮ ಬಾರಿಗೆ ಭಾನುವಾರ ಪಪುವಾ ನ್ಯೂಗಿನಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸುವ ಸಲುವಾಗಿ ಮೋದಿ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. ಪಿಎನ್ಜಿ ಪ್ರಧಾನ ಮಂತ್ರಿ ಜೇಮ್ಸ್ ಮರಾಪೆ ನೇತ್ವದಲ್ಲಿ ಇಂದು ನಡೆದ ಭಾರತ ಮತ್ತು 14 ಪೆಸಿಫಿಕ್ ದ್ವೀಪ ರಾಷ್ಟ್ರಗಳ ನಡುವಿನ ಪ್ರಮುಖ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸಹ - ಅಧ್ಯಕ್ಷತೆ ವಹಿಸಿದರು.
-
I would like to commend @pngsasi, Governor of the West New Britain Province and Mrs. Subha Sasindran for their effort to translate the Thirukkural in Tok Pisin. Governor Sasindran has done his schooling in Tamil while Mrs. Subha Sasindran is a respected linguist. pic.twitter.com/Tydq1lPckl
— Narendra Modi (@narendramodi) May 22, 2023 " class="align-text-top noRightClick twitterSection" data="
">I would like to commend @pngsasi, Governor of the West New Britain Province and Mrs. Subha Sasindran for their effort to translate the Thirukkural in Tok Pisin. Governor Sasindran has done his schooling in Tamil while Mrs. Subha Sasindran is a respected linguist. pic.twitter.com/Tydq1lPckl
— Narendra Modi (@narendramodi) May 22, 2023I would like to commend @pngsasi, Governor of the West New Britain Province and Mrs. Subha Sasindran for their effort to translate the Thirukkural in Tok Pisin. Governor Sasindran has done his schooling in Tamil while Mrs. Subha Sasindran is a respected linguist. pic.twitter.com/Tydq1lPckl
— Narendra Modi (@narendramodi) May 22, 2023
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದ್ದು, "ಟೋಕ್ ಪಿಸಿನ್ ಪಪುವಾ ನ್ಯೂಗಿನಿಯಾದ ಅಧಿಕೃತ ಭಾಷೆ. ತಮಿಳು ಕ್ಲಾಸಿಕ್ ಅನ್ನು ಪಶ್ಚಿಮ ನ್ಯೂ ಬ್ರಿಟನ್ ಪ್ರಾಂತ್ಯದ ಗವರ್ನರ್ ಸಸಿಂದ್ರನ್ ಮುತ್ತುವೆಲ್ ಮತ್ತು ಸುಭಾ ಸಸಿಂದ್ರನ್ ಅನುವಾದಿಸಿದ್ದಾರೆ. ಈ ಪುಸ್ತವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಪಿಎಂ ಜೇಮ್ಸ್ ಮರಾಪೆ ನ್ಯೂಗಿನಿಯಾದ ಟೋಕ್ ಪಿಸಿನ್ ಭಾಷೆಯಲ್ಲಿ ಇಂದು ಈ ಪುಸ್ತಕ ಬಿಡುಗಡೆ ಮಾಡಿದ್ದು, ಇದು ಭಾರತೀಯ ಚಿಂತನೆ ಮತ್ತು ಸಂಸ್ಕೃತಿಯನ್ನು ಪಪುವಾ ನ್ಯೂಗಿನಿಯಾದ ಜನರಿಗೆ ತಿಳಿಸಿಕೊಡಲಿದೆ. ಹಾಗೆಯೇ, ಭಾರತೀಯ ವಲಸಿಗರು ತಾಯ್ನಾಡಿನೊಂದಿಗೆ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ" ಎಂದು ತಿಳಿಸಿದೆ.
"ಪಪುವಾ ನ್ಯೂಗಿನಿಯಾದಲ್ಲಿ ಜೇಮ್ಸ್ ಮರಾಪೆ ಮತ್ತು ನಾನು ಟೋಕ್ ಪಿಸಿನ್ ಭಾಷೆಯಲ್ಲಿ ತಿರುಕ್ಕುರಲ್ ಅನ್ನು ಬಿಡುಗಡೆ ಮಾಡಿದೆವು. ತಿರುಕ್ಕುರಲ್ ಒಂದು ಅಪ್ರತಿಮ ಕೃತಿಯಾಗಿದ್ದು, ಇದು ಜೀವನಕ್ಕೆ ಬೇಕಾದ ಅನೇಕ ವಿಷಯಗಳ ಒಳನೋಟವನ್ನು ಒಳಗೊಂಡಿದೆ" ಎಂದು ಪುಸ್ತಕ ಬಿಡುಗಡೆಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಜೊತೆಗೆ, ಪುಸ್ತಕದ ಲೇಖಕರೊಂದಿಗೆ ಸಂವಾದ ನಡೆಸಿದ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
-
In Papua New Guinea, PM James Marape and I had the honour of releasing the Thirukkural in Tok Pisin language. Thirukkural is an iconic work, which provides valuable insights across different subjects. pic.twitter.com/JHa4DcPneu
— Narendra Modi (@narendramodi) May 22, 2023 " class="align-text-top noRightClick twitterSection" data="
">In Papua New Guinea, PM James Marape and I had the honour of releasing the Thirukkural in Tok Pisin language. Thirukkural is an iconic work, which provides valuable insights across different subjects. pic.twitter.com/JHa4DcPneu
— Narendra Modi (@narendramodi) May 22, 2023In Papua New Guinea, PM James Marape and I had the honour of releasing the Thirukkural in Tok Pisin language. Thirukkural is an iconic work, which provides valuable insights across different subjects. pic.twitter.com/JHa4DcPneu
— Narendra Modi (@narendramodi) May 22, 2023
ಇದನ್ನೂ ಓದಿ : ಮೋದಿ ಕಾಲು ಮುಟ್ಟಿ ಆಶೀರ್ವಾದ ಪಡೆದ ಪಪುವಾ ನ್ಯೂಗಿನಿ ಪ್ರಧಾನಿ ಜೇಮ್ಸ್ ಮರಾಪೆ!- ವಿಡಿಯೋ
ಮತ್ತೊಂದು ಟ್ವೀಟ್ ಮಾಡಿ, "ಟೋಕ್ ಪಿಸಿನ್‌ನಲ್ಲಿ ತಿರುಕ್ಕುರಲ್ ಪುಸ್ತಕವನ್ನು ಭಾಷಾಂತರಿಸಿದ ಪಶ್ಚಿಮ ನ್ಯೂ ಬ್ರಿಟನ್ ಪ್ರಾಂತ್ಯದ ಗವರ್ನರ್ ಸಸಿಂದ್ರನ್ ಮುತ್ತುವೆಲ್ ಮತ್ತು ಸುಭಾ ಸಸೀಂದ್ರನ್ ಅವರ ಕಾರ್ಯ ಶ್ಲಾಘನೀಯ. ಗವರ್ನರ್ ಸಸಿಂದ್ರನ್ ಅವರು ತಮಿಳು ಭಾಷೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ವ್ಯಾಸಂಗ ಮಾಡಿದ್ದಾರೆ. ಹಾಗೆಯೇ, ಸುಭಾ ಸಸಿಂದ್ರನ್ ಅವರು ಗೌರವಾನ್ವಿತ ಭಾಷಾಶಾಸ್ತ್ರಜ್ಞರಾಗಿದ್ದಾರೆ" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ತಮಿಳಿನ ಬೈಬಲ್ ಎಂದು ಕರೆಯುವ 'ತಿರುಕ್ಕುರಲ್' ದ್ವಿಪದಿಗಳ ಸಂಗ್ರಹ. ಈ ಗ್ರಂಥವು ನೈತಿಕತೆ, ರಾಜಕೀಯ ಮತ್ತು ಆರ್ಥಿಕ ವಿಷಯಗಳು ಸೇರಿದಂತೆ ಪ್ರೀತಿಯ ಬಗ್ಗೆ ವಿವರಣೆ ಇದೆ. ಇದನ್ನು ಕವಿ ತಿರುವಳ್ಳುವರ್ ಬರೆದಿದ್ದಾರೆ. ಗ್ರ೦ಥದಲ್ಲಿ 133 ಅಧ್ಯಾಯಗಳಿದ್ದು, 1333 ಸಣ್ಣ ಕವನಗಳಿವೆ.