ETV Bharat / international

ತೋಷಾಖಾನಾ ಪ್ರಕರಣ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಿಇಸಿ 5 ವರ್ಷ ನಿಷೇಧ - ಮಾಜಿ ಪ್ರಧಾನಿ ಇಮ್ರಾನ್ ಖಾನ್  ಅನರ್ಹ

ತೋಷಾಖಾನಾ ಗಿಫ್ಟ್​ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸುಳ್ಳು ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು (Pakistan Election Commission ) ಅವರನ್ನು ಅನರ್ಹಗೊಳಿಸುವ ಜತೆಗೆ ಅವರ ವಿರುದ್ಧ ಕಾನೂನು ಕ್ರಮಕ್ಕೂ ಶಿಫಾರಸು ಮಾಡಿದೆ.

Pakistans Election Commission disqualifies former PM
ತೋಷಾಖಾನಾ ಗಿಫ್ಟ್​ ಪ್ರಕರಣದಲ್ಲಿಇಮ್ರಾನ್ ಖಾನ್
author img

By

Published : Oct 21, 2022, 6:38 PM IST

Updated : Oct 21, 2022, 7:00 PM IST

ಇಸ್ಲಾಮಾಬಾದ್: ತೋಷಖಾನಾ ಗಿಫ್ಟ್​ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಚುನಾವಣೆ ಆಯೋಗವು (Pakistan Election Commission) ಅವರನ್ನು ಅನರ್ಹಗೊಳಿಸುವ ಜತೆಗೆ ಅವರ ವಿರುದ್ಧ ಕಾನೂನು ಕ್ರಮಕ್ಕೂ ಶಿಫಾರಸು ಮಾಡಿದೆ.

ವಿದೇಶಿ ನಾಯಕರು ಅಥವಾ ಶ್ರೀಮಂತ ಅರಬ್ ರಾಷ್ಟ್ರಗಳಿಂದ ಪಡೆದ ಉಡುಗೊರೆಗಳ ಮಾರಾಟದಿಂದ ಬಂದ ಹಣವನ್ನು ಬಚ್ಚಿಟ್ಟಿದ್ದಕ್ಕಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಭಾರಿ ಹಿನ್ನಡೆಯಾಗಿದೆ. ತೋಷಾಖಾನ್ ಪ್ರಕರಣದಡಿ ಪಾಕಿಸ್ತಾನದ ಉನ್ನತ ಚುನಾವಣಾ ಸಂಸ್ಥೆ ಶುಕ್ರವಾರ ಇಮ್ರಾನ್​ ಖಾನ್ ಅವರನ್ನು ಐದು ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯಿಂದ ಅನರ್ಹಗೊಳಿಸಿದೆ.

ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ನೇತೃತ್ವದ 5 ಸದಸ್ಯರ ಪೀಠ ಸರ್ವಾನುಮತದ ತೀರ್ಪಿನ ನಂತರ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷರು, ಐದು ವರ್ಷಗಳ ಕಾಲ ಸಂಸತ್ತಿನ ಸದಸ್ಯರಾಗಲು ಸಾಧ್ಯವಿಲ್ಲ. ತೋಷಖಾನಾ ಗಿಫ್ಟ್​ ಪ್ರಕರಣದಲ್ಲಿ ತಪ್ಪು ಮಾಹಿತಿ ಘೋಷಣೆ ಹಿನ್ನೆಲೆ ಮಾಜಿ ಪ್ರಧಾನಿ ಇಮ್ರಾನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದೆ.

ಐವರು ಸದಸ್ಯರ ಪೀಠವು ಸರ್ವಾನುಮತದಿಂದ ಈ ನಿರ್ಧಾರವನ್ನು ಕೈಗೊಂಡಿದೆ. ಆದರೆ, ಸದಸ್ಯರು ಘೋಷಣೆಗೆ ಹಾಜರಾಗಿರಲಿಲ್ಲ. 70 ವರ್ಷದ ಖಾನ್ ವಿರುದ್ಧ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಶಾಸಕರು ಆಗಸ್ಟ್‌ನಲ್ಲಿ ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ (ಇಸಿಪಿ) ದೂರು ನೀಡಿದ್ದರು. ರಿಯಾಯಿತಿ ದರದಲ್ಲಿ ಖರೀದಿಸಿದ ಉಡುಗೊರೆಗಳ ಮಾರಾಟದಿಂದ ಆದಾಯವನ್ನು ಬಹಿರಂಗಪಡಿಸಲು ವಿಫಲರಾದ ಕಾರಣ ಅವರನ್ನು ಅನರ್ಹಗೊಳಿಸುವಂತೆ ಕೋರಿದ್ದರು. ತೋಷಾಖಾನ್ ಗಿಪ್ಟ್​ ಪ್ರಕರಣವನ್ನು ಆಲಿಸಿದ ಇಸಿಪಿ ಹಿಂದಿನ ಸೆ. 19 ರಂದು ವಿಚಾರಣೆಯ ಮುಕ್ತಾಯದ ತೀರ್ಪನ್ನು ಕಾಯ್ದಿರಿಸಿತ್ತು. ಇಸಿಪಿಯ ಪೀಠವು ಶುಕ್ರವಾರ, ಖಾನ್ ಅವರು ತೋಷಖಾನಾ ಪ್ರಕರಣದ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು ಸಂಸತ್ತಿನ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ತೀರ್ಪು ನೀಡಿತು. ಈ ತೀರ್ಪು ಹೊರಬಿದ್ದ ಬಳಿಕ ಪಿಟಿಐ ನಾಯಕ ಫವಾದ್ ಚೌಧರಿ ಅವರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸಲು ಸಾರ್ವಜನಿಕರನ್ನು ತಮ್ಮ ಮನೆಗಳಿಂದ ಹೊರಗೆ ಬರುವಂತೆ ಮನವಿ ಮಾಡಿದರು.ಈ ನಿರ್ಧಾರವನ್ನು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಘೋಷಿಸಿದರು.

ಆಗಸ್ಟ್‌ನಲ್ಲಿ ಆಡಳಿತಾರೂಢ ಪಾಕಿಸ್ತಾನಿ ಡೆಮಾಕ್ರಟಿಕ್ ಶಾಸಕರ ನಿಯೋಗವು ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ (ECP) ದೂರು ಸಲ್ಲಿಸಿ, ಇಮ್ರಾನ್ ಖಾನ್ ಅವರ ತೋಷಾಖಾನ್ ಗಿಫ್ಟ್ ಪ್ರಕರಣವನ್ನು ಬಹಿರಂಗಪಡಿಸಬೇಕು. ತೋಷಾಖಾನ್ ದಿಂದ ರಿಯಾಯಿತಿ ದರದಲ್ಲಿ ಖರೀದಿಸಿದ ಉಡುಗೊರೆಗಳ ಮಾರಾಟದಿಂದ ಬಂದ ಆದಾಯವನ್ನು ಬಹಿರಂಗಪಡಿಸಲು ವಿಫಲರಾಗಿದ್ದ ಖಾನ್ ಅವರನ್ನು ಅನರ್ಹಗೊಳಿಸಬೇಕೆಂದು ದೂರಿನಲ್ಲಿ ತಿಳಿಸಿದ್ದರು.

ತೋಷಾಖಾನ್ ಗಿಪ್ಟ್​ ಪ್ರಕರಣ :2018 ರಲ್ಲಿ ಪ್ರಧಾನಿಯಾಗಿ ಇಮ್ರಾನ್ ಖಾನ ಅಧಿಕಾರ ವಹಿಸಿಕೊಂಡ ಬಳಿಕ ಪಡೆದ ನಾನಾ ದೇಶಗಳಿಂದ ದುಬಾರಿ ಉಡುಗೊರೆಗಳನ್ನು ಪಡೆದಿದ್ದರು. ಅವುಗಳನ್ನು ದೇಶದ ತೋಷಾಖಾನ್ ಭಂಡಾರದಲ್ಲಿ ಠೇವಣಿ ಇಡಲಾಗಿತ್ತು. 2.15 ಕೋಟಿ ರೂಪಾಯಿ ಪಾವತಿಸಿ ರಾಜ್ಯದ ಖಜಾನೆಯಿಂದ ಖರೀದಿಸಿದ್ದರು. ನಂತರ ಉಡುಗೊರೆಗಳ ಮಾರಾಟದಿಂದ ಬಂದ ಸುಮಾರು 5.8 ಕೋಟಿ ರೂ.ಗೆ ಉಡುಗೊರೆಗಳನ್ನು ಮಾರಾಟ ಮಾಡಿದ್ದರು. ಆ ಉಡುಗೊರೆಗಳಲ್ಲಿ ಗ್ರಾಫ್ ಕೈಗಡಿಯಾರ, ದುಬಾರಿ ಪೆನ್, ಉಂಗುರ ಮತ್ತು ನಾಲ್ಕು ರೋಲೆಕ್ಸ್ ವಾಚ್‌ಗಳು ಸೇರಿವೆ. ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಉಡುಗೊರೆ ಮಾರಾಟವನ್ನು ತೋರಿಸಲು ಇಮ್ರಾನ್ ಖಾನ್ ವಿಫಲರಾಗಿದ್ದರು.

ತೋಷಾಖಾನ್​:1974 ರಲ್ಲಿ ಸ್ಥಾಪಿತ ತೊಷಾಖಾನಾವು ಕ್ಯಾಬಿನೆಟ್ ವಿಭಾಗದ ಆಡಳಿತ ನಿಯಂತ್ರಣದಲ್ಲಿರುವ ಇಲಾಖೆ. ಇತರ ಸರ್ಕಾರಗಳು ಮತ್ತು ರಾಜ್ಯಗಳ ಮುಖ್ಯಸ್ಥರು ಸಂಸದರು, ಅಧಿಕಾರಿಗಳು ಮತ್ತು ಅಧಿಕಾರಿಗಳಿಗೆ ನೀಡಿದ ಅಮೂಲ್ಯ ಉಡುಗೊರೆಗಳನ್ನು ಸಂಗ್ರಹಿಸುತ್ತದೆ.

ಇದನ್ನೂ ಓದಿ ಸೌದಿ ಸರ್ಕಾರದ ನೀತಿ ಟೀಕಿಸಿದ್ದಕ್ಕೆ ಅಮೆರಿಕದ ಪ್ರಜೆಗೆ 16 ವರ್ಷ ಕಠಿಣ ಶಿಕ್ಷೆ

Last Updated : Oct 21, 2022, 7:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.