ಬೈರುತ್: ಲೆಬನಾನ್‌ನ ದಕ್ಷಿಣ ಗ್ರಾಮವಾದ ಅಲ್ಮಾ ಅಲ್-ಶಾಬ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದ ಲೆಬನಾನಿನ ಛಾಯಾಗ್ರಾಹಕರೊಬ್ಬರು ಸಾವನ್ನಪ್ಪಿದ್ದು, ಇತರ ಆರು ವರದಿಗಾರರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಪತ್ರಕರ್ತರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಇಸ್ರೇಲ್ ಪಡೆಗಳು ದಾಳಿ ಮಾಡಿದ್ದು, ರಾಯಿಟರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಲೆಬನಾನಿನ ಛಾಯಾಗ್ರಾಹಕ ಇಸಾಮ್ ಅಬ್ದಲ್ಲಾ ಮೃತಪಟ್ಟಿದ್ದಾರೆ. ಏಜೆನ್ಸ್ ಫ್ರಾನ್ಸ್-ಪ್ರೆಸ್ (ಎಎಫ್‌ಪಿ) ಮತ್ತು ಅಲ್-ಜಜೀರಾ ಟಿವಿ ಚಾನೆಲ್ ಸೇರಿದಂತೆ ಅಂತಾರಾಷ್ಟ್ರೀಯ ಏಜೆನ್ಸಿಗಳಲ್ಲಿ ಕೆಲಸ ಮಾಡುತ್ತಿದ್ದ ಇತರ ಆರು ವರದಿಗಾರರು ಗಾಯಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆಯ ವರದಿ ಶುಕ್ರವಾರ ತಿಳಿಸಿದೆ.
ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಪ್ರಕಾರ, ಗಾಯಗೊಂಡ ಜನರನ್ನು ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ. ಲೆಬನಾನ್‌ನ ಮಂತ್ರಿಗಳ ಕೌನ್ಸಿಲ್, ಪ್ರಧಾನ ಮಂತ್ರಿ ನಜೀಬ್ ಮಿಕಾಟಿ ಅವರು ನೀಡಿದ ಹೇಳಿಕೆಯಲ್ಲಿ, ಇಸ್ರೇಲ್ ಲೆಬನಾನ್ ಮೇಲೆ ನಡೆಸಿದ ದಾಳಿ ವೇಳೆ, ನೇರವಾಗಿ ಪತ್ರಕರ್ತರನ್ನು ಗುರಿಯಾಗಿಸಿಕೊಂಡಿದ್ದನ್ನ ಖಂಡಿಸಿದರು. ಗಾಯಗೊಂಡ ವರದಿಗಾರರು ಶೀಘ್ರ ಚೇತರಿಸಿಕೊಳ್ಳಲಿ ಎಂದೂ ಅವರು ಹೇಳಿದ್ದಾರೆ.
ದಕ್ಷಿಣ ಲೆಬನಾನ್‌ನಲ್ಲಿ ಹೆಚ್ಚಿದ ಇಸ್ರೇಲ್ ಆಕ್ರಮಣ: ಲೆಬನಾನ್‌ನ ನ್ಯಾಷನಲ್ ನ್ಯೂಸ್ ಏಜೆನ್ಸಿ (ಎನ್‌ಎನ್‌ಎ) ಪ್ರಕಾರ, ಅಲ್-ಧಹಿರಾ, ಅಲ್ಮಾ ಅಲ್-ಶಾಬ್ ಮತ್ತು ಯಾರಿನ್ ಪಟ್ಟಣಗಳ ಸುತ್ತಲಿನ ಪ್ರದೇಶಗಳ ಮೇಲೆ ಬಾಂಬ್ ದಾಳಿ ಮಾಡುವ ಮೂಲಕ ಇಸ್ರೇಲ್, ಶುಕ್ರವಾರ ದಕ್ಷಿಣ ಲೆಬನಾನ್‌ನಲ್ಲಿ ತನ್ನ ಆಕ್ರಮಣವನ್ನು ಮತ್ತಷ್ಟು ಹೆಚ್ಚಿಸಿದೆ. ಎನ್ಎನ್ಎ ಪ್ರಕಾರ, ಅಲ್ಮಾ ಅಲ್-ಶಾಬ್ನ ಹೊರವಲಯದಲ್ಲಿ ಬಾಂಬ್ ಸ್ಫೋಟವು ಭಾರಿ ಬೆಂಕಿಗೆ ಕಾರಣವಾಯಿತು. ಹಲವಾರು ದಕ್ಷಿಣ ಲೆಬನಾನಿನ ಪಟ್ಟಣಗಳ ಮೇಲೆ ಶುಕ್ರವಾರ ನಡೆದ ದಾಳಿಗಳಿಗೆ ಪ್ರತಿಯಾಗಿ, ನಾಲ್ಕು ಇಸ್ರೇಲಿ ಗಡಿ ಸೈಟ್‌ಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಹಿಬ್ಜುಲ್ಲಾ ಘೋಷಿಸಿತು. ಲೆಬನಾನ್‌ನಲ್ಲಿ ಹಿಬ್ಜುಲ್ಲಾ ಪ್ರದೇಶಗಳ ಮೇಲೆ ದಾಳಿ ಮಾಡಲು ಇಸ್ರೇಲಿ ಸೇನೆಯು ಡ್ರೋನ್ ಅನ್ನು ಬಳಸಲು ಮುಂದಾಗಿದೆ.
ಲೆಬನಾನ್-ಇಸ್ರೇಲಿ ಗಡಿಯಲ್ಲಿ ಉದ್ವಿಗ್ನತೆ: ಅಕ್ಟೋಬರ್ 8 ರಂದು ಲೆಬನಾನ್-ಇಸ್ರೇಲಿ ಗಡಿಯಲ್ಲಿನ ಉದ್ವಿಗ್ನತೆಯು ಉಲ್ಬಣಗೊಂಡಿತು. ಅಕ್ಟೋಬರ್ 8 ರಂದು ಹಿಬ್ಜುಲ್ಲಾ ಶೆಬಾ ಫಾರ್ಮ್ಸ್‌ನಲ್ಲಿರುವ ಮಿಲಿಟರಿ ಪ್ರದೇಶಗಳ ಮೇಲೆ ಕ್ಷಿಪಣಿಗಳ ಮಳೆಯನ್ನೆ ಸುರಿಸಲಾಗಿದೆ. ನಂತರ ಹಮಾಸ್ ಇಸ್ರೇಲಿ ಪಟ್ಟಣಗಳ ಮೇಲೆ ಹಠಾತ್ ದಾಳಿ ನಡೆಸಿತು. ಅಕ್ಟೋಬರ್ 9 ರಂದು ಪರಿಸ್ಥಿತಿ ಮತ್ತೆ ಉಲ್ಬಣಗೊಂಡಿತು. ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ ಚಳವಳಿಯ (PIJ) ಮಿಲಿಟರಿ ವಿಭಾಗವಾದ ಅಲ್-ಕುಡ್ಸ್ ಬ್ರಿಗೇಡ್‌ಗಳ ಸದಸ್ಯರು ಲೆಬನಾನ್‌ನಿಂದ ಉತ್ತರ ಇಸ್ರೇಲ್‌ಗೆ ನುಸುಳಿದರು. ಇಸ್ರೇಲಿ ಪಡೆಗಳೊಂದಿಗೆ ಘರ್ಷಣೆ ನಡೆದರು. ಇಸ್ರೇಲ್ ಸೈನಿಕರು ದಕ್ಷಿಣ ಲೆಬನಾನ್‌ನಲ್ಲಿ ಹಲವಾರು ಪ್ರದೇಶಗಳ ದಾಳಿ ಮಾಡಿ, ಮೂರು ಹಿಬ್ಜುಲ್ಲಾ ಸದಸ್ಯರನ್ನು ಕೊಂದು ಹಾಕಿದ್ದಾರೆ.
ಇದಕ್ಕೆ ಪ್ರತಿಯಾಗಿ, ಅಕ್ಟೋಬರ್ 9 ರ ಸಂಜೆ ಉತ್ತರ ಇಸ್ರೇಲ್‌ನಲ್ಲಿರುವ ಇಸ್ರೇಲಿ ಪ್ರಣಿತ್ ಮತ್ತು ಅವಿವಿಮ್ ಬ್ಯಾರಕ್‌ಗಳ ಮೇಲೆ ಹಿಜ್ಬುಲ್ಲಾ ಕ್ಷಿಪಣಿಗಳು ಮತ್ತು ಮಾರ್ಟರ್ ಶೆಲ್‌ಗಳಿಂದ ದಾಳಿ ಮಾಡಿದೆ. ಅಕ್ಟೋಬರ್ 11 ರಂದು, ಹಿಬ್ಜುಲ್ಲಾ ಲೆಬನಾನಿನ ಗಡಿಯ ಸಮೀಪವಿರುವ ಅಲ್-ಜರ್ದಾಹ್ ನ ಇಸ್ರೇಲಿ ಮಿಲಿಟರಿ ಸೈಟ್ ಮೇಲೆ ಕ್ಷಿಪಣಿಗಳ ಮೂಲಕ ದಾಳಿ ಮಾಡಲಾಗಿಯಿತು. ಶೆಲ್ ದಾಳಿಯಿಂದ ಇಸ್ರೇಲಿ ಪಡೆಗಳಲ್ಲಿ ಅನೇಕ ಸಾವುನೋವುಗಳನ್ನು ಉಂಟಾಗಿವೆ ಎಂದು ಹೇಳಿತು.
ಇದನ್ನೂ ಓದಿ: ಹಮಾಸ್ ಉಗ್ರರ ಮೇಲೆ ಕಾರು ಹತ್ತಿಸಿ ಬದುಕುಳಿದ ಇಸ್ರೇಲಿಗ!