ETV Bharat / international

ಪೆರು ರಾಜಕೀಯ ಬಿಕ್ಕಟ್ಟು.. ಪೊಲೀಸ್ ಅಧಿಕಾರಿಯನ್ನು ಸುಟ್ಟು ಕೊಂದ ಪ್ರತಿಭಟನಾಕಾರರು - etv bharat kannada

ಪೆರುವಿನಲ್ಲಿ ಭುಗಿಲೆದ್ದ ಆಂತರಿಕ ಗಲಭೆ - ಪೊಲೀಸ್ ಅಧಿಕಾರಿಗೆ ಬೆಂಕಿ ಹಚ್ಚಿ ಕೊಂದ ಗಲಭೆಕೋರರು - ಪ್ರತಿಭಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 47ಕ್ಕೇರಿಕೆ

ಪೆರು ರಾಜಕೀಯ ಬಿಕ್ಕಟ್ಟು: ಪೊಲೀಸ್ ಅಧಿಕಾರಿಯನ್ನು ಸುಟ್ಟು ಕೊಂದ ಪ್ರತಿಭಟನಾಕಾರರು!
peru-political-crisis-death-toll-rises-policeman-burnt-to-death-amid-antigovernment-unrest
author img

By

Published : Jan 11, 2023, 5:53 PM IST

ಲಿಮಾ (ಪೆರು): ಮಾಜಿ ಅಧ್ಯಕ್ಷ ಪೆಡ್ರೊ ಕ್ಯಾಸ್ಟಿಲ್ಲೊ ಅವರನ್ನು ಪದಚ್ಯುತಗೊಳಿಸಿದ ಹಿನ್ನೆಲೆ ಪೆರು ದೇಶದಲ್ಲಿ ಆಂತರಿಕ ಬಿಕ್ಕಟ್ಟು ಎದುರಿಸುತ್ತಿದೆ. ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ಪ್ರತಿಭಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆಯಾಗಿದ್ದು, ಪೆರುವಿಯನ್ ಪ್ರಾಂತ್ಯದ ಪುನೊದಲ್ಲಿ ಪ್ರತಿಭಟನಾಕಾರರು ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ದಾಳಿ ನಡೆಸಿ ಸುಟ್ಟು ಕೊಂದು ಹಾಕಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. 29 ವರ್ಷದ ಪೊಲೀಸ್ ಅಧಿಕಾರಿ ಜೋಸ್ ಲೂಯಿಸ್ ಸೊಂಕೊ ಕ್ವಿಸ್ಪೆ ಅವರು ಸೋಮವಾರ ರಾತ್ರಿ ಬೊಲಿವಿಯಾ ಮತ್ತು ಟಿಟಿಕಾಕಾ ಸರೋವರದ ಗಡಿಯ ಸಮೀಪವಿರುವ ಜೂಲಿಯಾಕಾದಲ್ಲಿ ಸಹ ಅಧಿಕಾರಿಯೊಂದಿಗೆ ಗಸ್ತು ತಿರುಗುತ್ತಿದ್ದರು. ಅದೇ ಸಮಯದಲ್ಲಿ ಗುಂಪೊಂದು ಅವರ ಮೇಲೆ ದಾಳಿ ಮಾಡಿ ಅವರ ವಾಹನಕ್ಕೆ ಬೆಂಕಿ ಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಸ್ತು ಕಾರಿನಲ್ಲಿದ್ದ ಸೊಂಕೊ ಅವರ ಸಹವರ್ತಿ ರೊನಾಲ್ಡ್ ವಿಲ್ಲಾಸಾಂಟೆ ಟೋಕ್ ಈ ಬಗ್ಗೆ ಮಾತನಾಡಿ, ಕೆಲ ಜನರನ್ನು ಸುಮಾರು 350 ಪ್ರತಿಭಟನಾಕಾರರು ಸೇರಿ ಬಂಧಿಸಿದ್ದಾರೆ ಮತ್ತು ಅವರ ಮೇಲೆ ದೈಹಿಕವಾಗಿ ದಾಳಿ ಮಾಡಿದ್ದಾರೆ ಎಂದು ಹೇಳಿದರು. ಥಳಿಸಿದ ನಂತರ ವಿಲ್ಲಾಸಾಂಟೆ ತಲೆಗೆ ಅನೇಕ ಗಾಯಗಳಾಗಿದ್ದವು. ನಂತರ ಅವರನ್ನು ಲಿಮಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತನ್ನ ಸಹವರ್ತಿ ಸೊಂಕೊ ಅವರಿಗೆ ಏನಾಗಿದೆ ಎಂಬುದು ಬಗ್ಗೆ ತನಗೆ ತಿಳಿದಿಲ್ಲ ಎಂದು ಅವರು ಹೇಳಿದರು.

ದೇಶದ ಸಂಸತ್ ಅಧಿವೇಶನದಲ್ಲಿ ಸೊಂಕೊ ಅವರ ಸಾವನ್ನು ಪ್ರಧಾನಿ ಅಲ್ಬರ್ಟೊ ಒಟಾರೊಲಾ ದೃಢಪಡಿಸಿದರು. ಪ್ರತಿಭಟನಾಕಾರರ ದಾಳಿಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದಾಗ ಒಬ್ಬ ಅಧಿಕಾರಿಯನ್ನು ಥಳಿಸಿ ಕಟ್ಟಿಹಾಕಿರುವುದನ್ನು ನೋಡಿದ್ದರು. ಆದರೆ ಇನ್ನೊಬ್ಬ ಅಧಿಕಾರಿ ಲೂಯಿಸ್ ಸೊಂಕೊ ಕ್ವಿಸ್ಪೆ ಅಷ್ಟರಲ್ಲೇ ಸಾವಿಗೀಡಾಗಿದ್ದರು. ಅವರ ಗಸ್ತು ಕಾರಿನಲ್ಲಿಯೇ ಅವರನ್ನು ಜೀವಂತವಾಗಿ ಸುಡಲಾಯಿತು.

ಗಲಭೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಅಲ್ಬರ್ಟೊ ಒಟಾರೊಲಾ, ಪುನೋದಲ್ಲಿ ಮೂರು ದಿನಗಳ ಕಾಲ ರಾತ್ರಿ 8 ರಿಂದ ಬೆಳಗ್ಗೆ 4 ಗಂಟೆಯವರೆಗೆ ಕರ್ಫ್ಯೂ ಘೋಷಿಸಿದ್ದಾರೆ. ಇನ್ನು ಮೃತ ಪೊಲೀಸ್ ಅಧಿಕಾರಿಯ ಗೌರವಾರ್ಥ ಪುನೋದಲ್ಲಿ ಶೋಕಾಚರಣೆ ಘೋಷಿಸಲಾಗಿದೆ. ಕ್ಯಾಸ್ಟಿಲ್ಲೊ ಅವರನ್ನು ವಜಾಗೊಳಿಸಿದ ನಂತರ ಡಿಸೆಂಬರ್ ಆರಂಭದಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಪೊಲೀಸರೊಂದಿಗೆ ಘರ್ಷಣೆಯಲ್ಲಿ 39 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ರಸ್ತೆ ಅಪಘಾತಗಳಲ್ಲಿ ಇನ್ನೂ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೆರುವಿನ ಒಂಬುಡ್ಸ್‌ಮನ್ ಕಚೇರಿ ಹೇಳಿದೆ.

ಜೂಲಿಯಾಕಾದಲ್ಲಿ ಸೋಮವಾರ 17 ಜನರನ್ನು ಕೊಲೆಗೈದ ನಂತರ ಪೊಲೀಸ್ ಅಧಿಕಾರಿಯನ್ನು ಹತ್ಯೆಗೈಯಲಾಗಿದೆ. ದೇಶದ ನಿರ್ಲಕ್ಷಿತ ಗ್ರಾಮೀಣ ಪ್ರದೇಶಗಳಲ್ಲಿ ತಕ್ಷಣದ ಚುನಾವಣೆಗಳನ್ನು ನಡೆಸುವಂತೆ ಕೋರಿ ಪ್ರತಿಭಟನೆಗಳು ಪುನಾರಂಭಗೊಂಡಿವೆ. ಕ್ಯಾಸ್ಟಿಲ್ಲೊ ಅಧ್ಯಕ್ಷರಾಗುವ ಮುನ್ನ ಆಂಡಿಯನ್ ಎತ್ತರದ ಪ್ರದೇಶದಲ್ಲಿ ಎರಡು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ರು. ಅಧ್ಯಕ್ಷರಾಗುವುದಕ್ಕೂ ಮುನ್ನ ಇವರು ಅಂಥ ರಾಜಕೀಯ ಅನುಭವಿಯೇನೂ ಆಗಿರಲಿಲ್ಲ. ಆದರೆ 2021 ರಲ್ಲಿ ನಡೆದ ಚುನಾವಣೆಯಲ್ಲಿ ಅತಿ ಅಲ್ಪ ಅಂತರದಲ್ಲಿ ಕ್ಯಾಸ್ಟಿಲ್ಲೊ ಜಯ ಸಾಧಿಸಿದ್ದರು. ಈ ಗೆಲುವು ಪೆರುವಿನ ರಾಜಕೀಯವನ್ನೇ ಬದಲಾಯಿಸಿತು. ಅಲ್ಲದೆ ಇದರಿಂದ ರಾಜಧಾನಿ ಲಿಮಾ ನಿವಾಸಿಗಳು ಮತ್ತು ದೀರ್ಘ ಕಾಲದಿಂದ ನಿರ್ಲಕ್ಷಿಸಲ್ಪಟ್ಟ ಗ್ರಾಮಾಂತರ ಪ್ರದೇಶದ ಜನರ ನಡುವಿನ ಜಗಳ ಮತ್ತಷ್ಟು ಹೆಚ್ಚಾಯಿತು.

ಇದನ್ನೂ ಓದಿ: ಪ್ರವಾಸಿಗರನ್ನು ಹೊತ್ತ ವಿಮಾನ ಪತನ: 7 ಜನ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.