ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬ್ರಿಕ್ಸ್ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಂಡರು. ಐದು ಸದಸ್ಯರ ಬಣದ ಇತರ ನಾಯಕರೊಂದಿಗೆ ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚಿಸಿದರು.
ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ಗೆ ನಾಲ್ಕು ದಿನಗಳ ಭೇಟಿಗಾಗಿ ಮೋದಿ ಮಂಗಳವಾರ ಇಲ್ಲಿಗೆ ಆಗಮಿಸಿದರು. ಮೋದಿ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಮಟಮೆಲಾ ಸಿರಿಲ್ ರಮಾಫೋಸಾ ಅವರ ಆಹ್ವಾನದ ಮೇರೆಗೆ (ಆಗಸ್ಟ್ 22ರಿಂದ 24ರವರೆಗೆ) ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದರು.
-
"BRICS Business Forum gave opportunity to highlight India’s growth trajectory" : PM Modi
— ANI Digital (@ani_digital) August 22, 2023 " class="align-text-top noRightClick twitterSection" data="
Read @ANI Story | https://t.co/GU5AtdEFeQ#PMModi #BRICS #India #SouthAfrica pic.twitter.com/wqZmqBpTFn
">"BRICS Business Forum gave opportunity to highlight India’s growth trajectory" : PM Modi
— ANI Digital (@ani_digital) August 22, 2023
Read @ANI Story | https://t.co/GU5AtdEFeQ#PMModi #BRICS #India #SouthAfrica pic.twitter.com/wqZmqBpTFn"BRICS Business Forum gave opportunity to highlight India’s growth trajectory" : PM Modi
— ANI Digital (@ani_digital) August 22, 2023
Read @ANI Story | https://t.co/GU5AtdEFeQ#PMModi #BRICS #India #SouthAfrica pic.twitter.com/wqZmqBpTFn
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಿಂದ ಟ್ವೀಟ್: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸತತ ಮೂರು ವರ್ಷಗಳ ವರ್ಚುಯಲ್ ಸಭೆಗಳ ನಂತರ ಇದು ಮೊದಲ ವ್ಯಕ್ತಿಗತ ಬ್ರಿಕ್ಸ್ (BRICS) ಶೃಂಗಸಭೆಯಾಗಿದೆ. "ಬ್ರಿಕ್ಸ್ ಒಳಗಿನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಬ್ರಿಕ್ಸ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದಾರೆ. ವಿಶೇಷ ಅತಿಥಿಗೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಫೊಸಾ ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಸಾಮಾಜಿಕ ಜಾಲತಾಣವಾದ 'ಎಕ್ಸ್'ನಲ್ಲಿ ಬರೆದಿದ್ದಾರೆ.
-
"No doubt that in coming years, India will be growth engine of the world": PM Modi at BRICS
— ANI Digital (@ani_digital) August 22, 2023 " class="align-text-top noRightClick twitterSection" data="
Read @ANI Story | https://t.co/AD2Y8ykk1N#PMModi #BRICS #GlobalSouth #SouthAfrica #India pic.twitter.com/37j5aXKT4q
">"No doubt that in coming years, India will be growth engine of the world": PM Modi at BRICS
— ANI Digital (@ani_digital) August 22, 2023
Read @ANI Story | https://t.co/AD2Y8ykk1N#PMModi #BRICS #GlobalSouth #SouthAfrica #India pic.twitter.com/37j5aXKT4q"No doubt that in coming years, India will be growth engine of the world": PM Modi at BRICS
— ANI Digital (@ani_digital) August 22, 2023
Read @ANI Story | https://t.co/AD2Y8ykk1N#PMModi #BRICS #GlobalSouth #SouthAfrica #India pic.twitter.com/37j5aXKT4q
"ಪ್ರಧಾನಿ ಮೋದಿ ಅವರು, ಇತರ ಬ್ರಿಕ್ಸ್ ನಾಯಕರೊಂದಿಗೆ ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚಿಸುತ್ತಾರೆ. ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಕಂಡು ಹಿಡಿಯಲು ಬ್ರಿಕ್ಸ್ ವೇದಿಕೆ ಬಳಸಿಕೊಳ್ಳುತ್ತಾರೆ" ಎಂದು ಅವರು ಹೇಳಿದರು.
ಸ್ವಾಮಿನಾರಾಯಣ ದೇವಸ್ಥಾನದ ಮಾದರಿ ವೀಕ್ಷಿಸಿದ ಮೋದಿ: ಇದಕ್ಕೂ ಮುನ್ನ ಬ್ರಿಕ್ಸ್ ಬ್ಯುಸಿನೆಸ್ ಫೋರಂ ನಾಯಕರ ಸಂವಾದದಲ್ಲಿ ಪ್ರಧಾನಿ ಭಾವಹಿಸಿದ್ದರು. ಈ ಸಂವಾದದಲ್ಲಿ ಭಾಗವಹಿಸುವ ಮುನ್ನ ಪ್ರಧಾನಿ ಮೋದಿ ಇಲ್ಲಿ ನಿರ್ಮಾಣ ಹಂತದಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದ ಮಾದರಿ ವೀಕ್ಷಿಸಿದರು.
"ಬ್ರಿಕ್ಸ್ ಬ್ಯುಸಿನೆಸ್ ಫೋರಂ (BRICS Business Forum) ನನಗೆ ಭಾರತದ ಬೆಳವಣಿಗೆ ಪಥವನ್ನು ಹೈಲೈಟ್ ಮಾಡಲು ಅವಕಾಶವನ್ನು ನೀಡಿತು. ಸುಲಭ ವ್ಯವಹಾರ ಮತ್ತು ಸಾರ್ವಜನಿಕ ಸೇವೆ ವಿತರಣೆಯನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳನ್ನು ಎತ್ತಿ ತೋರಿಸಿದೆ. ಡಿಜಿಟಲ್ ಪಾವತಿಗಳು, ಮೂಲಸೌಕರ್ಯ ಸೃಷ್ಟಿ, ಸ್ಟಾರ್ಟ್‌ಅಪ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ದಾಪುಗಾಲುಗಳನ್ನು ಇರಿಸಿದೆ'' ಪ್ರಧಾನಿ ಮೋದಿ ಹೇಳಿದರು.
"ಭಾರತವು ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಅನ್ನು ನಂಬುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಐಟಿ, ಸೆಮಿಕಂಡಕ್ಟರ್‌ಗಳು ಮತ್ತು ಅಂತಹ ಭವಿಷ್ಯದ ಕ್ಷೇತ್ರಗಳಲ್ಲಿ ಅಪಾರ ಪ್ರಗತಿ ಸಾಧಿಸಿದ್ದೇವೆ. ನಮ್ಮ ಆರ್ಥಿಕ ದೃಷ್ಟಿಕೋನವು ಮಹಿಳೆಯರ ಸಬಲೀಕರಣಕ್ಕೆ ಅಪಾರ ಪ್ರಾಮುಖ್ಯತೆಯನ್ನು ನೀಡುತ್ತದೆ'' ಎಂದು ಮೋದಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತಿಳಿಸಿದರು.
-
"Hegemony by some countries...": Chinese Minister at BRICS Business Forum as Xi Jinping skips
— ANI Digital (@ani_digital) August 23, 2023 " class="align-text-top noRightClick twitterSection" data="
Read @ANI Story | https://t.co/53EXWwCdIS#BRICS #GlobalSouth #ChineseMinister #XiJinping pic.twitter.com/CNWMkXgmXF
">"Hegemony by some countries...": Chinese Minister at BRICS Business Forum as Xi Jinping skips
— ANI Digital (@ani_digital) August 23, 2023
Read @ANI Story | https://t.co/53EXWwCdIS#BRICS #GlobalSouth #ChineseMinister #XiJinping pic.twitter.com/CNWMkXgmXF"Hegemony by some countries...": Chinese Minister at BRICS Business Forum as Xi Jinping skips
— ANI Digital (@ani_digital) August 23, 2023
Read @ANI Story | https://t.co/53EXWwCdIS#BRICS #GlobalSouth #ChineseMinister #XiJinping pic.twitter.com/CNWMkXgmXF
ವಾಣಿಜ್ಯ ಸಚಿವ ವಾಂಗ್ ವೆಂಟಾವೊ ಹೇಳಿದ್ದೇನು?: ಬ್ರಿಕ್ಸ್ (BRICS) ಗುಂಪು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶವನ್ನು ಒಳಗೊಂಡಿದೆ. ಇನ್ನೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಮಂಗಳವಾರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಬಿಸಿನೆಸ್ ಫೋರಂನಲ್ಲಿ ಕಾಣಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ಜೋಹಾನ್ಸ್‌ಬರ್ಗ್‌ನ ಮಾಧ್ಯಮ ವರದಿಗಳು ತಿಳಿಸಿವೆ. ಜೋಹಾನ್ಸ್‌ಬರ್ಗ್‌ನ ಸ್ಯಾಂಡ್‌ಟನ್ ಕನ್ವೆನ್ಷನ್ ಸೆಂಟರ್‌ನಲ್ಲಿ ಕ್ಸಿ ಜಿನ್‌ಪಿಂಗ್ ಅವರ ಪರವಾಗಿ, ವಾಣಿಜ್ಯ ಸಚಿವ ವಾಂಗ್ ವೆಂಟಾವೊ ಮಾತನಾಡಿ, ಪ್ರಾಬಲ್ಯದ ಕಡೆಗೆ ಯುಎಸ್ ಅನ್ನು ಟೀಕಿಸುವ ಭಾಷಣ ಮಾಡಿದರು. ''ಜಾಗತಿಕ ವ್ಯವಹಾರಗಳು ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ತಮ್ಮ ಪ್ರಾಬಲ್ಯ ಬೆದರಿಸುವ ದೇಶಗಳ ವಿರುದ್ಧ ಹೋರಾಡಲು ಅಮೆರಿಕ ಒಲವು ತೋರಿದೆ'' ಎಂದು ಅವರು ಹೇಳಿದರು.
ಯುಎಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ: ''ಪ್ರತಿಯೊಂದು ದೇಶವೂ ಅಭಿವೃದ್ಧಿ ಹೊಂದುವ ಹಕ್ಕು ಹೊಂದಿದ್ದು, ಜನರು ಸಂತೋಷದ ಜೀವನವನ್ನು ನಡೆಸುವ ಸ್ವಾತಂತ್ರ್ಯವನ್ನು ಹೊಂದಿರಬೇಕು ಎಂದರು. ಆದರೆ, ಒಂದು ದೇಶವು ಪ್ರಾಬಲ್ಯ ಕಾಯ್ದುಕೊಳ್ಳುವ ಗೀಳನ್ನು ಹೊಂದಿದೆ. ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ದುರ್ಬಲಗೊಳಿಸಲು ಹೊರಟಿದೆ'' ಎಂದು ವಾಣಿಜ್ಯ ಸಚಿವ ವಾಂಗ್ ವೆಂಟಾವೊ ಅಮೆರಿಕ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. (ಪಿಟಿಐ)
ಇದನ್ನೂ ಓದಿ: ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್: ಬ್ರಿಕ್ಸ್ ಬಿಸಿನೆಸ್ ಫೋರಂನಲ್ಲಿ ಪ್ರಧಾನಿ ಮೋದಿ