ETV Bharat / international

Modi in Egypt: ಭಾರತದ ಕೋಮು ಸೌಹಾರ್ದತೆ, ಮೋದಿ ನಾಯಕತ್ವ, ಸಮಾನ ಹಕ್ಕುಗಳಿಗೆ ಈಜಿಪ್ಟ್‌ನ ಗ್ರ್ಯಾಂಡ್ ಮುಫ್ತಿ ಮೆಚ್ಚುಗೆ - ಈಜಿಪ್ಟ್

ಎರಡು ದಿನಗಳ ಈಜಿಪ್ಟ್ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂಜೆ ರಾಜಧಾನಿ ಕೈರೋಗೆ ಆಗಮಿಸಿದರು. 1997ರಿಂದ ಈ ದೇಶಕ್ಕೆ ಅಧಿಕೃತ ದ್ವಿಪಕ್ಷೀಯ ಭೇಟಿ ಕೈಗೊಂಡ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಿದ್ದಾರೆ.

PM Modi Meets Egypts Grand Mufti
ಈಜಿಪ್ಟ್‌ನ ಗ್ರಾಂಡ್ ಮುಫ್ತಿ, ಪ್ರಧಾನಿ ನರೇಂದ್ರ ಮೋದಿ
author img

By

Published : Jun 25, 2023, 7:18 AM IST

ಕೈರೋ (ಈಜಿಪ್ಟ್): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಈಜಿಪ್ಟ್‌ನ ಗ್ರ್ಯಾಂಡ್ ಮುಫ್ತಿ (ಇಸ್ಲಾಮಿಕ್ ನ್ಯಾಯಶಾಸ್ತ್ರಜ್ಞ) ಶಾಕಿ ಇಬ್ರಾಹಿಂ ಅಬ್ದೆಲ್-ಕರೀಮ್ ಅಲ್ಲಮ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಪ್ರಧಾನಿ ಮೋದಿ ಅವರ ನಾಯಕತ್ವ ಶ್ಲಾಘಿಸಿದ ಗ್ರ್ಯಾಂಡ್ ಮುಫ್ತಿ "ವೈವಿಧ್ಯತೆಯಿಂದ ಕೂಡಿದ ಭಾರತದಲ್ಲಿ ವಿವಿಧ ನಂಬಿಕೆಗಳ (ಧರ್ಮಗಳು) ಜನರ ನಡುವೆ ಸಹಬಾಳ್ವೆಯನ್ನು ತರುವಲ್ಲಿ ಪ್ರಧಾನಿ ಮೋದಿಯವರು ಚಾಣಾಕ್ಷ ನೀತಿಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಭಾರತದ ಕೋಮು ಸೌಹಾರ್ದತೆ, ಸಮಾನ ಹಕ್ಕುಗಳು ಶ್ಲಾಘನೀಯ" ಎಂದು ಅವರು ಹೇಳಿದರು.

"ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ನನಗೆ ಅವಕಾಶ ಸಿಕ್ಕಿತು. ಇದು ತುಂಬಾ ಒಳ್ಳೆಯ ಮತ್ತು ಆಸಕ್ತಿದಾಯಕ ಮಾತುಕತೆ ನಡೆಯಿತು. ಇದು ನಮ್ಮ 2ನೇ ಭೇಟಿ. ಎರಡು ಸಭೆಗಳ ನಡುವೆ, ಭಾರತದಲ್ಲಿ ಮಹತ್ತರವಾದ ಬೆಳವಣಿಗೆಯನ್ನು ನಾನು ಗಮನಿಸಿದ್ದೇನೆ. ಅವರು ಭಾರತದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ವಾಸ್ತವವಾಗಿ ಅವರು ಭಾರತದಂತಹ ದೊಡ್ಡ ದೇಶಕ್ಕೆ ಬುದ್ಧಿವಂತ ನಾಯಕತ್ವ ನೀಡುತ್ತಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

"ಭಾರತದಲ್ಲಿನ ವಿವಿಧ ಧರ್ಮೀಯರ ನಡುವೆ ಸಹಬಾಳ್ವೆಯನ್ನು ತರುವಲ್ಲಿ ಪ್ರಧಾನಿಯವರ ನಾಯಕತ್ವ ಮೆಚ್ಚುವಂಥದ್ದು. ಧಾರ್ಮಿಕ ಮಟ್ಟದಲ್ಲಿ ನಾವು ಭಾರತದೊಂದಿಗೆ ಬಲವಾದ ಸಹಕಾರವನ್ನು ಹೊಂದಿದ್ದೇವೆ. ಭಾರತ ಇಲ್ಲಿ ಮಾಹಿತಿ ತಂತ್ರಜ್ಞಾನ ಕೇಂದ್ರದಲ್ಲಿ ಉತ್ಕೃಷ್ಟತೆ ಒದಗಿಸಲಿದ್ದಾರೆ. ಇದಕ್ಕೆ ನಮ್ಮ ಸಹಕಾರವಿದೆ" ಎಂದು ಅವರು ಹೇಳಿದರು.

ಶನಿವಾರ ಮುಂಜಾನೆ ಈಜಿಪ್ಟ್‌ಗೆ ತಮ್ಮ ಚೊಚ್ಚಲ ರಾಜ್ಯ ಪ್ರವಾಸ ಕೈಗೊಂಡಿರುವ ಮೋದಿ ಕೈರೋದಲ್ಲಿ ಗ್ರ್ಯಾಂಡ್ ಮುಫ್ತಿ ಅವರನ್ನು ಭೇಟಿಯಾದರು. ಈ ವೇಳೆ ಮುಫ್ತಿ ಅವರು ಪ್ರಧಾನಿ ಮೋದಿಯವರಿಗೆ ವಿಶೇಷ ಉಡುಗೊರೆ ನೀಡಿದರು. ಬಳಿಕ ತಮ್ಮ ಇತ್ತೀಚಿನ ಭಾರತ ಭೇಟಿಯನ್ನು ಪ್ರೀತಿಯಿಂದ ನೆನಪಿಸಿಕೊಂಡಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ನಡೆದ ಸೂಫಿ ಸಮಾವೇಶವೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದೆ ಎಂದು ಮುಫ್ತಿ ಸ್ಮರಿಸಿದರು.

  • #WATCH | Prime Minister Narendra Modi received an enthusiastic welcome from members of the Indian community in Cairo, during his two-day State visit to Egypt. pic.twitter.com/FfDSIPOLXS

    — ANI (@ANI) June 24, 2023 " class="align-text-top noRightClick twitterSection" data=" ">

ಸಮಾಜದಲ್ಲಿನ ಸಾಮಾಜಿಕ, ಧಾರ್ಮಿಕ ಸಾಮರಸ್ಯ, ಉಗ್ರವಾದ ಮತ್ತು ಮೂಲಭೂತವಾದವನ್ನು ಎದುರಿಸುವ ವಿಷಯಗಳ ಬಗ್ಗೆಯೂ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮುನ್ನ ಮೋದಿ ಅವರು ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ ಅವರೊಂದಿಗೆ ದುಂಡು ಮೇಜಿನ ಸಭೆ ನಡೆಸಿದರು.

ಕೈರೋದಲ್ಲಿ ತಮ್ಮ ಮೊದಲ ಕಾರ್ಯಕ್ರಮದಲ್ಲಿ ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ ನೇತೃತ್ವದ ಈಜಿಪ್ಟ್ ಕ್ಯಾಬಿನೆಟ್​ನಲ್ಲಿ ಹೊಸದಾಗಿ ಸ್ಥಾಪಿಸಲಾದ ಭಾರತ ಘಟಕದೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಿದರು. ಸಭೆಯಲ್ಲಿ ಏಳು ಕ್ಯಾಬಿನೆಟ್ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

  • Honoured to have met the Grand Mufti of Egypt, His Eminence Prof. Shawky Ibrahim Allam. Had enriching discussions on India-Egypt ties, notably cultural and people-to-people linkages. pic.twitter.com/GMx4FCx2E0

    — Narendra Modi (@narendramodi) June 24, 2023 " class="align-text-top noRightClick twitterSection" data=" ">

ಸಭೆಯಲ್ಲಿ ವ್ಯಾಪಾರ ಮತ್ತು ಹೂಡಿಕೆ, ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್, ಐಟಿ, ಡಿಜಿಟಲ್ ಪಾವತಿ ವೇದಿಕೆಗಳು, ಫಾರ್ಮಾ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಗಾಢವಾಗಿಸುವ ಕುರಿತು ಚರ್ಚೆಗಳು ನಡೆದಿವೆ. ಈ ಸಮರ್ಪಿತ ಉನ್ನತ ಮಟ್ಟದ ಭಾರತ ಘಟಕವನ್ನು ಸ್ಥಾಪಿಸಿದ್ದಕ್ಕಾಗಿ ಮೋದಿ ಈಜಿಪ್ಟ್‌ಗೆ ಧನ್ಯವಾದ ಅರ್ಪಿಸಿದರು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ವಿಧಾನವನ್ನು ಶ್ಲಾಘಿಸಿದರು. ಸಭೆಯ ನಂತರ ಮೋದಿ ಕೈರೋದಲ್ಲಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದರು.

ಇದನ್ನೂ ಓದಿ: PM Modi in Egypt: ಅಮೆರಿಕ ನಂತರ ಪ್ರಧಾನಿ ಮೋದಿ ಈಜಿಪ್ಟ್‌ ಪ್ರವಾಸ: ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸಿದ ಈಜಿಪ್ಟ್ ಪಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.