ETV Bharat / international

ಬಿಮ್​ಸ್ಟೆಕ್​ಗೆ ಭಾರತದಿಂದ ಒಂದು ಮಿಲಿಯನ್ ಡಾಲರ್ ನೆರವು : ಪ್ರಧಾನಿ ಮೋದಿ - ಬಿಮ್​​ಸ್ಟೆಕ್ ಐದನೇ ಶೃಂಗಸಭೆ

ಬಿಮ್​ಸ್ಟೆಕ್ ಶೃಂಗಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿದ್ದು, ಶ್ರೀಲಂಕಾ ಈ ಬಾರಿಯ ಶೃಂಗಸಭೆಯನ್ನು ಆಯೋಜಿಸುತ್ತಿದೆ. ಶೃಂಗಸಭೆಗೆ ತಯಾರಿ ನಡೆಸಲು ಹಿರಿಯ ಅಧಿಕಾರಿಗಳ ಸಭೆ ಮಾರ್ಚ್​ 28ರಂದು ನಡೆದಿತ್ತು..

PM Modi BIMSTEC summit address
ಬಿಮ್​ಸ್ಟೆಕ್​ಗೆ ಭಾರತದಿಂದ ಒಂದು ಮಿಲಿಯನ್ ಡಾಲರ್ ನೆರವು: ಪ್ರಧಾನಿ ಮೋದಿ
author img

By

Published : Mar 30, 2022, 12:01 PM IST

Updated : Mar 30, 2022, 1:14 PM IST

ನವದೆಹಲಿ : ಪ್ರಾದೇಶಿಕ ಭದ್ರತೆ ಈಗ ಅತ್ಯಂತ ಮುಖ್ಯವಾಗಿದ್ದು, ಯೂರೋಪ್ ಖಂಡದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಶಾಂತಿಗೆ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಈ ಸಂದರ್ಭದಲ್ಲಿ ಪ್ರಾದೇಶಿಕ ಸಹಕಾರ ಅಭಿವೃದ್ಧಿ ಹೆಚ್ಚಿನ ಆದ್ಯತೆಯಾಗಿದೆ. ಈ ಕಾರಣದಿಂದ ನಾವು ಬಿಮ್​ಸ್ಟೆಕ್ (BIMSTEC) ನಿಯಮಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

5ನೇ ಬಿಮ್‌ಸ್ಟೆಕ್ ಶೃಂಗಸಭೆಯ ಪ್ರಾದೇಶಿಕ ಬಣ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ಭಾರತವು ಬಿಮ್​​ಸ್ಟೆಕ್ ಸೆಕ್ರೆಟರಿಯೇಟ್‌ಗೆ ಅದರ ಕಾರ್ಯಾಚರಣೆ ಅನ್ನು ಹೆಚ್ಚಿಸಲು ಒಂದು ಮಿಲಿಯನ್ ಅಮೆರಿಕನ್ ಡಾಲರ್​ಗಳನ್ನು ನೀಡುತ್ತದೆ. ಸೆಕ್ರೆಟರಿಯಟ್‌ನ ಸಾಮರ್ಥ್ಯವನ್ನು ಬಲಪಡಿಸುವುದು ಮುಖ್ಯವಾಗಿದೆ.

ಇದಕ್ಕಾಗಿ ಬಿಮ್​​ಸ್ಟೆಕ್​ನ ಪ್ರಧಾನ ಕಾರ್ಯದರ್ಶಿಗೆ ಮಾರ್ಗಸೂಚಿ ರಚಿಸಲು ಮನವಿ ಮಾಡುತ್ತೇವೆ. ನಳಂದ ಇಂಟರ್‌ನ್ಯಾಶನಲ್ ಯೂನಿವರ್ಸಿಟಿ ನೀಡುವ ಬಿಮ್​ಸ್ಟೆಕ್​ ಸ್ಕಾಲರ್​ಶಿಪ್​ ಕಾರ್ಯಕ್ರಮ ವಿಸ್ತರಿಸಲು ನಾವು ಕೆಲಸ ಮಾಡುತ್ತೇವೆ' ಎಂದು ಭರವಸೆ ನೀಡಿದ್ದಾರೆ. ಬಿಮ್​​ಸ್ಟೆಕ್​ ಶೃಂಗಸಭೆಯಲ್ಲಿ ಮಾತನಾಡಿದ ಭೂತಾನ್ ಪಿಎಂ ಡಾ.ಲೋಟೇ ಶೇರಿಂಗ್, ನಮಗೆ ಕೋವಿಡ್ ಲಸಿಕೆಗಳನ್ನು ನೀಡಿದ್ದಕ್ಕಾಗಿ ಪ್ರಧಾನಿ ಮೋದಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಈ ಲಸಿಕೆಗಳು ಕೋವಿಡ್​ನಿಂದ ನಮಗೆ ರಕ್ಷಣೆ ಒದಗಿಸಿವೆ. ನಮ್ಮ ದೇಶದಲ್ಲಿ ಶೇ.90ಕ್ಕಿಂತ ಹೆಚ್ಚು ಮಂದಿ ನಾಗರಿಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಎಲ್ಲರಿಗೂ ರಕ್ಷಣೆ ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಏ.1 ರಂದು ರಾಜ್ಯಕ್ಕೆ ಅಮಿತ್ ಶಾ ಭೇಟಿ: ಸಿದ್ಧಗಂಗಾ ಮಠದಲ್ಲಿ ನಡೆಯಲಿರುವ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿ

ಇನ್ನು ಬಿಮ್​ಸ್ಟೆಕ್ ಶೃಂಗಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿದ್ದು, ಶ್ರೀಲಂಕಾ ಈ ಬಾರಿಯ ಶೃಂಗಸಭೆಯನ್ನು ಆಯೋಜಿಸುತ್ತಿದೆ. ಶೃಂಗಸಭೆಗೆ ತಯಾರಿ ನಡೆಸಲು ಹಿರಿಯ ಅಧಿಕಾರಿಗಳ ಸಭೆ ಮಾರ್ಚ್​ 28ರಂದು ನಡೆದಿತ್ತು. ಇದಾದ ನಂತರ ಬಿಮ್​​ಸ್ಟೆಕ್ ವಿದೇಶಾಂಗ ಮಂತ್ರಿಗಳ ಸಭೆ ಮಾರ್ಚ್ 29ರಂದು ನಡೆದಿತ್ತು. ಭಾರತ, ಬಾಂಗ್ಲಾದೇಶ, ಭೂತಾನ್, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್ ಮತ್ತು ಥಾಯ್ಲೆಂಡ್​ ಬಿಮ್ಸ್​ಸ್ಟೆಕ್​ನ ಸದಸ್ಯ ರಾಷ್ಟ್ರಗಳಾಗಿವೆ.

Last Updated : Mar 30, 2022, 1:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.